ಕೊಚ್ಚಿ: ದುರ್ಗಾ ದೇವಿಯ ಮಾನಹಾನಿಕರ ಫೆÇೀಟೋ ಶೂಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೆÇೀಸ್ಟ್ ಮಾಡಿದ ಆರೋಪದ ಮೇಲೆ ಮಹಿಳಾ ಛಾಯಾಗ್ರಾಹಕಿಯೋರ್ವೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಿಂದೂ ಐಕ್ಯ ವೇದಿಯ ದೂರಿನ ಹಿನ್ನೆಲೆಯಲ್ಲಿ ಅಲುವಾದ ಮಹಿಳಾ ಛಾಯಾಗ್ರಾಹಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೇವಿಯ ಮಡಿಲಲ್ಲಿ ಮದ್ಯ ಮತ್ತು ಗಾಂಜಾ ಇರುವಂತೆ ಫೆÇೀಟೋಶೂಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನವರಾತ್ರಿಯ ಹಿನ್ನೆಲೆಯಲ್ಲಿ ಫೆÇೀಟೋ ಶೂಟ್ ಮಾಡಲಾಗಿದೆ ಎಂದು ಛಾಯಾಗ್ರಾಹಕಿ ಪ್ರತಿಕ್ರಿಯಿಸಿರುವರು. ನಂಬಿಕೆಯ ಮೇಲೆ ನೋಯಿಸುವ ವಿಚಾರಗಳನ್ನು ಬಳಸಿಕೊಂಡದ್ದಕ್ಕಾಗಿ ತಾನು ಪ್ರಾಮಾಣಿಕವಾಗಿ ವಿಶಾದಿಸುತ್ತೇನೆ ಮತ್ತು ಘಟನೆಯ ಮೂಲಕ ಎಂದು ಮಹಿಳೆ ಸಮಜಾಯಿಷಿಯನ್ನೂ ನೀಡಿದ್ದಾರೆ.
ಇದು ಯಾವುದೇ ಧರ್ಮವನ್ನು ಅಪರಾಧಿಯನ್ನಾಗಿ ಮಾಡುವ ಉದ್ದೇಶವನ್ನು ಚಿತ್ರ ಹೊಂದಿಲ್ಲ ಎಂದು ಅವರು ಹೇಳಿದರು. ಮಾಡೆಲ್ ವಿರುದ್ಧ ಪ್ರಕರಣ ದಾಖಲಿಸಬೇಕೆ ಎಂದು ಇನ್ನಷ್ಟೇ ನಿರ್ಧರಿಸಲಾಗುವುದು ಎಂದು ಪೆÇಲೀಸರು ತಿಳಿಸಿದ್ದಾರೆ.
ನವರಾತ್ರಿಗೆ ಸಂಬಂಧಿಸಿದಂತೆ ಚಿತ್ರಗಳನ್ನು ಛಾಯಾಗ್ರಾಹಕಿ ಸಾಮಾಜಿಕ ಮಾಧ್ಯಮದಲ್ಲಿ ಪೆÇೀಸ್ಟ್ ಮಾಡಿದ್ದರು. ಚಿತ್ರದ ವಿರುದ್ಧ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು ದೂರಿನ ಬಳಿಕ ಚಿತ್ರಗಳನ್ನು ಪುಟದಿಂದ ತೆಗೆದುಹಾಕಲಾಗಿದೆ.





