ಕುಂಬಳೆ: ಆಲಪ್ಪುಳ ಜಿಲ್ಲೆಯ ಚೇರ್ತಲದಲ್ಲಿ ಆರ್.ಎಸ್.ಎಸ್.ನಾಗಕುಳಂಗರ ಶಾಖೆಯ ಮುಖ್ಯ ಶಿಕ್ಷಕ್ ನಂದುಕೃಷ್ಣ(23)ರನ್ನು ಎಸ್.ಡಿ.ಪಿ.ಐ ಕಾರ್ಯಕರ್ತರ ತಂಡ ಬರ್ಬರವಾಗಿ ಹತ್ಯೆಗೈದ ಘಟನೆಯನ್ನು ಖಂಡಿಸಿ ಸಂಘಪರಿವಾರದ ವತಿಯಿಂದ ಗುರುವಾರ ಕುಂಬಳೆಯಲ್ಲಿ ಪ್ರತಿಭಟನೆ ನಡೆಯಿತು.
ಆರ್.ಎಸ್.ಎಸ್. ಮಂಜೇಶ್ವರ ಮಂಡಲ ಸಹ ಕಾರ್ಯವಾಹ್ ವಿಘ್ನೇಶ್ ಪ್ರತಾಪನಗರ, ಭಾಜಪ ಜಿಲ್ಲಾ ಸಮಿತಿ ಸದಸ್ಯ ವಿನೋದ್ ಕಡಪ್ಪರ ಮಾತನಾಡಿದರು. ಸಂಘದ ನೇತಾರ ದಿನೇಶ್ ಕುಂಬಳೆ, ಬಿಜೆಪಿ ನೇತಾರರಾದ ರಮೇಶ್ ಭಟ್, ಸುಧಾಕರ ಕಾಮತ್, ಬಿ.ಎಂ.ಎಸ್.ಮುಖಂಡ ಐತ್ತಪ್ಪ ನಾರಾಯಣಮಂಗಲ ಹಾಗೂ ಹಿಂದೂ ಐಕ್ಯವೇದಿಯ ವಸಂತಿ ಮೊದಲಾದವರು ಭಾಗವಹಿಸಿದ್ದರು. ಜಿತೇಶ್ ನಾಯ್ಕಾಪು ಸ್ವಾಗತಿಸಿ, ಮಹೇಶ್ ಪುಣಿಯೂರು ವಂದಿಸಿದರು. ಪ್ರತಿಭಟನೆಯ ಅಂಗವಾಗಿ ಕುಂಬಳೆ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು.


