ಕಾಸರಗೋಡು: ನಗರದ ಕೂಡ್ಲು ಮೀಪುಗುರಿಯಲ್ಲಿ ವಿದ್ಯಾರ್ಥಿನಿ ಮೃತದೇಹ ಗುರುವಾರ ಮನೆಯೊಳಗೆ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಲ್ಲಿನ ಶೆಟ್ಟಿಗದ್ದೆ ನಿವಾಸಿ ಗಿರೀಶ್-ದೀಪಿಕಾ ದಂಪತಿ ಪುತ್ರಿ ಪೃಥ್ವಿಕಾ(19)ಮೃತಪಟ್ಟ ವಿದ್ಯಾರ್ಥಿನಿ. ಮಂಗಳೂರಿನ ಖಾಸಗಿ ಕಾಲೇಜೊಂದರ ಪದವಿ ವಿದ್ಯಾರ್ಥಿನಿಯಾಗಿದ್ದರು. ಮೂರು ದಿವಸಗಳ ಹಿಂದೆಯಷ್ಟೇ ಮಂಗಳೂರಿನ ಖಾಸಗಿ ಕಾಲೇಜಿಗೆ ಸೇರ್ಪಡೆಗೊಂಡಿದ್ದರು. ಪೃಥ್ವಿಕಾ ಗುರುವಾರ ಕಾಲೇಜಿಗೆ ತೆರಳದೆ, ಮನೆಯಲ್ಲೇ ಉಳಿದುಕೊಂಡಿದ್ದರು. ಮಧ್ಯಾಹ್ನ ಮನೆಯೊಳಗೆ ನೇಣಿನಲ್ಲಿ ನೇತಾಡುತ್ತಿದ್ದ ಪೃಥ್ವಿಕಾಳನ್ನು ತಕ್ಷಣ ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕಾಸರಗೋಡು ನಗರ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.


