HEALTH TIPS

ರಾಜ್ಯದಲ್ಲಿ ನಿಯಂತ್ರಣಕ್ಕೆ ಬಾರದ ಕೋವಿಡ್-ಇಂದು 6815 ಜನರಲ್ಲಿ ಸೋಂಕು ಪತ್ತೆ-ಕಾಸರಗೋಡಿಗೆ ಸಮಾಧಾನ-ಇಂದು 64 ಮಂದಿಗೆ ಸೋಂಕು ದೃಢ

                      

           ತಿರುವನಂತಪುರ: ರಾಜ್ಯದಲ್ಲಿ ಇಂದು 6815 ಜನರಿಗೆ ಕೋವಿಡ್ ಖಚಿತವಾಗಿದೆ. ಎರ್ನಾಕುಳಂ 1031, ಕೋಝಿಕ್ಕೋಡ್ 770, ಕೊಟ್ಟಾಯಂ 704, ಪತ್ತನಂತಿಟ್ಟು 654, ಕೊಲ್ಲಂ 639, ಮಲಪ್ಪುರಂ 537, ತ್ರಿಶೂರ್ 441, ಆಲಪ್ಪುಳ 422, ತಿರುವನಂತಪುರ 377, ಇಡುಕ್ಕಿ 336, ವಯನಾಡ್ 322, ಕಣ್ಣೂರು 281, ಪಾಲಕ್ಕಾಡ್ 237, ಕಾಸರಗೋಡು 64 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

           ಕಳೆದ 24 ಗಂಟೆಗಳಲ್ಲಿ ಯುಕೆ ಆಗಮಿಸಿದ ಇಬ್ಬರಲ್ಲಿ ಕೋವಿಡ್ ಖಚಿತಪಡಿಸಲಾಗಿದೆ. ಅಲ್ಲದೆ ಇತ್ತೀಚೆಗೆ ಯುಕೆಯಿಂದ ಬಂದ 65 ಜನರಲ್ಲಿ ಈವರೆಗೆ ಕೋವಿಡ್ ದೃಢಪಡಿಸಲಾಗಿದ್ದು ಅವರ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಎನ್‍ಐವಿ ಪುಣೆಗೆ ಕಳುಹಿಸಲಾಗಿದೆ. ಒಟ್ಟು 9 ಜನರಿಗೆ ರೂಪಾಂತರಿತ ವೈರಸ್ ಇರುವುದು ಪತ್ತೆಯಾಗಿದೆ.

           ಕಳೆದ 24 ಗಂಟೆಗಳಲ್ಲಿ 61,532 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.11.08. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್‍ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ. ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 90,81,931 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

               ಕಳೆದ 24 ಗಂಟೆಗಳಲ್ಲಿ 18 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 3524 ಕ್ಕೆ ಏರಿಕೆಯಾಗಿದೆ. 

          ಇಂದು, ಸೋಂಕು ಪತ್ತೆಯಾದವರಲ್ಲಿ 91 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 6219 ಜನರಿಗೆ ಸೋಂಕು ತಗುಲಿತು. 447 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 977, ಕೋಝಿಕೋಡ್ 729, ಕೊಟ್ಟಾಯಂ 670, ಪತ್ತನಂತಿಟ್ಟು 586, ಕೊಲ್ಲಂ 626, ಮಲಪ್ಪುರಂ 517, ತ್ರಿಶೂರ್ 430, ಆಲಪ್ಪುಳ 413, ತಿರುವನಂತಪುರ 251, ಇಡುಕಿ 322, ವಯನಾಡ್ 297, ಕಣ್ಣೂರು 216, ಪಾಲಕ್ಕಾಡ್ 126, ಕಾಸರಗೋಡು 59 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

          58 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಖಚಿತಪಡಿಸಲಾಗಿದೆ. ಕಣ್ಣೂರು 10, ಕೋಝಿಕ್ಕೋಡ್ 9, ಎರ್ನಾಕುಳಂ 8, ಪತ್ತನಂತಿಟ್ಟು 7, ಕೊಲ್ಲಂ, ವಯನಾಡ್ 5,  ಪಾಲಕ್ಕಾಡ್ 4, ತ್ರಿಶೂರ್ 3, ತಿರುವನಂತಪುರ, ಇಡುಕಿ 2 , ಆಲಪ್ಪುಳ, ಮಲಪ್ಪುರಂ ಮತ್ತು ಕಾಸರಗೋಡು ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾಗಿದ್ದಾರೆ.

          ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 7364 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 375, ಕೊಲ್ಲಂ 2303, ಪತ್ತನಂತಿಟ್ಟು 1041, ಆಲಪ್ಪುಳ 264, ಕೊಟ್ಟಾಯಂ 314, ಇಡಕ್ಕಿ 77, ಎರ್ನಾಕುಳಂ 803, ತ್ರಿಶೂರ್ 442, ಪಾಲಕ್ಕಾಡ್ 199, ಮಲಪ್ಪುರಂ 540, ಕೊಝಿಕ್ಕೋಡ್ 510, ವಯನಾಡ್ 192, ಕಣ್ಣೂರು 242, ಕಾಸರಗೋಡು 62 ಎಂಬಂತೆ ಪರೀಕ್ಷಾ ಫಲಿತಾಂಶ ನೆಗೆಟಿವ್ ಆಗಿದೆ.  ಇದರೊಂದಿಗೆ 69,691 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 7,90,757 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

        ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,09,118 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,97,656 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 11,462 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1460 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಹೊಸ ಹಾಟ್‍ಸ್ಪಾಟ್ ಇಲ್ಲ. 5 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ, ಪ್ರಸ್ತುತ ಒಟ್ಟು 405 ಹಾಟ್‍ಸ್ಪಾಟ್‍ಗಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries