HEALTH TIPS

ವಿಶ್ವಸಂಸ್ಥೆ ಕಾರ್ಯಸೂಚಿ: ಭಾರತ ಮತ್ತು ರಷ್ಯಾ ಜಂಟಿ ಸಮಾಲೋಚನೆ

        ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಸಮಿತಿಯ ಕಾರ್ಯಸೂಚಿ ಕುರಿತಾದ ಪ್ರಮುಖ ವಿಷಯಗಳ ಬಗ್ಗೆ ನಿಕಟವಾಗಿ ಕೆಲಸ ಮಾಡಲು ಭಾರತ ಮತ್ತು ರಷ್ಯಾ ನಿರ್ಧರಿಸಿದೆ.

       'ರಷ್ಯಾ ಮತ್ತು ಭಾರತವು ವಿಶ್ವಸಂಸ್ಥೆಯ ಕಾರ್ಯಸೂಚಿಯಲ್ಲಿನ ಪ್ರಮುಖ ವಿಷಯಗಳ ಕುರಿತಾಗಿ ಮಾಸ್ಕೊದಲ್ಲಿ ಮಂಗಳವಾರ ದ್ವಿಪಕ್ಷೀಯ ಸಮಾಲೋಚನೆ ನಡೆಸಿದೆ. ಈ ವೇಳೆ ಕಾರ್ಯಸೂಚಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಂಟಿಯಾಗಿ ಕೆಲಸ ಮಾಡಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ' ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಹೇಳಿದೆ.

        'ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾರ್ಯಸೂಚಿ ಬಗೆಗಿನ ಉಭಯ ಪಕ್ಷೀಯ ಸಮಾಲೋಚನೆಯನ್ನು ಎರಡೂ ದೇಶಗಳು ಶ್ಲಾಘಿಸಿವೆ. ಈ ಮೂಲಕ ಎರಡೂ ರಾಷ್ಟ್ರಗಳ ಸಂಬಂಧ ಇನ್ನಷ್ಟು ಸದೃಢಗೊಳ್ಳಲಿದೆ' ಎಂದು ಸಚಿವಾಲಯ ಹೇಳಿದೆ.

      ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತದ ತಾತ್ಕಾಲಿಕ ಸದಸ್ಯತ್ವದ (ಎರಡು ವರ್ಷಗಳ) ಅವಧಿ ಜನವರಿ 1 ರಂದು ಪ್ರಾರಂಭಗೊಂಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries