ಮಂಜೇಶ್ವರ: ಮಂಜೇಶ್ವರದ ಹೊಸಂಗಡಿಯಲ್ಲಿ ಹಾಡ ಹಗಲು ಪಾದಚಾರಿ ಮಹಿಳೆ ಕತ್ತಿನಿಂದ ಎರಡೂಕಾಲು ಪವನಿನ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಠಾಣಾ ವ್ಯಾಪ್ತಿಯ ಬಂಬ್ರಾಣ ನಿವಾಸಿ ಎ. ಸಂದೀಪ್ (31) ಬಂಧಿತ. ಪ್ರಕರಣದ ಇನ್ನೊಬ್ಬ ಆರೋಪಿ, ಸಂದೀಪ್ ಸಹಚರನಿಗಾಗಿ ಹುಡುಕಾಟ ನಡೆಯುತ್ತಿದೆ.
ಹೊಸಂಗಡಿ ಎಸ್. ಬಿ. ಐ ಬೇಂಕಿನ ಬಳಿಯ ಸರ್ವೀಸ್ ರಸ್ತೆಯಲ್ಲಿ ಸೋಮವಾರ ನಡೆದುಹೋಗುತ್ತಿದ್ದ ಪೈವಳಿಕೆ ಬಾಯಿಕಟ್ಟೆ ನಿವಾಸಿ ನಯನ (30) ಎಂಬ ಮಹಿಳೆ ಸನಿಹ ದಾರಿ ಕೇಳುವ ನೆಪದಲ್ಲಿ ಬೈಕಲ್ಲಿ ಆಗಮಿಸಿದ ಆರೋಪಿಗಳು ಕತ್ತಿನಿಂದ ಎರಡೂ ಕಾಲು ಪವನ್ ತೂಕದ ಚಿನ್ನದ ಸರ ಎಳೆದೊಯ್ದು ಪರಾರಿಯಾಗಿದ್ದರು. ಸೋ ಮಳೆ ಕೋಟು ಧರಿಸಿ, ಹೆಲ್ಮೆಟ್ ತೊಟ್ಟು ಬಂದ ಆರೋಪಿಗಳು ಈ ಕೃತ್ಯ ಎಸಗಿದ್ದರು.

