ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಕಾಸರಗೋಡು ಜಿಲ್ಲೆಯಲ್ಲಿ ಇಂದು ಮತಗಗಣನೆ ನಡೆಯಲಿದ್ದು, ವಿದ್ಯುನ್ಮಾನ ಮತಯಂತ್ರಗಳ ಮತಗಣನೆ ಇಂತಿದೆ.
ಮತಗಣನೆಯ ದಿನ ಇ.ವಿ.ಎಂ. ಮತಯಂತ್ರವನ್ನು ಮೇಜಿಗೆ ತಂದು ಸೀಲ್ ಮತ್ತು ಇತರ ವಿದಾನಗಳ ಪರಿಶೀಲನೆ ನಡೆಸಿ ಕಂಟ್ರೋಲ್ ಯೂನಿಟ್ ನ ಫಲಿತಾಂಶ ಗುಂಡಿ(ರಿಸಲ್ಟ್ ಬಟನ್) ಅದುಮಿ ಫಲಿತಾಂಶ ಪ್ರಕಟಿಸಲಾಗುವುದು. ಈ ಗುಂಡಿ ಅದುಮುವ ವೇಳೆ ಕಂಟ್ರೋಲ್ ಯೂನಿಟ್ ನ ಡಿಸ್ಪ್ಲೇ ಪಾನೆಲ್ ನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಕಂಟ್ರೋಲ್ ಯೂನಿಟ್ ಚಟುವಟಿಕೆ ನಡೆಸುವ ವೆಳೆ ಪ್ರತಿ ಅಭ್ಯರ್ಥಿಗೆ ಲಭಿಸಿರುವ ಮತಗಳ ಗಣನೆ ನಡೆಸಲೂ ಅದು ದಾಖಲೀಕರಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳಿಗೆ ಮತ್ತು ಏಜೆಂಟರಿಗೆ ಸಾಧ್ಯವಾಗುವುದು.
ಮತಗಣನೆ ವೇಳೆ ಇ.ವಿ.ಎಂ.ನ ಚಟುವಟಿಕೆ ತೃಪ್ತಿಕರವಲ್ಲದೇ ಇದ್ದಲ್ಲಿ, ಫಲಿತಾಂಶ ಕಮಟ್ರೋಲ್ ಯೂನಿಟ್ ಮ ಡಿಸ್ಪ್ಲೇ ಪಾನೆಲ್ ನಲ್ಲಿ ಪ್ರಕಟಗೊಳ್ಳದೇ ಇದ್ದಲ್ಲಿ, ಆಕ್ಸಿಲರಿ ಡಿಸ್ಪ್ಲೇ ಯೂನಿಟ್ ಬಳಸಿ ಫಲಿತಾಂಶ ನೋಡಬಹುದಾಗಿದೆ. ಆಕ್ಸಿಲರಿ ಡಿಸ್ಪ್ಲೇ ಯೂನಿಟ್ ನಲ್ಲೂ ಫಲಿತಾಂಶ ಪರಕಟಗೊಳ್ಳದೇ ಇದ್ದಲ್ಲಿ, ರಿಸಲ್ಟ್ ಪ್ರಿಂಟರ್ ಬಳಸಿ ಪ್ರಿಂಟ್ ಪಡೆಯಬಹುದಾಗಿದೆ.
ಮತ್ತೆ ಕಂಟ್ರೋಲ್ ಯೂನಿಟ್ ನಲ್ಲಿ ತಡೆ ಸಮೌವಿಸಿದಲ್ಲಿ ಆ ವಿಧಾನಸಭೆಯ ಇತರ ಮತಯಂತ್ರಗಳ ಗಣನೆಯ ನಂತರ ರಿಟನಿರ್ಂಗ್ ಅಧಿಕಾರಿ ಈ ಮಾಹಿತಿಯನ್ನು ರಾಜ್ಯ ಚುನಾವಣೆ ಆಯೋಗಕ್ಕೆ ಸಲ್ಲಿಸಬೇಕು. ರಾಜ್ಯ ಚುನಾವಣೆ ಆಯೋಗದ ಆದೇಶ ಪ್ರಕಾರ ರಿಟನಿರ್ಂಗ್ ಅಧಿಕಾರಿ ಫಲಿತಾಂಶ ಪ್ರಕಟಿಸಲಿದ್ದಾರೆ.


