ಕೊಚ್ಚಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರ ಸಂಬಂಧಿಕರಿಗೆ ವಿಡಿಯೋ ಕರೆ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ. ಜೈಲಿನಲ್ಲಿ ಪೆನ್ ಮತ್ತು ಪೇಪರ್ ನೀಡುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ತಿಳಿದುಬಂದಿದೆ.
ಕಸ್ಟಮ್ಸ್ ಕಸ್ಟಡಿಯ ನಂತರ ಅವರನ್ನು ಜೈಲಿಗೆ ಮರಳಲು ಅನುಮತಿಸಬೇಕು ಎಂದು ನ್ಯಾಯಾಲಯವು ತೀರ್ಪು ನೀಡಿದೆ. ತಿರುವನಂತಪುರನ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ ಶಿವಶಂಕರ್ ಅವರನ್ನು ಐದು ದಿನಗಳ ಕಾಲ ಬಂಧನದಲ್ಲಿಡಲಾಗಿದೆ.
ಈ ತಿಂಗಳ 18 ರಂದು ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಸಿಕ್ಕ ಮಾಹಿತಿಯ ಆಧಾರದ ಮೇಲೆ ಶಿವಶಂಕರ್ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ಶಿವಶಂಕರ್ ಅವರನ್ನು ಸುಮಾರು ಒಂಬತ್ತು ಬಾರಿ ಕಸ್ಟಮ್ಸ್ ಪ್ರಶ್ನಿಸಿದೆ. ಸಾಕ್ಷ್ಯ ಸಂಗ್ರಹದ ಭಾಗವಾಗಿ ಶಿವಶಂಕರ್ ಅವರ ಫೆÇೀನ್ ನ್ನು ಕಸ್ಟಮ್ಸ್ ವಶಪಡಿಸಿಕೊಂಡಿದೆ. ಆದರೆ, ಈವರೆಗೆ ಯಾವುದೇ ಪುರಾವೆಗಳನ್ನು ಕಸ್ಟಮ್ಸ್ ಪತ್ತೆ ಮಾಡಿಲ್ಲ ಎಂದು ಶಿವಶಂಕರ್ ಪರ ವಕೀಲರು ನಿನ್ನೆ ನ್ಯಾಯಾಲಯಕ್ಕೆ ತಿಳಿಸಿದ್ದರು.
ತನಿಖಾಧಿಕಾರಿಗಳು ಉದ್ದೇಶಪೂರ್ವಕವಾಗಿ ತನ್ನಿಂದ ಹೇಳಿಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಶಿವಶಂಕರ್ ನ್ಯಾಯಾಲಯಕ್ಕೆ ತಿಳಿಸಿದರು. ಶಿವಶಂಕರ್ ಅವರನ್ನು ಈ ಹಿಂದೆ ಹಲವಾರು ಬಾರಿ ಪ್ರಶ್ನಿಸಲಾಗಿತ್ತು ಆದರೆ ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ಆರೋಪಿಸಿದರು. ಆದರೆ ಈಗ ಸ್ವಪ್ನಾ ಅವರ ಹೇಳಿಕೆಯಿಂದ ಸಾಕ್ಷ್ಯಗಳು ದೊರೆತಿವೆ ಎಂಬ ಅನುಮಾನವಿದೆ.
ಏತನ್ಮಧ್ಯೆ, ಶಿವಶಂಕರ್ ಅವರ ಹೇಳಿಕೆಯ ಆಧಾರದ ಮೇಲೆ ವಿಚಾರಣೆಗಾಗಿ ಇಡಿಯು ಮುಖ್ಯಮಂತ್ರಿಯ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿಎ ರವೀಂದ್ರನ್ ಅವರನ್ನು ಪ್ರಶ್ನಿಸಬೇಕಿದ್ದು ರವೀಂದ್ರನ್ ಚಿಕಿತ್ಸೆಯಲ್ಲಿರುವುದರಿಂದ ಸಾಧ್ಯವಾಗಿಲ್ಲ. ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಇಡಿ ಗುರುವಾರ ರವೀಂದ್ರನ್ ಅವರಿಗೆ ಪತ್ರ ಬರೆದಿತ್ತು. ತನಿಖೆ ಶಾಉಕ್ರವಾರವೂ ಅವರು ಹಾಜರಾಗದ್ದರಿಂದ ಇಂದು ಇಡಿ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.





