ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಕಾಸರಗೊಡು ಜಿಲ್ಲೆಯಲ್ಲಿ 20847 ಮಂದಿಗೆ ಅಂಚೆ ಮತಪತ್ರಗಳ ವಿತರಣೆ ನಡೆಸಲಾಗಿದೆ. ತ್ರಿಸ್ತರ ಪಂಚಾಯತ್ ಗಳಲ್ಲಿ ತಲಾ 6642 ಮಮದಿಗೂ, ಮೂರು ನಗರಸಭೆಗಳಲ್ಲಿ 921 ಮಂದಿಗೂ ವಿತರಣೆ ನಡೆಸಲಾಗಿದೆ.
3127 ಮಂದಿಗೆ ವಿಶೇಷ ಮತಪತ್ರಗಳ ವಿತರಣೆ
ಆರೋಗ್ಯ ಇಲಾಖೆ ಅಧಿಕಾರಿಗಳ ಸರ್ಟಿಫೈಡ್ ಪಟ್ಟಿಯಲ್ಲಿರುವ 4569 ಮಂದಿಯಲ್ಲಿ 3127 ಮಂದಿಗೆ ಕಾಸರಗೊಡು ಜಿಲ್ಲೆಯಲ್ಲಿ ವಿಶೇಷ ಅಂಚೆ ಮತಪತ್ರ ವಿತರಣೆ ನಡೆಸಲಾಗಿದೆ. ಇವರಲ್ಲಿ ಒಟ್ಟು 3156 ಮಂದಿ ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. 880 ಮಂದಿಗೆ ಅಂಚೆ ಮೂಲಕ, 2247 ಮಂದಿಗೆ ವಿಶೇಷ ಪೆÇೀಲಿಂಗ್ ಅಧಿಕಾರಿಗಳ ಮೂಲಕವೂ ಮತಪತ್ರ ವಿತರಿಸಲಾಗಿದೆ.
49 ವಿಶೇಷ ಮತದಾತರಿಂದ ಮತಗಟ್ಟೆಗಳಲ್ಲಿ ಮತದಾನ:
ಕೋವಿಡ್ ಪಾಸಿಟಿವ್ ರೋಗಿಗಲೂ, ನಿಗಾದಲ್ಲಿರುವವರೂ ಆಗಿರುವ 49 ಮಮದಿ ವಿಶೇಷ ಮತದಾತರು ಮತದಾನದಂದು ಕಾಸರಗೋಡು ಜಿಲ್ಲೆಯಲ್ಲಿ ಮತಗಟ್ಟೆಗಳಿಗೆ ತೆರಳಿ ಮತಚಲಾಯಿಸಿದರು. ಇವರಲ್ಲಿ 8 ಮಂದಿ ಕೋವಿಡ್ ರೋಗಿಗಳೂ, 41 ಮಂದಿ ನಿಗಾದಲ್ಲಿರುವವರೂ ಆಗಿದ್ದರು.


