HEALTH TIPS

8+8+3-ಅತಂತ್ರದಲ್ಲಿ ಬದಿಯಡ್ಕ ಗ್ರಾ.ಪಂ.- ಬಿಜೆಪಿ ಅಧಿಕಾರ ತ್ಯಾಗದ ಸಾಧ್ಯತೆ?

      ಬದಿಯಡ್ಕ:ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಫಲಿತಾಂಶಗಳು ಸಂಪೂರ್ಣಗೊಳ್ಳುತ್ತಿದ್ದು ಹೆಚ್ಚಿನ ಕಡೆಗಳಲ್ಲಿ ಅನಿರೀಕ್ಷಿತ ಜನಾಂದೋಲನದ ಚಿತ್ರಣ ಹೊರಬಿದ್ದಿದೆ.
     ಬದಿಯಡ್ಕ ಗ್ರಾ.ಪಂ.ನ 19 ವಾರ್ಡ್ ಗಳ ಎಣಿಕೆ ಪೂರ್ಣಗೊಂಡಿದ್ದು ಫಲಿತಾಂಶ ಅಚ್ಚರಿ ಹಾಗೂ ಕುತೂಹಲಕ್ಕೆ ನಾಂದಿಹಾಡಿದೆ.
     ಪಂಚಾಯತು ವಾರ್ಡ್ ಗಳ ಪ್ಯೆಕಿ 8 ವಾರ್ಡ್ ಗಳಲ್ಲಿ ಬಿಜೆಪಿ,8 ವಾರ್ಡ್ ಗಳಲ್ಲಿ ಯುಡಿಎಫ್ ಹಾಗೂ 3 ವಾರ್ಡ್ ಗಳಲ್ಲಿ ಎಲ್ಡಿಎಫ್ ವಿಜಯಶಾಲಿಯಾಗಿದೆ.
    ಬಿಜೆಪಿ ಮತ್ತು ಯುಡಿಎಫ್ ಸಮಬಲ ಕಾಯ್ದುಕೊಂಡಿರುವುದರಿಂದ ಗ್ರಾ.ಪಂ.ಚುಕ್ಕಾಣಿಯನ್ನು ಯಾರು ಹೊಂದುವರೆಂಬುದು ಕುತೂಹಲ ಮೂಡಿಸಿದೆ.ಯುಡಿಎಫ್ ನ ಆಡಳಿತದಲ್ಲಿದ್ದ ಗ್ರಾ.ಪಂ.ಆಡಳಿತವನ್ನು ವಶಪಡಿಸಬೇಕೆಂಬುದು ಬಿಜೆಪಿಯ ಸುಧೀರ್ಘ ಕಾಲದ ಆಕಾಂಕ್ಷೆಯಾಗಿದ್ದರೂ ಈಬಾರಿಯೂ ಒಂದು ಸ್ಥಾನದ ಅಂತರದಿಂದ ಕ್ಯೆತಪ್ಪಿದೆ. ಬಿಜೆಪಿ ಯ ಪ್ರಮುಖ ವಾರ್ಡ್ ಆಗಿರುವ ನೀರ್ಚಾಲು ಕ್ಯೆತಪ್ಪಿರುವುದು ಪಕ್ಷಕ್ಕೆದೊಡ್ಡ ಹಿನ್ನಡೆಯಾಗಿದೆ.
         ಅಧಿಕಾರ ತ್ಯಾಗದ ಸಾಧ್ಯತೆ:
    ಯುಡಿಎಫ್-ಬಿಜೆಪಿಗಳೆರಡೂ ಸಮಬಲವಾಗಿರುವುದರಿಂದ ಎಡಪಕ್ಷದ ಬೆಂಬಲ ಬೇಕಾಗಬಹುದು. ಬಹುಮತ ಸಾಬೀತು ಸಂದರ್ಭ ಎದುರಾದರೆ ನಿಸ್ಸಂಶಯವಾಗಿ ಎಡಪಕ್ಷ ಯುಡಿಎಫ್ ನ್ನು ಬೆಂಬಲಿಸುವ ಸಾಧ್ಯತೆಗಳೇ ಹೆಚ್ಚಿರುವುದರಿಂದ ಬಿಜೆಪಿ ಗ್ರಾ.ಪಂ. ಆಡಳಿತದಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚೆಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.
      ಪಕ್ಷಗಳ ಬಲಾಬಲ:
1-Kilingar-BJP
2-Neerchal-UDF
3-Kuntikana-UDF
4-Kuntalmoola-BJP
5-Pallathadka-LDF
6-Kednji - BJP
7-Kuduppamkuzi - UDF
8-Vidyagiri - BJP
9-Badiadka -  BJP
10-Beejanthadka - UDF
11-Chedakal  - UDF
12-Peradala   - LDF
13-kanyapadi   - LDF 
14-Pattaje   -BJP
15-Manya - UDF
16-Birminaduka - UDF
17-Malladka - BJP
18-Kunjar - UDF
19-Bela - BJP

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries