ಕಾಸರಗೋಡು: ಶಿಶು ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲೆಯ ಶಿಶು ಕಲ್ಯಾಣ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ಹೈಯರ್ ಸೆಕೆಂಡರಿ, ಪ್ರೌಢಶಾಲೆ, ಹಿರಿಯ-ಕಿರಿಯ ಪ್ರಾಥಮಿಕ ವಿಭಾಗ ವಿದ್ಯಾರ್ಥಿಗಳಿಗಾಗಿ ವಿವಿಧ ಸಾಹಿತ್ಯ ಸ್ಪರ್ಧೆಗಳು ನಡೆಯಲಿವೆ.
ಕನ್ನಡ ಮತ್ತು ಮಲೆಯಾಳಂ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆಗಳು ಜರಗಲಿವೆ.
ಕಥಾ ರಚನೆ ಸ್ಪರ್ಧೆ: ಕಿರಿಯ ಪ್ರಾಥಮಿಕ ವಿಭಾಗದಲ್ಲಿ "ಅಂದಿನ ಯಾತ್ರೆ" ಎಂಬ ವಿಷಯದಲ್ಲಿ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ""ಎಲ್ಲೆಲ್ಲೋ ಹುಡುಕಿದೆ", ಪ್ರೌಢಶಾಲೆ ವಿಭಾಗದಲ್ಲಿ "ಅಮ್ಮ ತೊಟ್ಟಿಲು", ಹೈಯರ್ ಸೆಕೆಂಡರಿ ವಚಿಭೌಆಗದಲ್ಲಿ "ಮರೆತು ಹೋದ ಬಹುಮಾನ" ಎಂಬ ವಿಷಯಗಳಲ್ಲಿ ಸ್ಪರ್ಧೆ ನಡೆಯಲಿದೆ.
ಕವಿತಾ ರಚನೆ ಸ್ಪರ್ಧೆ: ಕಿರಿಯ ಪ್ರಾಥಮಿಕ ವಿಭಾಗದಲ್ಲಿ "ಮಿಂಚಿನ ಹುಳ","ಹಿರಿಯ ಪ್ರಾಥಮಿಕ ವಿಭಾಗದಲ್ಲಿ"ಮಳೆಯ ದುಃಖ", ಪ್ರೌಢಶಾಲೆ ವಿಭಾಗದಲ್ಲಿ" ಮರುದಡದ ಹುಡುಕಾಟ", ಹೈಯರ್ ಸೆಕೆಂಡರಿ ವಿಭಾಗದಲ್ಲಿ "ಗಡಿಗಳು ತಿಳಿಸುತ್ತಿರುವುದು" ಎಂಬ ವಿಷಯಗಳಲ್ಲಿ ಸ್ಪರ್ಧೆ ಜರುಗಲಿವೆ.
ಪ್ರಬಂಧ ರಚನೆ ಸ್ಪರ್ಧೆ: ಕಿರಿಯ ಪ್ರಾಥಮಿಕ ವಿಭಾಗದಲ್ಲಿ "ಶಾಲಾ ಕಲೋತ್ಸದವ", ಹಿರಿಯ ಪ್ರಾಥಮಿಕ ವಿಭಾಗದಲ್ಲಿ "ಕೋವಿಡ್ ಅವಧಿ ನಮಗೆ ಕಲಿಸಿದುದು", ಪ್ರೌಢಶಾಲೆ ವಿಭಾಗದಲ್ಲಿ"ಭಾರತ: ಸ್ವಾತಂತ್ರ್ಯ ಮತ್ತು ಏಕತೆ", ಹೈಯರ್ ಸೆಕೆಂಡರಿ ವಿಭಾಗದಲ್ಲಿ "ಆಶ್ರಯಕೋರುತ್ತಿರುವವರು ಮತ್ತು ವರ್ತಮಾನ ಕಾಲ" ಎಂಬ ವಿಷಯದಲ್ಲಿ ಸ್ಪರ್ಧೆ ಇರುವುದು.
ರಚನೆಗಳು ಅ.28ರ ಮುಂಚಿತವಾಗಿ ಟಿ.ಎಂ.ಎ.ಕರೀಂ, ಕಾರ್ಯದರ್ಶಿ, ಕಾಸರಗೋಡು ಜಿಲ್ಲಾ ಶಿಶು ಕಲ್ಯಾಣ ಸಮಿತಿ , ಸಿವಿಲ್ ಸಟೇಷನ್ ವಿದ್ಯಾನಗರ, ಕಾಸರಗೋಡು, ಪಿನ್-671123. ಎಂಬ ವಿಳಾಸಕ್ಕೆ ಯಾ makareem11@gmail.com ಎಂಬ ಈ-ಮೇಲ್ ಗೆ , ಅಥವಾ 9961001616 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಕಳುಹಿಸಬೇಕು. ಕಲಿಯುತ್ತಿರುವ ಶಾಲೆ, ಕಲಿಯುತ್ತಿರುವ ತರಗತಿ, ಪಾಸ್ ಪೆÇೀರ್ಟ್ ಗಾತ್ರದ ಭಾವಚಿತ್ರ, ವಿಳಾಸ, ಮೊಬೈಲ್ ನಂಬ್ರ ಇರಬೇಕು. ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳಿಸುವವರು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವರು. ನ.14ರಂದು ನಡೆಯುವ ಮಕ್ಕಳ ಪಾರ್ಲಿಮೆಂಟ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವರು.





