ಮುಳ್ಳೇರಿಯ: ಗಂಭೀರ ಸ್ಥಿತಿಯಲ್ಲಿ ಎರ್ನಾಕುಳಂ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್ಯತೀರ್ಥ(9)ಳಿಗೆ ಚಿಕಿತ್ಸಾ ಧನಸಹಾಯವನ್ನು ನೀಡಲಾಯಿತು.
ಇರಿಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಕೊಳಿಚ್ಚಾಲ್ ನಿವಾಸಿ ನಾರಾಯಣನ್ ಅವರ ಪುತ್ರಿ ಆರ್ಯತೀರ್ಥಳಿಗೆ ಶಸ್ತ್ರಕ್ರಿಯೆಗಾಗಿ ಅಗತ್ಯವಿರುವ ಭಾರೀ ಮೊತ್ತವನ್ನು ಭರಿಸುವ ಶಕ್ತಿ ಕುಟುಂಬಕ್ಕೆ ಇಲ್ಲದ ಕಾರಣದಿಂದ ಶ್ರೀಮದ್ ಪರ:ಶಿವ ವಿಶ್ವಕರ್ಮ ದೇವಸ್ಥಾನ ಸಮಿತಿಯ ನೇತೃತ್ವದಲ್ಲಿ ಧನ ಸಹಾಯ (1,03,765 ರೂ.) ನೀಡಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಪಿ.ಕೆ.ರಾಮಕೃಷ್ಣನ್ ಆಚಾರಿ, ಪ್ರಧಾನ ಕಾರ್ಯದರ್ಶಿ ಇ.ವಿ.ಊಮಾದೇವ ಶಂಕರ್, ಗಂಗಾಧರನ್ ಬಲ್ಲ ಮಾತನಾಡಿದರು. ವೈನಿಂಗಾಲ್ ಪುರುಷೋತ್ತಮನ್, ಪ್ರೇಮನ್ ಅರಯಿ, ಅರವಿಂದಾಕ್ಷನ್, ವಿವಿಧ ಗ್ರಾಮ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು.





