HEALTH TIPS

ಬ್ರಿಟನ್ ನಲ್ಲಿ ಕೊರೋನಾ ವೈರಸ್ ನ ರೂಪಾಂತರ ತಳಿ ಪತ್ತೆ: ಡಬ್ಲ್ಯು ಹೆಚ್ ಒ ಈ ಬಗ್ಗೆ ಏನ್ ಹೇಳತ್ತೆ?

           ಲಂಡನ್: ಕೊರೋನಾ ವೈರಸ್ ಸಮಸ್ಯೆ ಇನ್ನೇನು ಮುಗಿಯಿತು ಎನ್ನುವ :ಹಂತದಲ್ಲಿ ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್ ನಿಂದ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿರುವುದು ಆತಂಕ ಮೂಡಿಸಿದೆ. 

       ರೂಪಾಂತರಗೊಂಡ ಕೊರೋನಾ ವೈರಸ್ ಸೋಂಕು ಸುಮಾರು 1000 ಕ್ಕೂ ಹೆಚ್ಚು ಜನರಲ್ಲಿ ಕಂಡಬಂದಿದೆ. ಡಬ್ಲ್ಯುಹೆಚ್ ಒ ಈ ವಿಷಯವನ್ನು ಗಮನಿಸುತ್ತಿದ್ದು, ಪ್ರಾಥಮಿಕ ವರದಿಗಳ ಪ್ರಕಾರ, ಈ ಹೊಸ ರೂಪಾಂತರಗೊಂಡ ಕೊರೋನ ವೈರಸ್ ಈಗಾಗಲೇ ಸಿದ್ಧವಾಗಿರುವ ಲಸಿಕೆಯ ಪರಿಣಾಮಕಾರಿತ್ವದ ಮೇಲೆ ಪ್ರಭಾವ ಬೀರುವ ಸಾಮಥ್ರ್ಯ ಹೊಂದಿಲ್ಲ ಎಂದು ವಿಶ್ಲೇಷಿಸಿದೆ. 

     ಬ್ರಿಟನ್ ನ ಆರೋಗ್ಯ ಸಚಿವ ಮಾಟ್ ಹ್ಯಾನ್ಕಾಕ್, ರೂಪಾಂತರಗೊಂಡ ವೈರಸ್ ನ ಪ್ರಕರಣಗಳು ವರದಿಯಾಗಿರುವುದರ ಬಗ್ಗೆ ಸಂಸತ್ ನಲ್ಲಿ ಘೋಷಿಸಿದ್ದಾರೆ. 

      " ಡಬ್ಲ್ಯುಹೆಒ ತುರ್ತು ಆರೋಗ್ಯ ಯೋಜನೆಗಳ ವಿಭಾಗದ ನಿರ್ದೇಶಕ ಮೈಕ್ ರ್ಯಾನ್ ಈ ಬಗ್ಗೆ ಮಾತನಾಡಿದ್ದು, ಸಂಸ್ಥೆ ಬ್ರಿಟನ್ ನ ಹೊಸ ಪ್ರಕರಣಗಳ ಬಗ್ಗೆ ನಿಗಾ ವಹಿಸುತ್ತಿದೆ. ಹೊಸದಾಗಿ ರೂಪಾಂತರಗೊಂಡಿರುವ ವೈರಾಣು ಈ ಹಿಂದಿನ ಕೊರೋನಾಗಿಂತಲೂ ಗಂಭೀರ ಸ್ವರೂಪದ್ದೇ? ಬೇಗ ಹರಡುತ್ತದೆಯೇ? ಈ ಹೊಸ ಮಾದರಿಯ ಸೋಂ ಈಗಾಗಲೇ ಸಿದ್ಧಪಡಿಸಿರುವ ಲಸಿಕೆಗಳ ಮೇಲೆ ಪಾರಿಣಾಮ ಉಂಟುಮಾಡಲಿದೆಯೇ ಇಲ್ಲವೇ ಎಂಬ ಮುಂತಾದ ಯಾವುದೇ ಪ್ರಶ್ನೆಗಳಿಗೆ ಸಧ್ಯಕ್ಕೆ ಉತ್ತರವಿಲ್ಲ, ಇವುಗಳಿಗೆ ಸಂಬಧಿಸಿದಂತೆ ಸಾಕ್ಷ್ಯ ಸಮೇತವಾಗಿ ಯಾವುದೂ ಸಾಬೀತಾಗಿಲ್ಲ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries