ಕುಂಬಳೆ: ಮಂಜೇಶ್ವರ ಮಂಡಲ ವ್ಯಾಪ್ತಿಯಲ್ಲಿ ಮುಸ್ಲಿಂಲೀಗ್ ಕಾರ್ಯಕರ್ತರು ಎರಡೆರಡು ವಾರ್ಡು ಗಳಲ್ಲಿ ಮತ ಸೇರಿಸಿ ನಕಲಿ ಮತದಾನ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ದಾಖಲೆ ಸಮೇತ ಆರೋಪ ಮಾಡಿದೆ.
ಮಂಜೇಶ್ವರ ಪಂಚಾಯತ್ 11 ವಾರ್ಡಿನಲ್ಲಿ ಮತ ಇರುವ ಕೆಲವು ಲೀಗ್ ನೇತಾರರು ವಾರ್ಡ್ 12 ರಲ್ಲಿ ಯು ವೋಟ್ ಸೇರ್ಪಡೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ಇದರಲ್ಲಿ ಮಂಜೇಶ್ವರ ಚುನಾವಣಾ ಅಧಿಕಾರಿಗಳ ಕೈವಾಡ ಇದೆಯೇ ಎಂದು ಬಿಜೆಪಿ ಅಧಿಕಾರಿಗಳನ್ನು ಪ್ರಶ್ನಿಸಿದೆ.
ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳು ನೇತೃತ್ವ ನೀಡಬೇಕು. ಹಾಗೂ iಜ ಇಲ್ಲವೆಂದು ದಾಖಲೆ ನೀಡದೆ ಸೇರಿಸಿದ ವೋಟ್ ಗಳನ್ನು ವಜಾ ಮಾಡಬೇಕೆಂದು ಅಂತಹ ವೋಟ್ ರದ್ದು ಪಡಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
ಅಧಿಕಾರಿಗಳ ಒಳರಾಜಕೀಯ ಮುಖವಾಡ ಇದರಿಂದ ಬಹಿರಂಗ ವಾಗಿದೆ,.
ನಕಲಿ ಮತದಾನ ಮುಸ್ಲಿಂ ಲೀಗ್ ನ ಚಾಳಿಯಾಗಿದೆ.
ಇದಕ್ಕೆ ಮಂಜೇಶ್ವರ ಪಂಚಾಯತ್ ನಲ್ಲಿ ಎಡರಂಗ ಕೂಡ ಬೆಂಬಲ ನೀಡುತ್ತಿರುವಂತಿದೆ. ಎಡರಂಗದ ಪ್ರಮುಖ ನೇತಾರರೆ ತಮ್ಮ ಸ್ವಂತ ಚಿಹ್ನೆ ಯಲ್ಲಿ ಸ್ಪರ್ಧೆ ಮಾಡದೆ ರಾಜಕೀಯ ಡೊಂಬರಾಟ ಮಾಡುತ್ತಿದೆ. ಕೊಡೆ, ಮೊಬೈಲ್ ಎಡರಂಗದ ಚಿಹ್ನೆಯಾಗಿ ಬದಲಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.






