ಕಾಸರಗೋಡು: ಗಾಂಧಿ ಜಯಂತಿ ಅಂಗವಾಗಿ ನಡೆಸಿದ್ದ ಆನ್ ಲೈನ್ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರ ಜೀವನ ಸಂದೇಶವನ್ನು ಹೊಸ ತಲೆಮಾರಿಗೆ ಹಸ್ತಾಂತರಿಸುವ ಉದ್ದೇಶದಿಂದ ಕಾಸರಗೋಡು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ ಈ ಸ್ಪರ್ಧೆಗಳು ಜರುಗಿದ್ದುವು.
ಭಾಷಣ ಸ್ಪರ್ಧೆಯಲ್ಲಿ ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಷಾರೋನ್ ಜೋಸೆಫ್ ಪ್ರಥಮ, ಪೆರಿಯ ನವೋದಯ ಶಾಲೆಯ ಆರ್ಯಾ ನಾರಾಯಣನ್ ದ್ವಿತೀಯ ಬಹುಮಾನ ಗಳಿಸಿದರು. ಕವಿತಾಲಾಪನೆಯಲ್ಲಿ ನೀಲೇಶ್ವರ ಹೈಯರ್ ಸೆಕೆಂಡರಿ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಭಗತ್ ಜೀವನ್ ಪ್ರಥಮ, ಬಳಾಂತೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿವರಂಜಿನಿ ಪಿ.ವಿ. ದ್ವಿತೀಯ ಬಹುಮಾನ ಪಡೆದರು. ಗಾಂಧಿ ವೇಷ ಸ್ಪರ್ಧೆಯಲ್ಲಿ ಫಿಯೋನ್ ರಾಡ್ರಿಗಸ್ ಪ್ರಥಮ, ಅಜಿತ್ ದೇವ್ ದ್ವಿತೀಯ ಬಹುಮಾನ ಪಡೆದರು. ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಅರ್ಹತಾಪತ್ರ ವಿತರಿಸಲಾಯಿತು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಬಹುಮಾನ ವಿತರಣೆ ನಡೆಸಿದರು. ಅರ್ಹತಾಪತ್ರ ಲಭಿಸದೇ ಇರುವವರು ಜಿಲ್ಲಾ ವಾರ್ತಾ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.




