ಕುಂಬಳೆ: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಯಕ್ಷಗಾನ ಶಿಬಿರದ ಸಮಾರೋಪ ಸಮಾರಂಭ ಫೆ.28 ರಂದು ಅಪರಾಹ್ನ ಎರಡು ಗಂಟೆಗೆ ಸೂರಂಬೈಲು ಗಣೇಶ ಮಂದಿರದಲ್ಲಿ ನಡೆಯಲಿದೆ.
ಕರ್ನಾಟಕ ಯಕ್ಷಗಾನ ಅಕಾಡಮಿಯ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ಅಧ್ಯಕ್ಷತೆ ವಹಿಸುವರು. ಅಕಾಡೆಮಿ ಸದಸ್ಯ ದಾಮೋದರ ಶೆಟ್ಟಿ ದೀಪ ಪ್ರಜ್ವಲನೆಗೈಯುವರು. ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ಸಮಾರೋಪ ಭಾಷಣ ಮಾಡುವರು. ಯಕ್ಷಗಾನ ಕಲಾವಿದ ಬಾಲಕೃಷ್ಣ ಮವ್ವಾರು, ಸಾಹಿತಿ ಸ್ನೇಹಲತ ದಿವಾಕರ್, ಸಂಶೋಧನ ವಿದ್ಯಾರ್ಥಿ ವಿದ್ಯಾಲಕ್ಷ್ಮಿ, ಕುಂಬಳೆ, ಆನಂದ ಭಂಡಾರಿ ಅತಿಥಿಗಳಾಗಿ ಭಾಗವಹಿಸುವರು. ಅಕ್ಷತಾ ಅಭಿಷೇಕ್, ನಾಟ್ಯಗುರುಗಳಾದ ದಿವಾಣ ಶಿವಶಂಕರ ಭಟ್, ಸಹಾಯಕ ಸಚಿನ್ ಶೆಟ್ಟಿ ಕುದ್ರೆಪಾಡಿ, ಸಿರಿಚಂದನ ಬಳಗದ ಮಾರ್ಗದರ್ಶಕ ಡಾ.ರತ್ನಾಕರ ಮಲ್ಲಮೂಲೆ, ಶಿಬಿರದ ಸಂಯೋಜಕ ಕಾರ್ತಿಕ್ ಪಡ್ರೆ, ಜೊತೆ ಕಾರ್ಯದರ್ಶಿ ಸೌಮ್ಯಾ ಪ್ರಸಾದ್ ಮುಂತಾದವರು ಉಪಸ್ಥಿತರಿರುವರು.

