HEALTH TIPS

ಎಂ.ಟೆಕ್.ನಲ್ಲಿ ಚಿನ್ನದ ಪದಕ ಪಡೆದ ಪ್ರಜ್ಞಾ ಬೊಳುಂಬು

         ಬದಿಯಡ್ಕ: ಬದಿಯಡ್ಕ ಸಮೀಪದ ಬೊಳುಂಬು ಪ್ರಜ್ಞಾ ಬಿ. ಇವರಿಗೆ ಎಂ.ಟೆಕ್ ಪದವಿಯಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಚಿನ್ನದ ಪದಕ ಲಭಿಸಿದೆ. ಉತ್ತಮ ಅಧ್ಯಯನ ಹವ್ಯಾಸಗಳನ್ನು ಸದಾ ರೂಢಿಸಿಕೊಂಡು ಪ್ರಾಥಮಿಕ ಶಿಕ್ಷಣವನ್ನು ಬದಿಯಡ್ಕ ಚಿನ್ಮಯ ವಿದ್ಯಾಲಯ, ಸಂತ ಬಾರ್ತಲೋಮಿಯಾ ಶಾಲೆ ಬೇಳ, ಪದವಿಪೂರ್ವ ಶಿಕ್ಷಣ ಎಡನೀರು ಸ್ವಾಮೀಜೀಸ್ ವಿದ್ಯಾಸಂಸ್ಥೆಯಲ್ಲಿ, ನಂತರ ಬಿ.ಎಸ್.ಸಿ.ಪದವಿ ಶಿಕ್ಷಣವನ್ನು ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದಾರೆ. ಸತತ ಪರಿಶ್ರಮದಿಂದ ಎಂ.ಟೆಕ್. ಪದವಿಯಲ್ಲೂ ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಪಡೆದಿರುವುದು ಹೆತ್ತವರಿಗೆ, ಕಲಿಸಿದ ಗುರುಗಳಿಗೆ, ಊರಿನವರಿಗೆ ಹಾಗೂ ಗಡಿನಾಡು ಕಾಸರಗೋಡಿನ ಜನತೆಗೆ ಹೆಮ್ಮೆಯ ವಿಚಾರವಾಗಿದೆ. ಈಕೆ ಬದಿಯಡ್ಕ ಸಮೀಪ ವಾಸವಾಗಿರುವ ಅಧ್ಯಾಪಕ ದಂಪತಿಗಳಾದ ಬೊಳುಂಬು ದಿನೇಶ, ಗಾನಲತಾ ದಂಪತಿಗಳ  ಪುತ್ರಿ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries