HEALTH TIPS

ಹೀಗೂ ಉಂಟು-ಆಧುನಿಕ ಕುಂತಿ?-ಅಣ್ಣ ಕಾಂಗ್ರೆಸ್ ಅಭ್ಯರ್ಥಿ-ತಮ್ಮ ಸಿಪಿಎಂ ಅಭ್ಯರ್ಥಿ:ಜಯಶಾಲಿಯಾಗಲು ತಾಯಿಯಿಂದ ಇಬ್ಬರಿಗೂ ಆಶೀರ್ವಾದ!!

  

          ಮಂಗನಮ್(ಕೋಟ್ಟಯಂ): ಬಹುಷಃ ಇಲ್ಲಿಯ ವಿಶೇಷ ಸುದ್ದಿಯನ್ನು ಓದಿದಾಗ ದ್ವಾಪರದ ಕುಂತಿಯ ನೆನಪು ಬಾರದಿರದು. ಪಾಂಡು ಮಹಾರಾಜನ ಪತ್ನಿ ಕುಂತಿಗೆ ಕುರುಕ್ಷೇತ್ರ ಯುದ್ದ ಕಾಲದ ಸಂದರ್ಭ ತನ್ನ ಹಿರಿಯ ಪುತ್ರ ಕರ್ಣ ಎಂದು ತಿಳಿದಾಗ ಆದ ಮನೋಸ್ಥಿತಿ ಅನೂಹ್ಯ. 

    ಆದರೆ ಇಲ್ಲಿ ಅಂತಹ ತುಮುಲಗಳಿಲ್ಲದಿದ್ದರೂ ಅದರಂತೆ ಹೋಲುವ ಸನ್ನಿವೇಶ ನಿರ್ಮಾಣವಾಗಿರುವುದು ನಿಜ.

    ಕೋಟ್ಟಯಂ ಜಿಲ್ಲೆಯ ಮಂಗನಮ್ ಗ್ರಾ.ಪಂ. ರಾಜ್ಯದ ಇತರೆಡೆಗಳಂತೆ ಸ್ಥಳೀಯಾಡಳಿತ ಚುನಾವಣೆಯ ಸಹಜ ಬಿಸಿಯಲ್ಲಿದೆ. ಇಲ್ಲಿಯ ವಾರ್ಡೊಂದರ ಮಹಾತಾಯಿಗೆ ವಿಶಿಷ್ಟ ಸನ್ನಿವೇಶ ಎದುರಾಗಿರುವುದು. ಇಲ್ಲಿಯ ಕಿಳಿಕ್ಕೇಕರ ನಿವಾಸಿ ಸರಸು ಎಂಬ ಮಹಿಳೆಯ ಇಬ್ಬರು ಪುತ್ರರು ಅಂತಹ ಸನ್ನಿವೇಶ ಸೃಷ್ಟಿಸಿದವರು. ಸರಸು ಅವರ ಇಬ್ಬರು ಪುತ್ರರು ಬೇರೆ -ಬೇರೆ ಪಕ್ಷಗಳಿಂದ ಸ್ಪರ್ಧಿಸುತ್ತಿದ್ದು ಯಾರ ಗೆಲುವಿಗೆ ಆಶೀರ್ವದಿಸುತ್ತಾರೆ ಮತ್ತು ಯಾರಿಗೆ ಮತ ನೀಡಬೇಕು ಎಂಬ ಸ್ಥಿತಿ ಕುತೂಹಲ ಮೂಡಿಸಿದೆ.

     ವಿಜಯಪುರಂ ಪಂಚಾಯತ್‍ನ ಆಶ್ರಮ ವಾರ್ಡ್‍ನಲ್ಲಿ (11) ಇವರ ಮಕ್ಕಳಾದ ಸಹೋದರರು ಯುಡಿಎಫ್ ಮತ್ತು ಎಲ್‍ಡಿಎಫ್ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ.

       ಬಿ.ಎಸ್.ಎನ್.ಎಲ್ ಉದ್ಯೋಗಿಯಾಗಿದ್ದು ನಿಧನರಾಗಿರುವ ಕೃಷ್ಣಂಕುಟ್ಟಿ-ಸರಸು ದಂಪತಿಗಳ ಪುತ್ರರಾದ ಸಜನ್(44)  ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದರೆ ಕಿರಿಯ ಪುತ್ರ ಜನೀಶ್ (42)ಸಿಪಿಎಂ ಅಭ್ಯರ್ಥಿಯಾಗಿ ಇದೇ ವಾರ್ಡ್‍ನಲ್ಲಿ ಸ್ಪರ್ಧೆಗಿಳಿದಿದ್ದಾರೆ. ಇಬ್ಬರೂ ಬಾಲ್ಯದಿಂದಲೇ ಎರಡು ಪಕ್ಷಗಳಳ ಕಾರ್ಯಕರ್ತರಾಗಿ ಬೆಳೆದುಬಂದವರು.  ಚುನಾವಣಾ ರಂಗದಲ್ಲಿ ಇದೇ ಮೊದಲ ಬಾರಿಗೆ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಕಿರಿಯ ಪುತ್ರ ಜನೀಶ ತನ್ನ ತಾಯಿಯೊಂದಿಗೆ ಕುಟುಂಬದ ಮನೆಯಲ್ಲಿ ವಾಸಿಸುತ್ತಿದ್ದಾರೆ.  ಸಜತ್ ಮತ್ತೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಜತ್ ಬಸೆಲಿಯಸ್ ಕಾಲೇಜು ಮತ್ತು ಎಟ್ಟುಮನೂರ್ ಐಟಿಐನಲ್ಲಿ ಕೆಎಸ್‍ಯು ಕಾರ್ಯಕರ್ತರಾಗಿದ್ದರು. ಜನೀಶ್ ಕಾತಂಗಾಡ್ ನ ನಿತ್ಯಾನಂದ ಪಾಲಿಟೆಕ್ನಿಕ್‍ನಲ್ಲಿ ಕೆಎಸ್‍ಯು ಪ್ಯಾನಲ್ ನಲ್ಲಿ ಕೌನ್ಸಿಲರ್ ಆದರು. ಅವರು ಬಿಎಸ್‍ಎನ್‍ಎಲ್ ಕೇಬಲ್ ವರ್ಕರ್ಸ್ ಯೂನಿಯನ್ (ಐಎನ್‍ಟಿಯುಸಿ) ಯ ಉಸ್ತುವಾರಿ ವಹಿಸಿದ್ದರು. 

ಬಳಿಕ ಯುವ ಕಾಂಗ್ರೆಸ್‍ನಲ್ಲಿ ಸಕ್ರಿಯರಾದರು. 2005 ರಿಂದ ಇಬ್ಬರು ಸ್ನೇಹಿತರೊಂದಿಗೆ ವ್ಯಾಪಾರ ನಿರತರಾಗಿದ್ದಾರೆ. ಚುನಾವಣೆಗೆ ಸೀಟು ಲಭಿಸಿದ ಬಗ್ಗೆ ಮೊದಲು ಹರ್ಷ ಹಂಚಿಕೊಂಡದ್ದು ತನ್ನ ತಾಯಿ ಮತ್ತು ಸಹೋದರ ಜನೀಶ್ ಗೆ. ಬನೀಲಿಯಸ್ ಕಾಲೇಜಿನಲ್ಲಿ ಓದುತ್ತಿದ್ದಾಗ ಜನೀಶ್ ಕೂಡ ಎಸ್‍ಎಫ್‍ಐಗೆ ಪಾದಾರ್ಪನೆಗೊಂಡರು. ನಂತರ ಡಿವೈಎಫ್‍ಐನಲ್ಲಿ ಕೆಲಸ ಮಾಡಿದರು.

       ಜನೀಶ ಬಳಿಕ ಡಿವೈಎಫ್‍ಐ ಘಟಕದ ಅಧ್ಯಕ್ಷರಾಗಿದ್ದರು. ಇಂಡಿಯಾ ವುಡ್ ಕಂಪನಿಯಲ್ಲಿ ಕೆಲಸ ಮಾಡುವಾಗ ಸಿಐಟಿಯುಗೆ ಸೇರಿದರು. ಅನಿರೀಕ್ಷಿತವಾಗಿ ಪಕ್ಷದಿಂದ  ಸ್ಪರ್ಧಿಸಲು ಕೇಳಲಾಯಿತು. ಅಣ್ಣ ಪ್ರತಿಪಕ್ಷದ ಅಭ್ಯರ್ಥಿ ಎಂದು ತಿಳಿಸಿ ಹಿಂದೇಟು ಹಾಕಿದರೂ ಪಕ್ಷದ ನಿರ್ದೇಶನ ಮೀರುವಂತಿಲ್ಲ ಎಂದು ಜನೀಶ್ ಹೇಳುತ್ತಾರೆ.

        ಅಪರೂಪದ ಅವಕಾಶದ ಲಾಭವನ್ನು ಪಡೆಯಲು ಎರಡೂ ಮಕ್ಕಳಿಗೆ ಮಹಾತಾಯಿ ನಿರ್ದೇಶನ ನೀಡಿರುವರು. ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದು ನನ್ನ ಅದೃಷ್ಟ. ಇಬ್ಬರಿಗೂ ಅವಕಾಶ ಲಭಿಸಿದ್ದಕ್ಕೆ ಸಂತೋಷವಾಗಿದೆ. ಯಾರು ಗೆದ್ದರೂ ಸೋತರೂ ಸಂಬಂಧ ಮತ್ತು ಪ್ರೀತಿ ಶಾಶ್ವತವಾಗಿ ಉಳಿಯಬೇಕು. ನಾನು ಇಷ್ಟಪಡುವ ವ್ಯಕ್ತಿಗೆ ಮತ ಚಲಾಯಿಸಲು ಇಬ್ಬರೂ ಅನುಮತಿ ನೀಡಿದ್ದಾರೆ ಎಂದು ತಾಯಿ ಮಾಧ್ಯಮಗಳಿಗೆ ಹೇಳಿರುವರು.


               (ಅಂದಹಾಗೆ...............ನಿಮ್ಮಲ್ಲೂ ಇಂತಹ ವಿಶೇಷತೆಗಳಿದ್ದರೆ, ಗಮನಕ್ಕೆ ಬಂದಿದ್ದರೆ ಸಮರಸ ಸುದ್ದಿಯೊಂದಿಗೆ ಹಂಚಿಕೊಳ್ಳಬಹುದು. ಕುತೂಹಲ ಹಂಚಲು ಯಾಕ್ರೀ ಜಂಭ, ಹಂಚಿರಿ ಈಗ್ಲೇಯ...ನಗುವ ಮನಸ್ಸು ತುಂಬ!!)

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries