ತಿರುವನಂತಪುರ: ಕೇಳಿಬರುತ್ತಿರುವ ಕಳವಳಗಳ ಮಧ್ಯೆ ಕೇರಳದಲ್ಲಿ ಇಂದು 3757 ಮಂದಿಗೆ ಕೋವಿಡ್ ಖಚಿತಪಡಿಸಲಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದ ಮಾಹಿತಿಯನ್ನು ತಿಳಿಸಲಾಗಿದ್ದು ಕಾಸರಗೋಡು ಜಿಲ್ಲೆಯಲ್ಲಿ 32 ಮಂದಿ ಮಾತ್ರ ಇಂದು ಕೋವಿಡ್ ಖಚಿತವಾಗಿದೆ.
ಇಂದಿನ ಪಾಸಿಟಿವ್ ವಿವರಗಳು:
ಕೇರಳದಲ್ಲಿ ಇಂದು 3757 ಪ್ರಕರಣಗಳನ್ನು ಗುರುತಿಸಲಾಗಿದ್ದು ಅತೀ ಹೆಚ್ಚು ಮಲಪ್ಪುರಂ ಜಿಲ್ಲೆಯಲ್ಲಿ ದಾಖಲಾಗಿದೆ. ಮಲಪ್ಪುರಂ 1023, ಕೋಝಿಕ್ಕೋಡ್ 514, ಪಾಲಕ್ಕಾಡ್ 331, ಎರ್ನಾಕುಳಂ 325, ಕೊಟ್ಟಾಯಂ 279, ತ್ರಿಶೂರ್ 278, ಆಲಪ್ಪುಳ 259, ತಿರುವನಂತಪುರ 229, ಕೊಲ್ಲಂ 198, ಕಣ್ಣೂರು 144, ಪತ್ತನಂತಿಟ್ಟು 49, ವಯನಾಡ್ 39, ಕಾಸರಗೋಡು 32 ಮಂದಿಗಳಿಗೆ ಕೋವಿಡ್ ದೃಢಪಡಿಸಲಾಗಿದೆ.
ಗುಣಮುಖರಾದವರ ವಿವರ:
5425 ರೋಗಿಗಳ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 751, ಕೊಲ್ಲಂ 572, ಪತ್ತನಂತಿಟ್ಟು 173, ಆಲಪ್ಪುಳ 252, ಕೊಟ್ಟಾಯಂ 175, ಇಡುಕ್ಕಿ 137, ಎರ್ನಾಕುಳಂ 517, ತ್ರಿಶೂರ್ 674, ಪಾಲಕ್ಕಾಡ್ 583, ಮಲಪ್ಪುರಂ 527, ಕೊಝಿಕ್ಕೋಡ್ 698, ವಯನಾಡ್ 82, ಕಣ್ಣೂರು 197,ಕಾಸರಗೋಡು 97 ಎಂಬಂತೆ ಗುಣಮುಖರಾಗಿರುವರು.
ಇಂದು 22 ಮಂದಿ ಮೃತ್ಯು:
ಇಂದು 22 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ತಿರುವನಂತಪುರ ಮಣಿಕಂಡೇಶ್ವರಂ, ತಿರುವನಂತಪುರಂನ ಬಿನುಕುಮಾರ್ (48), ಚಕ್ಕಾದ ಪ್ರಸನ್ನ ಕುಮಾರ್ (67), ಕೊಲ್ಲಂನಿಂದ ಸರಸನ್ (54), ಚೇರ್ತಲಾದ ವಿಶ್ವನಾಥನ್ (73), ಕೊಟ್ಟಾಯಂನ ತೊನ್ನಲ್ಲೂರಿನ ವಾಸು(82), ಚಿಂಗವನಂ ನ ಮರಿಯಮ್ಮ(58), ಚೆಂಗಾಳಂ ನ ಕುಂಞÂ ಮೊಹಮ್ಮದ್(78), ಎರ್ನಾಕುಳಂ ವೆಂಗೂರ್ ನ ಎನ್. ರವಿ (69), ಕಾಂಜೂರ್ ನ ಎನ್.ಪಿ.ಶಾಜಿ(62), ಮುಡವೂರ್ ಎ.ವಿ. ಗೋಪಾಲ ಕೃಷ್ಣನ್ (71), ಮಟ್ಟಂಚೇರಿಯ ತೆಲ್ಮಾ ಜೇವಿಯರ್ (56), ತೃಶೂರ್ ಕೈಪಮಂಗಲಂನ ಅನ್ಸಾ (30), ಕೊಡುಂಗಲ್ಲೂರಿನಿಂದ ರಫೀಕ್ (44), ಪಳಕ್ಕರದ ವೇಲಾಯುಧನ್ (60), ಆನಂದಪುರಕಂನ ಅನ್ನಿ ಚಕ್ಕುನ್ನಿ (72),ಪಾಲಕ್ಕಾಡ್ ತೊರಕ್ಕಾಡಿನ ಎ.ಕೆ. ಅಯ್ಯಪ್ಪನ್ (84), ಮಲಪ್ಪುರಂ ಮಾಮಾಲಕ್ಕರದ ಕೋಶಿ(61), ಕೋಝಿಕ್ಕೋಡ್ ಬಾಲುಶ್ಚೇರಿ ಬಾಲನ್ ನಾಯರ್ (74), ಬೇಪೂರ್ ನ ಲೈಲಾ (48), ವಯನಾಡ್ ವೈತಿರಿಯ ಹೆಲೆನ್ (85), ಕಣ್ಣೂರು ಕೂತುಪರಂಬಿನ ಸನಿಲ(63), ಕಾಸರಗೋಡು ಕುಂಬಳೆ ಮುಹಮ್ಮದ್(65), ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 2,071 ಕ್ಕೆ ಏರಿಕೆಯಾಗಿದೆ.





