HEALTH TIPS

ತ್ರಿಪುರಾದಲ್ಲಿ ಸಾವಿರ ಪುರುಷರಿಗೆ 1,011 ಮಹಿಳೆಯರು

             ಅಗರ್ತಲ: ತ್ರಿಪುರಾದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿದ್ದು, ಲಿಂಗಾನುಪಾತ ಪ್ರಕಾರ ಪ್ರತಿ 1,000 ಪುರುಷರಿಗೆ 1,011 ಮಹಿಳೆಯರಿದ್ದಾರೆ.

          ದೇಶದಲ್ಲಿ ಲಿಂಗಾನುಪಾತ ಪ್ರಮಾಣದಲ್ಲಿ ಮಹಿಳೆಯರ ಸಂಖ್ಯೆ ಇಳಿಕೆಯಾಗುತ್ತಿದ್ದರೆ, ತ್ರಿಪುರಾದಲ್ಲಿ ಮಾತ್ರ ವಿರುದ್ಧವಾಗಿದೆ. ಹೊಸ ಸಮೀಕ್ಷೆಯೊಂದರ ಪ್ರಕಾರ, ಇಲ್ಲಿ ಗಂಡು ಹಾಗೂ ಹೆಣ್ಣುಮಕ್ಕಳ ಅನುಪಾತವು 1,000:1,011 ಇದೆ.

          ಇಲ್ಲಿ 2015-16ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಈ ಅನುಪಾತವು 1,000:998 ಇತ್ತು. ಈಗ ಮಹಿಳೆಯರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ ಎಂದು ರಾಜ್ಯಶಿಕ್ಷಣ ಸಚಿವ ರತನ್‌ ನಾಥ್‌ ತಿಳಿಸಿದ್ದಾರೆ.

         ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ ಮ್ಯಾನೇಜ್‌ಮೆಂಟ್‌ ರಿಸರ್ಚ್‌ ಸಂಸ್ಥೆಯು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು(ಎನ್‌ಎಫ್‌ಎಚ್‌ಎಸ್‌-5) ನಡೆಸಿದ್ದು, ಇದರ ಪ್ರಕಾರ ತ್ರಿಪುರಾದ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದ್ದು, ನಗರ ಪ್ರದೇಶದಲ್ಲಿ ಪ್ರತಿ 1000 ಪುರುಷರಿಗೆ 956 ಹೆಣ್ಣುಮಕ್ಕಳಿದ್ದಾರೆ.

            2015-16ಕ್ಕೆ ಹೋಲಿಸಿದರೆ 2019-20 ರಲ್ಲಿ ಜನರ ಸಾಮಾಜಿಕ -ಆರ್ಥಿಕ ಸ್ಥಿತಿಯೂ ಉತ್ತಮ ಮಟ್ಟಕ್ಕೇರಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

       ಸಮೀಕ್ಷೆ ವರದಿ ಪ್ರಕಾರ, ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ರಾಜ್ಯದ ಶೇಕಡ 98.2 ಮನೆಗಳಿಗೆ ವಿದ್ಯುತ್‌ ಸೌಲಭ್ಯ ದೊರಕಿದೆ. ಶೌಚಾಲಯ ವ್ಯವಸ್ಥೆಯು ಶೇಕಡ 73.6 ಪ್ರಮಾಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

     ನೀತಿ ಆಯೋಗದ ಪ್ರಕಾರ, 2013-15ನೇ ಜನಗಣತಿ ಪ್ರಕಾರ ಭಾರತದಲ್ಲಿ ಗಂಡು- ಹೆಣ್ಣು ಅನುಪಾತವು 1,000:900 ಇದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries