ಲಂಡನ್:ಕೊರೊನಾ ಲಸಿಕೆ ಪ್ರಯೋಗಕ್ಕಾಗಿ ಹಲವು ಸ್ವಯಂಸೇವಕರು ಮುಂದೆ ಬಂದಿದ್ದಾರೆ.
ಆದರೆ ಇದೀಗ ಆರೋಗ್ಯಕರ ಸ್ವಯಂಸೇವಕರಿಗೆ ಕೊರೊನಾ ಸೋಂಕು ತಗುಲಿಸುವಂತಹ ವಿವಾದಾತ್ಮಕ ಪ್ರಯೋಗಕ್ಕೆ ತಜ್ಞರು ಮುಂದಾಗಿದ್ದಾರೆ.
ಡಿಸೆಂಬರ್ ಅಂತ್ಯಕ್ಕೆ 200-300 ಮಿಲಿಯನ್ ಕೋವಿಡ್ ಲಸಿಕೆ ಡೋಸ್ ಲಭ್ಯ: ಸೆರಮ್
ಕೊವಿಡ್-19 ಲಸಿಕೆಯ ಪ್ರಾಯೋಗಿಕ ಹಂತದಲ್ಲಿ ಲಸಿಕೆ ಪಡೆದ ಆರೋಗ್ಯಕರ ಸ್ವಯಂಸೇವಕರಿಗೆ ಕೊರೊನಾ ವೈರಸ್ ಸೋಂಕು ತಗುಲಿಸುವಂತಹ ವಿವಾದಾತ್ಮಕ ಪ್ರಯೋಗವನ್ನು ಪ್ರಾರಂಭಿಸಲು ಬ್ರಿಟನ್ ಸಂಶೋಧಕರು ಸಿದ್ಧತೆ ನಡೆಸಿದ್ದಾರೆ.
18 ರಿಂದ 30 ವರ್ಷದ ಆರೋಗ್ಯವಂತ ಸ್ವಯಂಸೇವಕರನ್ನು ಒಳಗೊಂಡ ಈ ಅಧ್ಯಯನವನ್ನು ವ್ಯವಹಾರ, ಇಂಧನ ಮತ್ತು ಕೈಗಾರಿಕಾ ಕಾರ್ಯತಂತ್ರ ಇಲಾಖೆ, ರಾಯಲ್ ಫ್ರೀ ಲಂಡನ್ ಎನ್‍ಎಚ್‍ಎಸ್ ಫೌಂಡೇಶನ್ ಟ್ರಸ್ಟ್ ಮತ್ತು ಎಚ್‍ವಿವೊ, ಕಂಪನಿಯ ಸಹಭಾಗಿತ್ವದಲ್ಲಿ ನಡೆಸಲಾಗುವುದು ಎಂದು ಲಂಡನ್‍ನ ಇಂಪೀರಿಯಲ್ ಕಾಲೇಜು ಮಂಗಳವಾರ ತಿಳಿಸಿದೆ.
ಚಾಲೆಂಜ್ ಸ್ಟಡಿ ಎಂದು ಕರೆಯಲ್ಪಡುವ ಈ ವಿಧಾನವು ಅತ್ಯಂತ ಅಪಾಯಕಾರಿಯಾಗಿದೆ. ಆದರೆ ಪ್ರತಿಪಾದಕರು ಇದು ಪ್ರಮಾಣಿತ ಸಂಶೋಧನೆಗಿಂತ ವೇಗವಾಗಿ ಫಲಿತಾಂಶಗಳನ್ನು ನೀಡಬಹುದು ಎಂದು ಹೇಳುತ್ತಾರೆ.
ಪ್ರಾಯೋಗಿಕ ಹಂತದಲ್ಲಿ ಲಸಿಕೆ ಪಡೆದ ಸ್ವಯಂಸೇವಕರಿಗೆ ಕೊರೊನಾ ಸೋಂಕು ತಗುಲುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆಯೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ. ಇದಕ್ಕಾಗಿ 33.6 ಮಿಲಿಯನ್ ಪೌಂಡ್ (.4 43.4 ಮಿಲಿಯನ್) ಹೂಡಿಕೆ ಮಾಡಲು ಬ್ರಿಟನ್ ಸರ್ಕಾರ ಸಿದ್ಧತೆ ನಡೆಸಿದೆ.





