ಕಾಸರಗೋಡು: ಕಾಸರಗೋಡು ಜಿಲ್ಲೆಯ ಸಂತುಲಿತ ಸ್ಥಳೀಯ ಅಭಿವೃದ್ಧಿಗೆ 5 ವರ್ಷದ ಕೃತಾರ್ಥತೆಯೊಂದಿಗೆ ನೇತೃತ್ವ ವಹಿಸಿದ ಅಭಿಮಾನದೊಂದಿಗೆ ಜಿಲ್ಲಾ ಯೋಜನೆ ಸಮಿತಿಯ ಅಂತಿಮ ಸಭೆ ಸಂಪನ್ನಗೊಂಡಿದೆ.
ರಾಜಕೀಯ ಪಕ್ಷಗಳ ಭೇದವಿಲ್ಲದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟಿನ ಚಟುವಟಿಕೆ ನಡೆಸಿದ ಜನಪ್ರತಿನಿಧಿಗಳು, ಸಿಬ್ಬಂದಿ, ಜಿಲ್ಲಾ ಯೋಜನೆ ಸಮಿತಿ ಸದಸ್ಯರು, ಜಿಲ್ಲಾ ಯೋಜನೆ ಕಚೇಋಇ ಸಿಬ್ಬಂದಿ ಯನ್ನು ಸಭೆ ಶ್ಲಾಘಿಸಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮುಖ್ಯಮಂತ್ರಿ ಅವರ ಮುಂದೆ ಪ್ರಥಮ ಬಾರಿಗೆ ಸಮಗ್ರ ಯೋಜನೆಯ ಮಾಹಿತಿ ಮಂಡಿಸಿ ಮಂಜೂರಾತಿ ಪಡೆದ ವಿಚಾರ ತಮಗೆ ಅಭಿಮಾನ ತಂದಿದೆ ಎಂದವರು ಈ ವೇಳೆ ತಿಳಿಸಿದರು. ಯೋಜನೆ ಮಂಡಳಿಯು ಪರಿಣತರು ಪಾಲೊಳಿಸಿ ಅಭಿವೃದ್ಧಿ ವಿಚಾರಸಂಕಿರಣ ನಡೆಸಿದೆ. ಜಿಲ್ಲೆಯ ಭೂಗರ್ಭ ಜಲ ಶೋಷಣೆ ತಡೆಯುವ ನಿಟ್ಟಿನಲ್ಲಿ ಯೋಜನೆಗೆ ರೂಪುರೇಷೆ ನೀಡಲಾಗಿದೆ ಎಂದರು.
ಇತಿ-ಮಿತಿಗಳ ನಡುವೆಯೂ ಜಿಲ್ಲೆಯ ಸಾರ್ವಜನಿಕ ವಲಯಗಳ ಅಭಿವೃದ್ಧಿಗೆ ಯತ್ನಗಳು ನಡೆದಿವೆ. ಪೆರಿಯ ಏರ್ ಸ್ಟ್ರಿಪ್ ಗಾಗಿ ಜಿಲ್ಲಾ ಪಂಚಾಯತ್ ಬಜೆಟ್ ನಲ್ಲಿ ನಿಧಿ ಮೀಸಲಿರಿಸಲಾಗಿದೆ. ರಾಜ್ಯ ಸರಕಾರ ಮತ್ತು ಕೇಂದ್ರ ವಿಮಾನ ಯಾನ ಮಂತ್ರಾಲಯದ ಪ್ರಾಥಮಿಕ ಮಂಜೂರಾತಿ ಪಡೆಯಲಾಗಿದೆ. ಕೇಂದ್ರೀಕೃತ ತ್ಯಾಜ್ಯ ನಿವಾರಣೆ ಗಾಗಿ ಬೃಹತ್ ಯೋಜನೆ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗಿದೆ. ಎಲ್ಲ ಚಟುವಟಿಕೆಗಳಿಗೂ ಡಿ.ಪಿ.ಸಿ. ಮೆಂಬರ್ ಸೆಕ್ರಟರಿ ಆಗಿರುವ ಜಿಲ್ಲಾಧಿಕಾರಿ ನೀಡಿರುವ ಸಕ್ರಿಯ ಬೆಂಬಲ ಎಂದಿಗೂ ಮರೆಯುವಂಥಾದ್ದಲ್ಲ ಎಂದವರು ನುಡಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಜಿಲ್ಲೆಯ ಸಾರ್ವಜನಿಕ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಜನಪ್ರತಿನಿಧಿಗಳು ತೋರುತ್ತಿರುವ ಆಸಕ್ತಿ ಸಾಮಾಜಿಕ ಅಭಿವೃದ್ಧಿಯಲ್ಲೂ ತೋರ್ಪಡಿಸಿದರೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಯೋಜನೆ ಸಮಿತಿಯ ಈ ವರೆಗಿನ ಚಟುವಟಿಕೆಗಳೆಲ್ಲವೂ ಅತ್ಯುತ್ತಮವಾದುವುಗಳು. ಕುಡಿಯುವ ನೀರಿನ ಲಭ್ಯತೆ, ನೌಭಕರಿ ಅವಕಶಗಳ ಸೃಷ್ಟಿ, ಶಿಶುಗಳ-ಮಹಿಳೆಯರ ಅಭಿವೃದ್ಧಿ ಮ ವಯೋವೃದ್ಧರ ಕಲ್ಯಾಣ ಚಟುವಟಿಕೆಗಳು, ಸುಭಿಕ್ಷ ಕೇರಳಂ ಸಹಿತ ಕೃಷಿ ಅಭಿವೃದ್ಧಿ ಯೋಜನೆಗಳಿಗೆ ರೂಪು ನೀಡುವುದು ಸಾಧ್ಯವಾಗಿದೆ ಎಂದವರು ತಿಳಿಸಿದರು.
ಒಗ್ಗಟ್ಟಿನ ಯತ್ನಗಳ ಫಲವಾಗಿ 5 ವರ್ಷಗಳ ಅವಧಿಯಲ್ಲಿ ಮಾದರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆಯಲು ಜಿಲ್ಲೆಗೆ ಸಾಧ್ಯವಾಗಿದೆ ಎಂದು ಡಿ.ಪಿ.ಸಿ. (ಸರಕಾರದಿಂದ ನೇಮಿತ) ಸಮಿತಿ ಸದಸ್ಯ ಕೆ.ಬಾಲಕೃಷ್ಣನ್ ತಿಳಿಸಿದರು. ಜಿಲ್ಲಾ ಯೋಜನೆ ಮುಖ್ಯಮಂತ್ರಿ ಅವರ ಮುಂದೆ ಪ್ರಸ್ತುತಪಡಿಸಲು ಸಾಧ್ಯವಾಗಿರುವ ಮೂಲಕ ಜಿಲ್ಲೆಯ ಸಾರ್ವತ್ರಿಕ ಅಭಿವೃದ್ಧಿಯ ದೃಷ್ಟಿಕೋನ ಸರಕಾರದ ಮುಂದೆ ಮಂಡಿಸಿದಂತಾಗಿದೆ ಎಂದವರು ವಿವರಿಸಿದರು.
ಗ್ರಾಮ ಪಂಚಾಯತ್ ಗಳಿಗೆ ಅತ್ಯುತ್ತಮ ಅಭಿವೃದ್ಧಿಯ ದೃಷ್ಟಿಕೋನ ಒದಗಿಸಲು ಯೋಜನೆ ಸಮಿತಿಗೆ ಸಾಧ್ಯವಾಗಿದೆ ಎಂದು ಗ್ರಾಮ ಪಂಚಾಯತ್ ಅಸೋಸಿಯೇಶನ್ ಅಧ್ಯಕ್ಷ ಎ.ಎ.ಜಲೀಲ್ ತಿಳಿಸಿದರು. ಬ್ಲಾಕ್ ಪಂಚಾಯತ್ ಅಸೊಸಿಯೇಶನ್ ಪರವಾಗಿ ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ವಿ.ಪಿ.ಜಾನಕಿ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಯೋಜನೆ ಪ್ರಭಾರ ಅಧಿಕಾರಿ ನೆನೋಜ್ ಮೇಪ್ಪಯಿಲ್ ಸ್ವಾಗತಿಸಿದರು. ಕೋವಿಡ್ ಸಂಹಿತೆಗಳನ್ನು ಪಾಲಿಸುವ ಮೂಲಕ ಜಿಲ್ಲಾ ಯೋಜನೆ ಸಮಿತಿ ಸಭಾಂಗಣದಲ್ಲಿ ಸಭೆ ಜರುಗಿತು. ಸಮಿತಿ ಸದಸ್ಯರು ನೇರವಾಗಿ, ನಗರಸಭೆ-ಗ್ರಾಮ ಪಂಚಾಯತ್ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಜಿಲ್ಲಾ ಮಟ್ಟದ ನಿರ್ವಹಣಾ ಸಿಬ್ಬಂದಿ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಆನ್ ಲೈನ್ ಮೂಲಕ ಹಾಜರಾದರು.
ತ್ರಿಸ್ತರ ಪಂಚಾಯತ್ ಗಳ ವಾರ್ಷಿಕ ಯೋಜನೆಗಳ ಬದಲಾಯಿತ ಯೋಜನೆಗಳಿಗೆ ಡಿ.ಪಿ.ಸಿ. ಸಭೆ ಮಂಜೂರಾತಿ ನೀಡಿದೆ. ಯೋಜನೆಗಳ ಪ್ರಗತಿಗಳ ಅವಲೋಕನ ನಡೆಸಲಾಗಿದೆ. 5 ವರ್ಷಗಳ ಅವಧಿಯ ಅಭಿವೃದ್ಧಿ ಸಾಧನೆಗಳನ್ನು ಪ್ರಸ್ತುತಪಡಿಸುವ ವೆಬಿನಾರ್ ಗಳು ಕಿಲಾ ಸಂಸ್ಥೆಯ ತಾಂತ್ರಿಕ ಸಹಾಯದೊಂದಿಗೆ ನಡೆಸಲು ನಿರ್ಧರಿಸಲಾಗಿದೆ. ನಾಡಿನ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಿಗೆ ಪೂರಕವಾದ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಜಿಲ್ಲಾ ಯೋಜನೆ ಸಮಿತಿಯ ಅಂತಿಮ ಸಭೆಯ ಸಭೆಯೂ ಅಜೆಂಡಾ ಪ್ರಕಟಿಸಿದೆ.




