ತಿರುವನಂತಪುರ: ಆತಂಕಗಳು ಮುಂದುವರಿದಂತೆ, ಕೇರಳದಲ್ಲಿ ಇಂದು 6028 ಮಂದಿಗಳಿಗೆ ಕೋವಿಡ್ ದೃಢಪಡಿಸಲಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಇಂದಿನ ಮಾಹಿತಿ ನೀಡಲಾಗಿದೆ. ರಾಜ್ಯಾದ್ಯಂತ 67,831 ಮಂದಿ ಚಿಕಿತ್ಸೆಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಇಂದು 6398 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾದ ಒಟ್ಟು ಜನರ ಸಂಖ್ಯೆ 4,81,718 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 1997 ಕ್ಕೆ ಏರಿದ್ದು 28 ಮಂದಿ ಇಂದಿನ ವರದಿಯಂತೆ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಸಂಪರ್ಕದ ಮೂಲಕ 5213 ಜನರಿಗೆ ಸೋಂಕು ತಗಲಿದೆ. 654 ರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 56 ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾಗಿರುವರು. ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,15,518 ಜನರು ಕಣ್ಗಾವಲಿನಲ್ಲಿದ್ದಾರೆ. ಪರೀಕ್ಷಾ ಸಕಾರಾತ್ಮಕತೆ ದರ 9.98. ರಷ್ಟಿದೆ.
ಕೋವಿಡ್ ಪಾಸಿಟಿವ್ ವಿವರ:
ಮಲಪ್ಪುರಂ 1054, ಕೋಝಿಕ್ಕೋಡ್ 691, ತ್ರಿಶೂರ್ 653, ಪಾಲಕ್ಕಾಡ್ 573, ಎರ್ನಾಕುಳಂ 554, ಕೊಲ್ಲಂ 509, ಕೊಟ್ಟಾಯಂ 423, ಆಲಪ್ಪುಳ 395, ತಿರುವನಂತಪುರ 393, ಕಣ್ಣೂರು 251, ಪತ್ತನಂತಿಟ್ಟು 134, ಕಾಸರಗೋಡು 138,ವಯನಾಡ್ 135, ಇಡುಕ್ಕಿ 85 ಎಂಬಂತೆ ಇಂದು ಕೋವಿಡ್ ಬಾಧಿಸಿದೆ.
ಗುಣಮುಖರಾದವರ ವಿವರ:
ಚಿಕಿತ್ಸೆ ಪಡೆದ 6398 ಜನರು ಚೇತರಿಸಿಕೊಂಡಿದ್ದಾರೆ. ತಿರುವನಂತಪುರ 611, ಕೊಲ್ಲಂ 664, ಪತ್ತನಂತಿಟ್ಟು 137, ಆಲಪ್ಪುಳ 824, ಕೊಟ್ಟಾಯಂ 301, ಇಡುಕ್ಕಿ 62, ಎರ್ನಾಕುಳಂ 545, ತ್ರಿಶೂರ್ 803, ಪಾಲಕ್ಕಾಡ್ 497, ಮಲಪ್ಪುರಂ 740, ಕೋಝಿಕ್ಕೋಡ್ 634, ವಯನಾಡ್ 151, ಕಣ್ಣೂರು 295, ಕಾಸರಗೋಡು 134 ಎಂಬಂತೆ ಕೋವಿಡ್ ನಿಂದ ಗುಣಮುಖರಾಗಿದ್ದಾರೆ.
ಇಂದು 28 ಮಂದಿ ಮೃತ್ಯು:
ಇಂದು ಕೋವಿಡ್ ಬಾಧಿಸಿ 28 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ತಿರುವನಂತಪುರ ವರ್ಕಲದ ಆನಂದವಲ್ಲಿ (64), ನಾಗರೂರಿನ ಸುಹರಾ ಬೀವಿ (76), ಕಡಕ್ಕಾವೂರಿನ ಸುರೇಶ್ (53), ಕೊಲ್ಲಂ ಆಯುರ್ ನ ಅಬ್ದುಲ್ ಜಬ್ಬಾರ್ (65), ಕ್ಲಾಪ್ಪನದ ತಾಜುದ್ದೀನ್ (60), ಅಂಬನಾಡ್ ನ ಜಲಾಲುದ್ದೀನ್ (56), ತೆವಲಕ್ಕರದ ಐಶಾ ಕುಂಞÂ(72), ಆಲಪ್ಪುಳ ಕನಾಲ್ ನ ಸೂಫಿಕ್ಕೋಯ(64), ಪುನ್ನಪ್ರದ ಟಿನಿ(48), ವೇಳಾಪ್ರಂ ನ ಕಲ್ಯಾಣಿ(88), ಕೋಟ್ಟಯಂ ಕಾಂಞÂರಪಳ್ಳಿಯ ರಾಜು(52), ಎರ್ನಾಕುಳಂ ಮೇಕ್ಕಾಡ್ ನ ಎಂ.ಜೆ.ಜೋನ್(68), ಕರ್ಷಕ ರೋಡ್ ನ ಟಿ.ಜಿ. ಇಗ್ನೇಶಿಯಸ್(72), ತ್ರಿಶೂರ್ ಎನಮಾಕ್ಕಲ್ ಮೂಲದ ಆರ್.ಎಸ್.ಅಂಬುಟ್ಟಿ(73), ಎಡಕ್ಕರದ ವಿ.ಕೆ. ಕಮಲಾಕ್ಷಿ (79), ಒಲ್ಲೂರಿನ ಟಿ.ಸಿ.ದೇವಾಸಿ (79), ಕೈಪಮಂಗಲಂನ ಅಬ್ದುಲ್ ಅಜೀಜ್ (46), ಕರಯಮುಟ್ಟಂನ ಹರೀಶ್ ಕೇಶವ್ (46), ದೇಶಮಂಗಲಂನ ಶಾರದಾ ವಾಸುದೇವನ್ (63), ಪರವತ್ತನಿಯ ಸಿ.ಟಿ. ಥಾಮಸ್ (69), ಪಾಲಕ್ಕಾಡ್ ಕೇರಳಸೇರಿಯ ಅಮಿತ(72), ಮಲಪ್ಪುರಂ ಪನ್ನಿಪ್ಪಾರದ ಪಾಚನ್ (72),ಕೋಝಿಕ್ಕೋಡ್ ನ ಬೇಪ್ಪೂರ್ ನ ಸುಶೀಲಾ (72), ಫರೂಕ್ ನ ಸುಧಾಕರನ್ (53), ಮೊಡಕ್ಕಲ್ಲೂರ್ ನ ರಾಜನ್ (64), ಕಣ್ಣೂರು ಮಟ್ಟನ್ನೂರಿನ ಮೊಹಮ್ಮದ್ ಅಶ್ರಫ್ (49),ತಳಿಯಿಲ್ ನ ಪಂಕಜಾಕ್ಷನ್ (66), ಮುಳಪ್ಪಿಲಂಗಾಡ್ ನ ಅಬೂಬಕರ್ ಸಿದ್ದೀಕ್ (59) ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ. ಪ್ರಸ್ತು 1997 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ.
ಕೇರಳದಲ್ಲಿ ಏರಿಕೆ:
ಇತರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದ್ದರೆ, ಕೇರಳದ ದೈನಂದಿನ ಅಂಕಿ ಅಂಶಗಳು ಆತಂಕಕಾರಿಯಾಗಿದೆ. ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳದ ಹೊರತಾಗಿಯೂ, ಸಾವಿನ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ವಿಫಲವಾದದ್ದು ಹಿನ್ನಡೆಯಾಗಿದೆ. ಹೆಚ್ಚಿನ ಪ್ರಕರಣಗಳು ಸಂಪರ್ಕದ ಮೂಲಕವಾಗಿದೆ. ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚುತ್ತಿರುವುದೂ ಆತಂಕ ಮೂಡಿಸಿದೆ. ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ, ಆಸ್ಪತ್ರೆಗಳಲ್ಲಿ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ಮಾಡುವ ಜನರ ಸಂಖ್ಯೆ ಹೆಚ್ಚುತ್ತಿದೆ.





