ಪೆರ್ಲ:ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸುಮಾರು 19 ವರ್ಷ ಸೇವೆ ಸಲ್ಲಿಸಿ ನ.30ರಂದು ನಿವೃತ್ತಿ ಹೊಂದಲಿರುವ ನಾರಾಯಣ ಮಯ್ಯ ಅವರಿಗೆ ವಿದಾಯಕೂಟ ಮತ್ತು ಸನ್ಮಾನ ಸಮಾರಂಭ ಶನಿವಾರ ದೇವಳದಲ್ಲಿ ಜರಗಿತು.
ಕೋವಿಡ್ ಮಾನದಂಡಗಳನ್ನು ಪಾಲಿಸಿ ನಡೆದ ಕಾರ್ಯಕ್ರಮವನ್ನು ದೇವಸ್ಥಾನದ ಮಾಜಿ ಅಧ್ಯಕ್ಷ ಸಂಜೀವ ರೈ ಕೆಂಗಣಾಜೆ ಉದ್ಘಾಟಿಸಿದರು.ಸನ್ಮಾನ ಸಮಿತಿ ಅಧ್ಯಕ್ಷ, ನಿವೃತ್ತ ಶಿಕ್ಷಕ ಲೋಕನಾಥ ಶೆಟ್ಟಿ ಮಾಯಿಲೆಂಗಿ ಅಧ್ಯಕ್ಷತೆ ವಹಿಸಿದರು. ನ್ಯಾಯವಾದಿ, 'ಕಲಾರತ್ನ' ಶಂ.ನಾಡಿಗ ಮಂಗಳೂರು, ಮಯ್ಯರನ್ನು ಅಭಿನಂದಿಸಿ ಮಾತನಾಡಿದರು.
ಅನಂತಪುರ ಶ್ರೀ ಅನಂತಪದ್ಮನಾಭ ಕ್ಷೇತ್ರದ ಟ್ರಸ್ಟಿಬೋರ್ಡ್ ಅಧ್ಯಕ್ಷ ಮಹಾಲಿಂಗೇಶ್ವರ ಭಟ್ ಎಂ.ವಿ., ಮಲಬಾರ್ ದೇವಸ್ವಂ ಬೋರ್ಡ್ ಕಾಸರಗೋಡು-ನೀಲೇಶ್ವರ ಮಾರ್ಗ ನಿರ್ದೇಶಕ ಉಮೇಶನ್ ಎ.ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾಟುಕುಕ್ಕೆ ದೇವಳದ ಅಧ್ಯಕ್ಷ ನಾರಾಯಣನ್ ಕಾಟುಕುಕ್ಕೆ, ಮಾಜಿ ಅಧ್ಯಕ್ಷರುಗಳಾದ ಸಚ್ಚಿದಾನಂದ ಖಂಡೇರಿ, ವಿಷ್ಣುಪ್ರಸಾದ್ ಪಿಲಿಂಗಲ್ಲು, ಮೊಕ್ತೇಸರರುಗಳಾದ ರಘುನಾಥ ರೈ ಕಟ್ಟತ್ತಾಡೆ, ಈಶ್ವರ ನಾಯ್ಕ್ ಮಾಯಿಲಕಾನ, ಬಾಬು ಪೆರ್ಲತ್ತಡ್ಕ, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ವ್ಯವಸ್ಥಾಪಕ ಮಿತ್ತೂರು ಪುರುಷೋತ್ತಮ ಭಟ್ ಶುಭ ಹಾರೈಸಿದರು.ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಜಿ.ಶೆಟ್ಟಿ, ಉಪಾಧ್ಯಕ್ಷೆ ರಾಜಶ್ರೀ ಟಿ.ರೈ., ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸನ್ಮಾನ ಸಮಿತಿ ಕಾರ್ಯದರ್ಶಿ ವಿನೋಬ ಶೆಟ್ಟಿ ದಂಬೆಕಾನ ಸ್ವಾಗತಿಸಿ, ದೇವಳದ ಮೊಕ್ತೇಸರ ಸುಬ್ರಹ್ಮಣ್ಯ ಭಟ್ ಕೋಡುಮಾಡು ವಂದಿಸಿದರು. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ನಿರೂಪಿಸಿದರು.





