ತಿರುವನಂತಪುರ: ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿರುವ ರಾಜ್ಯದ ಏಳು ಸ್ಥಳೀಯಾಡಳಿತ ವಾರ್ಡ್‍ಗಳಿಗೆ ಚುನಾವಣೆ ಜನವರಿ 21 ರಂದು ನಡೆಯಲಿದೆ. ಮತಗಳ ಎಣಿಕೆ 22 ನಡೆಯಲಿದೆ. ನಾಮಪತ್ರಗಳನ್ನು ಜನವರಿ 4 ರವರೆಗೆ ಸಲ್ಲಿಸಬಹುದು. ಸಂಜೆ 5 ಗಂಟೆಗೆ ಪರಿಶೀಲನೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ನಾಮಪತ್ರ ಸಲ್ಲಿಕೆಯ ಅಂತಿಮ ದಿನಾಂಕ ಜನವರಿ 7 ಆಗಿದೆ. ಮತದಾನ ಜನವರಿ 21 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ. ಈ ಬಗ್ಗೆ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.
ವಿಶೇಷ ಚುನಾವಣೆಗಳು ಕೊಲ್ಲಂ ಪದ್ಮನ ಪಂಚಾಯತಿಯ ಪರಂಬಿಮುಕ್ಕು, ಚೋಳ, ಆಲಪ್ಪುಳ ಚೆಟ್ಟಿಕುಳಂಗರ ಪಂಚಾಯತ್‍ನಲ್ಲಿ ಪಿಎಚ್‍ಸಿ ವಾರ್ಡ್, ಕಳಮೇಶೇರಿ ಪುರಸಭೆಯ 37 ನೇ ವಾರ್ಡ್, ತ್ರಿಶೂರ್ ಕಾಪೆರ್Çರೇಶನ್‍ನ ಪುಲ್ಲುವಾಝಿ ವಾರ್ಡ್, ಕೊಝಿಕ್ಕೋಡ್ ಮಾವೂರ್ ಪಂಚಾಯತಿಯ ತತೂರ್ ಪೆÇಯಿಲ್ ವಾರ್ಡ್ ಮತ್ತು ಕಣ್ಣೂರು ಜಿ.ಪಂ.ನ ತಿಲ್ಲಂಗೇರಿ ಎಂಬ ಪ್ರದೇಶಗಳಿಗೆ ಚುನಾವಣೆ ನಡೆಯಲಿದೆ. ಚುನಾವಣಾ ಅಂಕಿಅಂಶಗಳನ್ನು ಸಲ್ಲಿಸಲು ಫೆಬ್ರವರಿ 20 ಕೊನೆಯ ದಿನಾಂಕವಾಗಿದೆ.





