HEALTH TIPS

ಜಿಎಸ್‍ಟಿ ಇತಿಹಾಸದಲ್ಲೇ ದಾಖಲೆ ತೆರಿಗೆ ಸಂಗ್ರಹ, ಸತತ 3ನೇ ಬಾರಿಗೆ ಲಕ್ಷ ಕೋಟಿ ರೂ. ದಾಟಿದೆ!

       ನವದೆಹಲಿ: ಜಿಎಸ್ ಟಿ ತೆರಿಗೆ ಸಂಗ್ರಹ ಆರಂಭಗೊಂಡಾಗಿನಿಂದ ಇದೇ ಮೊದಲ ಬಾರಿಗೆ ದಾಖಲೆಯ ತೆರಿಗೆ ಸಂಗ್ರಹವಾಗಿದೆ.

       ಡಿಸೆಂಬರ್ ತಿಂಗಳಲ್ಲಿ ಜಿಎಸ್‍ಟಿ ತೆರಿಗೆ ಸಂಗ್ರಹ 1,15 ಲಕ್ಷ ಕೋಟಿ ರೂಪಾಯಿ ಮೀರಿ ಹೊಸ ದಾಖಲೆ ಬರೆಯಲಾಗಿದೆ.

      ಇದರಲ್ಲಿ ಸಿಜಿಎಸ್ ಟಿ 21,365 ಕೋಟಿ, ಎಸ್ ಜಿಎಸ್ ಟಿ 27,804 ಕೋಟಿ, ಐಜಿಎಸ್ ಟಿ  57,426 ಕೋಟಿ(ಸರಕು ಗಳ ಆಮದಿಗೆ 27,050 ಕೋಟಿ ರೂ.ಗಳನ್ನು ಸೇರಿ) ಮತ್ತು ಸೆಸ್ 8,579 ಕೋಟಿ(ಸರಕುಗಳ ಆಮದಿನ ಮೇಲೆ 971 ಕೋಟಿ ರೂ.) ಸೇರಿದೆ.

      ಡಿಸೆಂಬರ್ 31ರ ವರೆಗಿನ ಜಿಎಸ್ ಟಿ ಆರ್-3ಬಿ ರಿಟರ್ನ್ಸ್ ಸಲ್ಲಿಕೆಯಾದ ಒಟ್ಟು ಸಂಖ್ಯೆ 87 ಲಕ್ಷ ರೂಪಾಯಿ ಆಗಿದೆ. ಈ ಮೂಲಕ ದೇಶದಲ್ಲೇ ಡಿಸೆಂಬರ್ ನಲ್ಲಿ  ಹೆಚ್ಚು ಮೊತ್ತದ  ಜಿಎಸ್ ಟಿ  ಸಂಗ್ರಹವಾಗಿದೆ ಎಂದು ಹಣಕಾಸು ಇಲಾಖೆಯ ಹೇಳಿದೆ.

       ಈ ಕುರಿತಂತೆ ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು, ಸರಕಾರವು ರೂ.23,276 ಕೋಟಿಯನ್ನು ಸಿಜಿಎಸ್ ಟಿಗೆ ಮತ್ತು ಐಜಿಎಸ್ಟಿಯಿಂದ  ರೂ.17,681 ಕೋಟಿಗಳನ್ನು ನಿಯಮಿತ ಒಪ್ಪಂದದಂತೆ ಇತ್ಯರ್ಥಪಡಿಸಿದೆ.

      ಜಿಎಸ್ ಟಿ ಆದಾಯದಲ್ಲಿ ಇತ್ತೀಚಿನ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿ, 2020ರ ಡಿಸೆಂಬರ್ ತಿಂಗಳ ಆದಾಯ ಕಳೆದ ವರ್ಷದ ಇದೇ ತಿಂಗಳ ಜಿಎಸ್ ಟಿ ಆದಾಯಕ್ಕಿಂತ ಶೇ.12ರಷ್ಟು ಹೆಚ್ಚಾಗಿದೆ ಎಂದೂ  ಹೇಳಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries