ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಥೈಕೊಂಡೋ ಜಿಲ್ಲಾ ರೆಫ್ರಿಯಾಗಿ ಆಯ್ಕೆ ಆಗಿರುವ ಜಿ.ವಿ.ಎಚ್.ಎಸ್.ಎಸ್ ಕಾರಡ್ಕ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಕಾರ್ತಿಕ್ ನ್ನು ಶಾಲೆಯ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾದ ನಿರ್ಮಲ್ ಕುಮಾರ್ ಮಾಸ್ತರ್, ಶಿವ ಪ್ರಸಾದ್, ಗ್ರಾ.ಪಂ. ಸದಸ್ಯ ಪ್ರಸೀದಾ, ರೂಪಾವತಿ, ಹಿರಿಯ ಅಧ್ಯಾಪಕಿ ಚಂದ್ರಿಕಾ ಟೀಚರ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


