ಕಾಸರಗೋಡು: ಕಣ್ಣೂರು ಸಹೋದಯ ಆನ್‍ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾಸರಗೋಡಿನ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳು ದಾಖಲೆ ವಿಜಯ ಸಾಧಿಸಿದ್ದಾರೆ.
ವಿಭಾಗ 4 ರ ಹೆರಿಟೇಜ್ ಕ್ವಿಜ್‍ನಲ್ಲಿ ಸನ್ನಿಧಿ ಟಿ.ರೈ, ನಿದ ಆಯಿಷ ಪ್ರಥಮ ಸ್ಥಾನವನ್ನೂ, ವಿಭಾಗ 3 ರ ಹೆರಿಟೇಜ್ ಕ್ವಿಜ್‍ನಲ್ಲಿ ಒವೇಜ್ ಮುಹಮ್ಮದ್ ಪ್ರಥಮ್ ಬಿ.ಕೆ. ದ್ವಿತೀಯ ಸ್ಥಾನವನ್ನೂ, ವಿಭಾಗ 3 ರ ಸಾಮಾನ್ಯ ವಿಜ್ಞಾನ ಕ್ವಿಜ್‍ನಲ್ಲಿ ಟಿ.ವಿ.ಧನುಷ್, ಶ್ರೀರಾಜ್ ಜಿ. ನಾಯರ್ ದ್ವಿತೀಯ ಸ್ಥಾನವನ್ನೂ, ವಿಭಾಗ 3 ರ ವಿಜ್ಞಾನ ಕ್ವಿಜ್‍ನಲ್ಲಿ ಹಾನಿಯ ಅಬ್ದುಲ್ ಜಬ್ಬಾರ್, ಶಿವಧ ಎಸ್.ಪ್ರದೀಪ್ ತೃತೀಯ ಸ್ಥಾನವನ್ನೂ, ವಿಭಾಗ 3 ರ ಸ್ಪೋಟ್ರ್ಸ್ ಕ್ವಿಜ್‍ನಲ್ಲಿ ಶ್ರೀರಾಜ್ ಜಿ.ನಾಯರ್, ನಿಹಾಲ್ ಕೆ. ದ್ವಿತೀಯ ಸ್ಥಾನವನ್ನೂ, ವಿಭಾಗ 4 ರ ಐ.ಟಿ. ಕ್ವಿಜ್‍ನಲ್ಲಿ ಸನ್ನಿ„ ಟಿ.ರೈ, ಡಿ.ಅಭಿರಾಮ್ ಕಾರಂತ್ ಪ್ರಥಮ ಸ್ಥಾನವನ್ನೂ ವಿಭಾಗ 3 ರ ಗಣಿತ ಕ್ವಿಜ್‍ನಲ್ಲಿ ಟಿ.ವಿ.ಧನುಷ್, ಶ್ರೀರಾಜ್ ಜಿ.ನಾಯರ್ ಪ್ರಥಮ ಸ್ಥಾನವನ್ನೂ ಗಳಿಸಿರುವರು. ವಿಜೇತ ವಿದ್ಯಾರ್ಥಿಗಳನ್ನು ಚಿನ್ಮಯ ಮಿಷನ್ ಕೇರಳ ಘಟಕದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿಜೀಯವರು ಅಭಿನಂದಿಸಿರುವರು.




