ತಿರುವನಂತಪುರ: ರಾಜ್ಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳ ಆಂತರಿಕ ಚಟುವಟಿಕೆಗಳು ಗರಿಗೆದರತೊಡಗಿದ್ದು, ಇಂದು ತಿರುವನಂತಪುರದಲ್ಲಿ ನಡೆದ ಯುಡಿಎಫ್ ತುರ್ತು ಸಭೆಯಲ್ಲಿ ವಿಶೇಷ ವಿದ್ಯಮಾನಗಳು ನಡೆದು ಚಕಿತಗೊಳಿಸಿದೆ.
ಇಂದು ಸೇರಿದ ಸಭೆಯಲ್ಲಿ ಯುಡಿಎಫ್ ರಾಜ್ಯಾದ್ಯಂತ ಹೊಸ ಜಿಲ್ಲಾ ಸಮಿತಿಗಳ ಅಧ್ಯಕ್ಷರನ್ನು ಬದಲಾಯಿಸಿ ಹೊಸ ಸಮಿತಿಗೆ ರೂಪು ನೀಡಿ ಪ್ರಕಟಣೆ ಹೊರಡಿಸಿದೆ. ಫ್ಯಾಶನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣದ ಆರೋಪಿ, ಮಂಜೇಶ್ವರ ಶಾಸಕರೂ ಆಗಿರುವ ಎಂ.ಸಿ.ಕಮರುದ್ದೀನ್ ಅವರನ್ನು ಯುಡಿಎಫ್ ಕಾಸರಗೋಡು ಜಿಲ್ಲಾಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲಾಗಿದೆ. ಹೊಸ ಅಧ್ಯಕ್ಷರನ್ನಾಗಿ ಸಮರ್ಥ ನಾಯಕ ಸಿಟಿ ಅಹ್ಮದಾಲಿ ಅವರನ್ನು ನೇಮಕಗೊಳಿಸಲಾಗಿದೆ. ಕೊಟ್ಟಾಯಂ ನಲ್ಲಿ ಜೋಸೆಫ್ ಬಣದ ಮೋನ್ಸ್ ಜೋಸೆಫ್ ಅಧ್ಯಕ್ಷರಾಗಿದ್ದಾರೆ. ಜೋಸ್ ಬಣದ ಸನ್ನಿ ಠಾಕೆಡಮ್ ಅವರು ಕೊಟ್ಟಾಯಂ ಅಧ್ಯಕ್ಷರಾಗಿದ್ದರು. ಯುಡಿಎಫ್ ಜಿಲ್ಲಾ ಸಮಿತಿಗಳನ್ನು ಮರುಸಂಘಟಿಸಲಾಗಿದೆ ಎಂದು ಯುಡಿಎಫ್ ಕನ್ವೀನರ್ ಎಂ.ಎಂ.ಹಸನ್ ತಿಳಿಸಿದ್ದಾರೆ.
ಅಧ್ಯಕ್ಷರು ಮತ್ತು ಕನ್ವೀನರ್‍ಗಳ ವಿವರ:
ತಿರುವನಂತಪುರಂ:
ಅಧ್ಯಕ್ಷರು - ನ್ಯಾಯವಾದಿ.ಪಿ.ಕೆ.ವೇಣುಗೋಪಾಲ್
ಕನ್ವೀನರ್ - ಭೀಮಾಪಳ್ಳಿ ರಶೀದ್
ಕೊಲ್ಲಂ:
ಅಧ್ಯಕ್ಷರು - ಕೆ.ಸಿ.ರಾಜನ್
ಕನ್ವೀನರ್ - ನ್ಯಾಯವಾದಿ. ರಾಜೇಂದ್ರ ಪ್ರಸಾದ್
ಆಲಪ್ಪುಳ:
ಅಧ್ಯಕ್ಷರು - ಶಾಜಿ ಮೋಹನ್
ಕನ್ವೀನರ್ - ನಂತರ ಘೋಷಿಸಲಾಗುವುದು
ಪತ್ತನಂತಿಟ್ಟು:
ಅಧ್ಯಕ್ಷ ಎ.ಶಂಸುದ್ದೀನ್
ಕನ್ವೀನರ್ - ವಿಕ್ಟರ್ ಥಾಮಸ್
ಕೊಟ್ಟಾಯಂ:
ಅಧ್ಯಕ್ಷರು - ಮೊನ್ಸ್ ಜೋಸೆಫ್ ಶಾಸಕ
ಕನ್ವೀನರ್ - ಜೋಸಿ ಸೆಬಾಸ್ಟಿಯನ್
ಇಡುಕ್ಕಿ:
ಅಧ್ಯಕ್ಷರು - ನ್ಯಾಯವಾದಿ. ಅಶೋಕ್
ಕನ್ವೀನರ್ - ಎನ್.ಜೆ ಜಾಕೋಬ್
ಎರ್ನಾಕುಳಂ:
ಅಧ್ಯಕ್ಷರು - ಡೊಮಿನಿಕ್ ಪ್ರೆಸೆಂಟೇಶನ್
ಕನ್ವೀನರ್ - ಶಿಬು ತೆಕ್ಕಂಪುರಂ
ತ್ರಿಶೂರ್:
ಅಧ್ಯಕ್ಷರು - ಜೋಸೆಫ್ ಚಾಲಿಸ್ಸೆರಿ
ಕನ್ವೀನರ್ - ಕೆ.ಆರ್.ಗಿರಿಜನ್
ಪಾಲಕ್ಕಾಡ್:
ಅಧ್ಯಕ್ಷರನ್ನು ನಂತರ ಘೋಷಿಸಲಾಗುವುದು
ಕನ್ವೀನರ್ - ಕಲತಿಲ್ ಅಬ್ದುಲ್ಲಾ
ಮಲಪ್ಪುರಂ:
ಅಧ್ಯಕ್ಷರು - ಪಿ.ಟಿ. ಅಜಯ್ ಮೋಹನ್
ಕನ್ವೀನರ್ - ನ್ಯಾಯವಾದಿ. ಯು.ಎ.ಲತೀಫ್
ಕೋಝಿಕ್ಕೋಡ್:
ಅಧ್ಯಕ್ಷರು - ಕೆ.ಬಾಲನಾರಾಯಣನ್
ಕನ್ವೀನರ್ - ಎಂಎಂ ರಜಾಕ್ ಮಾಸ್ತರ್
ವಯನಾಡ್:
ಅಧ್ಯಕ್ಷರು - ಪಿಪಿಎ ಕರೀಮ್
ಕನ್ವೀನರ್ - ಎನ್ಡಿ ಅಪ್ಪಾಚನ್. ಮಾಜಿ ಶಾಸಕ
ಕಣ್ಣೂರು:
ಅಧ್ಯಕ್ಷರು - ಪಿಟಿ ಮ್ಯಾಥ್ಯೂ
ಕನ್ವೀನರ್ - ಅಬ್ದುಲ್ ಖಾದಿರ್ ಮೌಲವಿ
ಕಾಸರಗೋಡು:
ಅಧ್ಯಕ್ಷರು - ಸಿ.ಟಿ ಅಹ್ಮದ್ ಅಲಿ (ಮಾಜಿ ಸಚಿವ)
ಕನ್ವೀನರ್ - ಎ.ಗೋವಿಂದನ್ ನಾಯರ್




