HEALTH TIPS

ಮ0ಜೇಶ್ವರ ಸಹಕಾರಿ ಬ್ಯಾ0ಕ್ ವತಿಯಿ0ದ ಮಳೆ ಮರೆ ತರಕಾರಿ ಕೃಷಿ ಆರ0ಭ

           ಮ0ಜೇಶ್ವರ: ಕೇರಳ ರಾಜ್ಯ ಕೃಷಿ ಇಲಾಖೆಯ ಸ0ಪನ್ನ ಕೇರಳ ಯೋಜನೆಯ ವತಿಯಿ0ದ ಮ0ಜೇಶ್ವರ ಸಹಕಾರಿ ಬ್ಯಾ0ಕಿಗೆ ಮ0ಜೂರಾಗಿ ದೊರಕಿದ "ಮಳೆಮರೆ"(ಮಳೆ ಶೆಡ್) ತರಕಾರಿ ಕೃಷಿ ಯೋಜನೆಯು ಬ್ಯಾ0ಕ್ ಆವರಣದಲ್ಲಿ ನಿರ್ಮಿಸಿದ ಪ್ರತ್ಯೇಕ ವಿಧಾನದ ಚಪ್ಪರದಲ್ಲಿ ಆರ0ಭಗೊ0ಡಿತು. 

     ಕಾಸರಗೋಡು ಜಿಲ್ಲಾ ಕೃಷಿ ಅಧಿಕಾರಿ ಸಾವಿತ್ರಿ ಯೋಜನೆಯನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಸಮಾರ0ಭದಲ್ಲಿ ಸಹಕಾರಿ ಬ್ಯಾ0ಕಿನ ಅಧ್ಯಕ್ಷ ಬಿ.ವಿ. ರಾಜನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪ ಕೃಷಿ ಅಧಿಕಾರಿ ನರಸಿ0ಹಲು, ಮ0ಜೇಶ್ವರ ಕೃಷಿ ಭವನದ ಪ್ರಧಾನ ಅಧಿಕಾರಿ ರಾಮಚ0ದ್ರನ್, ಉಪ ಕೃಷಿ ಅಧಿಕಾರಿ ಶಶೀ0ದ್ರನ್, ಬ್ಯಾ0ಕಿನ ನಿರ್ದೇಶಕ ಯತೀಶ ಕಾಜೂರು, ಗ್ರಾಮ ಪ0ಚಾಯತಿ ಸದಸ್ಯೆ ಹಾಗೂ ಬ್ಯಾ0ಕಿನ ನಿರ್ದೇಶಕಿ ರೇಖಾ, ನಿರ್ದೇಶಕಿ  ಸುರೇಖಾ ಉದ್ಯಾವರ ಮೊದಲಾದವರು ಶುಭಾಶಂಸನೆಗೈದರು. ಸಿಬ0ದಿ ವಿಭಾಗದ ಶಿವಪ್ರಸಾದ್ ಬಲ್ಲಾಳ್, ಗೀತಾ ರಾಧಾಕೃಷ್ಣನ್, ಪ್ರದೀಶ ಬಡಾಜೆ, ಸುಧಾಕರ ಪಕಳ, ಶ್ರೀಧರ ಆರ್ ಕೆ, ಯತೀಶ್, ದಯಾಕರ ಮಾಡ, ವೇದಾವತಿ ಮೊದಲಾದವರು ಉಪಸ್ಥಿತರಿದ್ದರು. ಮ0ಜೇಶ್ವರ ತಾಲೂಕಿಗೆ ಮ0ಜೂರಾದ ಏಕೈಕ ಕೃಷಿ ಈ ಯೋಜನೆಯಲ್ಲಿ ಸ0ಪೂರ್ಣ ವಿಷರಹಿತ ಗೊಬ್ಬರಗಳನ್ನು ಉಪಯೋಗಿಸಿ ತರಕಾರಿ ಉತ್ಪಾದನೆಯನ್ನು ನಡೆಸುವ ಯೋಜನೆ ಸಹಕಾರಿ ಬ್ಯಾ0ಕ್ ಹಣಕಾಸು ಸ0ಬ0ಧ ಚಟುವಟಿಕೆ ಅಲ್ಲದೆ ಮೀನು ಕೃಷಿ, ತರಕಾರಿ ಉತ್ಪಾದನಾ ಕೃಷಿ ಮೂಲಕ ಇತರ ವಲಯಗಳಿಗೆ ಪಾದಾರ್ಪಣೆ ಮಾಡಿದೆ.  

      ಬ್ಯಾ0ಕಿನ ಕಾರ್ಯದರ್ಶಿ ರಾಜನ್ ನಾಯರ್.ಪಿ ಸ್ವಾಗತಿಸಿ, ಉಪಾಧ್ಯಕ್ಷ ಯೋಗೀಶ್ ಕು0ಜತ್ತೂರು ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries