ಮಧೂರು: ಅರಂತೋಡು ಶ್ರೀಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವ ಇತ್ತೀಚೆಗೆ ಸರಳ ವಿಧಿವಿಧಾನಗಳೊಂದಿಗೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಗಣಪತಿ ಹವನ, ಶತರುದ್ರಾಭಿಷೇಕ, ನವಕಾಭಿಷೇಕ, ಮಹಾಪೂಜೆ, ಪ್ರಸಾದ ವಿತರರಣೆ, ಭಜನಾ ಸಂಕೀರ್ತನೆ, ದೀಪಾರಾಧನೆ, ಸಾಮೂಹಿಕ ಕಾರ್ತಿಕ ಪೂಜೆ, ಶ್ರೀಭೂತಬಲಿ, ಶ್ರೀದೈವಗಳಿಗೆ ತಂಬಿಲ ಮೊದಲಾದ ಕಾರ್ಯಕ್ರಮಗಳು ನೆರವೇರಿತು.






