HEALTH TIPS

ಪೊಲೀಸ್ ಕಾಯ್ದೆಯ ತಿದ್ದುಪಡಿ-ರಾಜ್ಯದಲ್ಲಿ ಮಾಧ್ಯಮ ಸ್ವಾತಂತ್ರ್ಯ ಹರಣಕ್ಕೆ ಮುಂದಾದ ಸರ್ಕಾರ- ಎಲ್ಲಾ ಮಾಧ್ಯಮಗಳಿಗೆ ಅನ್ವಯ


       ತಿರುವನಂತಪುರ: ಸೈಬರ್ ಅಪರಾಧ ತಡೆಗಟ್ಟುವ ಹೆಸರಿನಲ್ಲಿ ಪೊಲೀಸ್ ಕಾಯ್ದೆಯಲ್ಲಿ ತರಲಾದ ತಿದ್ದುಪಡಿ ಎಲ್ಲಾ ಮಾಧ್ಯಮಗಳಿಗೂ ಅನ್ವಯಿಸುತ್ತದೆ. ಆದರೆ ಈ ತಿದ್ದುಪಡಿಯಲ್ಲಿ ಸೈಬರ್ ಮಾಧ್ಯಮವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿಲ್ಲ.
      ನಕಲಿ ಸುದ್ದಿಗಳನ್ನು ನಿಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪದೇ ಪದೇ ಘೋಷಿಸುತ್ತಿರುವ ಬೆನ್ನಿಗೆ  ಈ ತಿದ್ದುಪಡಿ ಜಾರಿಗೆ ಬಂದಿದೆ. ಪೊಲೀಸ್ ಕಾಯ್ದೆಯ 118 (ಎ) ಉಪವಿಭಾಗವನ್ನು ಸೇರಿಸುವ ಮೂಲಕ ತಿದ್ದುಪಡಿ ಮಾಡಲಾಗಿದೆ.
      ಸೈಬರ್ ಅಪರಾಧವು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸೃಜನಶೀಲ ಟೀಕೆಗಳನ್ನು ಕ್ರೋಡೀಕರಿಸುತ್ತಿದೆ ಎಂಬ ಆರೋಪದ ನಡುವೆ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನ ಈ ಮೂಲಕ ಸರ್ಕಾರದಿಂದ ವ್ಯಕ್ತವಾಗುತ್ತಿದೆ.
      ಮಹಿಳೆಯರ ಮೇಲೆ ನಡೆಯುತ್ತಿರುವ ಸೈಬರ್ ಹಿಂಸಾಚಾರವನ್ನು ಎದುರಿಸಲು ಕೇರಳದಲ್ಲಿ ಸಾಕಷ್ಟು ಕಾನೂನುಗಳ ಕೊರತೆಯ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಬಂದಿದೆ ಎಂಬುದು ಸರ್ಕಾರದ ವ್ಯಾಖ್ಯಾನ.
      ಆದರೆ, ಕೇರಳ ಪೊಲೀಸ್ ಕಾಯ್ದೆ ಕಾಯ್ದೆ 118 (ಎ) ವ್ಯಕ್ತಿಯು ಗರಿಷ್ಠ ಐದು ವರ್ಷಗಳ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾನೆ ಮತ್ತು ದಂಡ ರೂ.10000 ತೆರಬೇಕಾಗುತ್ತದೆ. ಜಾಮೀನು ರಹಿತವಾದ ಪ್ರಕರಣವಾದ ಇದರಲ್ಲಿ ದೂರು ದಾಖಲಾದರೆ ಪೋಲೀಸರು ಬಂಧಿಸುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries