ತಿರುವನಂತಪುರ: ರಾಜ್ಯದ ಆರು ಸರ್ಕಾರಿ ಆಸ್ಪತ್ರೆಗಳಿಗೆ ರಾಷ್ಟ್ರೀಯ ಗುಣಮಟ್ಟ ಖಾತರಿ ಮಾನದಂಡ (ಎನ್‍ಕ್ಯೂಎಎಸ್) ಅನುಮೋದನೆ ನೀಡಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಶನಿವಾರ ಹೇಳಿದ್ದಾರೆ. ದೇಶದ ಪ್ರಮುಖ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೇರಳದಲ್ಲಿವೆ ಮತ್ತು ಕೇರಳ ಈ ಸಾಧನೆಯನ್ನು ರಾಜ್ಯ ಕಾಯ್ದುಕೊಳ್ಳಲಿದೆ ಎಂದು ಕೆ.ಕೆ.ಶೈಲಜಾ ಹೇಳಿರುವರು.
ಕಣ್ಣೂರು ಜಿಲ್ಲೆಯ ಮಾಟ್ಟೂಲ್ ಪ್ರಾಥಮಿಕ ಆರೋಗ್ಯ ಕೇಂದ್ರವು ಆರು ಆಸ್ಪತ್ರೆಗಳಲ್ಲಿ ಶೇ.95.8 ಅಂಕಗಳೊಂದಿಗೆ ಮುಂಚೂಣಿಯಲ್ಲಿದೆ. ಇದಲ್ಲದೆ ಕೊಲ್ಲಂ ಚತ್ತನ್ನೂರ್ ಕುಟುಂಬ ಆರೋಗ್ಯ ಕೇಂದ್ರ (ಶೇ 95.3), ಕೋಝಿಕ್ಕೋಡ್ ಪನಂಗಾಡ್ ಕುಟುಂಬ ಆರೋಗ್ಯ ಕೇಂದ್ರ (ಶೇ 93.5), ಕೊಟ್ಟಾಯಂ ವಾಳೂರ್ ಕುಟುಂಬ ಆರೋಗ್ಯ ಕೇಂದ್ರ (ಶೇ 92.9), ಕಣ್ಣೂರು ಮುಂಡೇರಿ ಕುಟುಂಬ ಆರೋಗ್ಯ ಕೇಂದ್ರ (ಶೇ.83.3),ಮಲಪ್ಪುರಂ ವಳಿಕ್ಕಡವು ಕುಟುಂಬ ಆರೋಗ್ಯ ಕೇಂದ್ರ(ಶೇ.83.3) ಎಂಬ ಆರೋಗ್ಯ ಕೇಂದ್ರಗಳಿಗೆ ರಾಷ್ಟ್ರೀಯ ಗುಣಮಟ್ಟ ಮಾನ್ಯತೆ ಲಭಿಸಿದೆ. ಎನ್‍ಕ್ಯೂಎಎಸ್ ರಾಷ್ಟ್ರೀಯ ಆರೋಗ್ಯ ಗುಣಮಟ್ಟದ ಮಾನ್ಯತೆಯಾಗಿದೆ ಇವುಗಳಿಗೆ ಲಭಿಸಿರುವುದು.
ಕೋವಿಡ್ ಸವಾಲುಗಳ ಮಧ್ಯೆಯೂ ರಾಜ್ಯದ ಆರೋಗ್ಯ ಕೇಂದ್ರಗಳು ದೇಶದ ಅತ್ಯುತ್ತಮ ಆಸ್ಪತ್ರೆಗಳಾಗಿ ತಮ್ಮ ಸ್ಥಾನಮಾನವನ್ನು ಉಳಿಸಿಕೊಂಡಿವೆ ಎಂದು ಆರೋಗ್ಯ ಸಚಿವರು ಹೇಳಿದರು. ಈ ಸಾಧನೆ ಆರೋಗ್ಯ ಕಾರ್ಯಕರ್ತರಿಗೆ ಮನ್ನಣೆಯಾಗಿದೆ ಎಂದು ಸಚಿವರು ಹೇಳಿದರು.
ಇಲ್ಲಿಯವರೆಗೆ, ರಾಜ್ಯದ 80 ಆರೋಗ್ಯ ಕೇಂದ್ರಗಳಿಗೆ ಎನ್‍ಕ್ಯೂಎಎಸ್ ಅನುಮೋದನೆ ನೀಡಲಾಗಿದೆ. ಪ್ರಸ್ತುತದ 12 ಆರೋಗ್ಯ 62 ಸೇರಿದಂತೆ ರಾಜ್ಯದ 62 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆ. ಇದಲ್ಲದೆ, ಮೂರು ಜಿಲ್ಲಾ ಆಸ್ಪತ್ರೆಗಳು, ನಾಲ್ಕು ತಾಲ್ಲೂಕು ಆಸ್ಪತ್ರೆಗಳು, ಐದು ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಆರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಾನ್ಯತೆ ಪಡೆದಿವೆ.
ಆಸ್ಪತ್ರೆಗಳ ಗುಣಮಟ್ಟದ ಪ್ರಮಾಣೀಕರಣವನ್ನು ಜಿಲ್ಲಾ ಮತ್ತು ರಾಜ್ಯಮಟ್ಟದ ತಪಾಸಣೆಯ ಬಳಿಕ ಎನ್‍ಎಚ್‍ಎಸ್‍ಆರ್‍ಸಿ ರಾಷ್ಟ್ರಮಟ್ಟದ ತಪಾಸಣೆ ಮಾಡಲಾಗುತ್ತದೆ.
ಕಾಸರಗೋಡು ಜಿಲ್ಲೆಯ ಕಯ್ಯೂರು ಸ್ಮಾರಕ ಕುಟುಂಬ ಆರೋಗ್ಯ ಕೇಂದ್ರ ಮತ್ತು ತಿರುವನಂತಪುರದ ಒಟ್ಟಶೇಖರಮಂಗಲಂ ಪುಳನಾಡ್ ಕುಟುಂಬ ಆರೋಗ್ಯ ಕೇಂದ್ರವು ಶೇ.99 ಅಂಕಗಳನ್ನು ಗಳಿಸಿದೆ. ಈ ಆಸ್ಪತ್ರೆಗಳು ಭಾರತದಲ್ಲೇ ಪ್ರಥಮ ಸ್ಥಾನದಲ್ಲಿವೆ. ಇದಲ್ಲದೆ, ಜಿಲ್ಲಾ ಆಸ್ಪತ್ರೆಗಳಾದ ಕೋಝಿಕ್ಕೋಡ್ ಡಬ್ಲ್ಯು ಆಂಡ್ ಸಿ ಆಸ್ಪತ್ರೆ ಮತ್ತು ಉಪ ಜಿಲ್ಲಾ ಆಸ್ಪತ್ರೆಯಾದ ಚಾಲಕ್ಕುಡಿ ತಾಲ್ಲೂಕು ಆಸ್ಪತ್ರೆ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಿ ಶೇ.98.7 ಅಂಕಗಳನ್ನು ಗಳಿಸಿದೆ. ಕಣ್ಣೂರು ಜಿಲ್ಲೆ ದೇಶದ 18 ಆರೋಗ್ಯ ಕೇಂದ್ರಗಳಿಗೆ ಅತ್ಯಧಿಕ ಎನ್‍ಕ್ಯೂಎಎಸ್ ಮಾನ್ಯತೆ ಹೊಂದಿದ ಏಕೈಕ ಜಿಲ್ಲೆಯೂ ಆಗಿದೆ.
ಆಸ್ಪತ್ರೆ ಸೇವೆಗಳು, ರೋಗಿಗಳ ಹಕ್ಕುಗಳು, ಇತರ ಸೇವೆಗಳು, ಕ್ಲಿನಿಕಲ್ ಸೇವೆಗಳು, ರೋಗ ನಿಯಂತ್ರಣ, ಗುಣಮಟ್ಟ ನಿರ್ವಹಣೆ ಮತ್ತು ಪರಿಣಾಮಗಳೇ ಸೇರಿದಂತೆ 6,500 ಕ್ಕೂ ಹೆಚ್ಚು ಪಾಯಿಂಟ್ ಗಳಲ್ಲಿ ಸ್ಕೋರ್‍ಬೋರ್ಡ್ ಮೌಲ್ಯಮಾಪನ ಮಾಡುತ್ತದೆ. ಅನುಮೋದನೆ ಅವಧಿ ಮೂರು ವರ್ಷಗಳು. ಮಾನ್ಯತೆ ಪಡೆದ ಆಸ್ಪತ್ರೆಗಳಿಗೆ ಕೇಂದದ ನೆರವುಗಳೂ ಲಭ್ಯವಾಗುವುದು.





