ಕಾಸರಗೋಡು: ವಿಧಾನಸಭೆ ಚುನಾವಣೆ ಸಂಬಂಧ ಕಾಸರಗೊಡು ಜಿಲ್ಲೆಯಲ್ಲಿ 1059967 ಮಂದಿ ಮತದಾತರು ಇದ್ದಾರೆ. ಇವರಲ್ಲಿ 2021 ಜ.20ರ ನಂತರ ನೂತನವಾಗಿ ಸೇರ್ಪಡೆಗೊಂಡವರು 26339 ಮತದಾರರು. ಈ ಸಾಲಿನಲ್ಲಿ 12152 ಪುರುಷರು, 14184 ಮಹಿಳೆಯರು, ಮೂವರು ತೃತೀಯ ಲಿಂಗಿಗಳ ಹೆಸರು ಸೇರ್ಪಡೆಗೊಳಿಸಲಾಗಿದೆ.
ಉದುಮ ವಿಧಾನಸಭೆ ಕ್ಷೇತ್ರದಲ್ಲಿ ಅತ್ಯಧಿಕ ಮಂದಿ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿದ್ದಾರೆ. ಇಲ್ಲಿ ಒಟ್ಟುಇ 6115 ಮಂದಿಯ ಹೆಸರು ಪಟ್ಟಿಯಲ್ಲಿ ನೂತನವಾಗಿ ಸೇರಿದೆ. ತ್ರಿಕರಿಪುರ ವಿದಾನಸಭೆ ಕ್ಷೇತ್ರದಲ್ಲಿ ಅತಿ ಕಡಿಮೆ ಮಂದಿಯ ಹೆಸರು ಮತದಾತರ ಪಟ್ಟಿಯಲ್ಲಿ ಸೇರಿದೆ. ಇಲ್ಲಿ 4480 ಮಂದಿಯ ಹೆಸರು ನೂತನವಾಗಿ ಸೇರ್ಪಡೆಗೊಂಡಿದೆ.
ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿದವರ ಸಂಖ್ಯೆ ಈ ರೀತಿ ಇದೆ.
ಕ್ಷೇತ್ರ-ಪುರುಷರು-ಮಹಿಳೆಯರು-ತೃತೀಯ ಲಿಂಗಿಗಳು-ಒಟ್ಟು ಸಂಖ್ಯೆ ಎಂಬ ಕ್ರಮದಲ್ಲಿ :
ಮಂಜೇಶ್ವರ-2342, 2621-0-4963.
ಕಾಸರಗೋಡು-2546-3178-1-5725.
ಉದುಮಾ-2674-3439-2-6115.
ಕಾಞಂಗಾಡ್-2423-2633-0-5056.
ತ್ರಿಕರಿಪುರ-2167-2313-0-4480.
ಈ ಮೂಲಕ ವಿಧಾನಸಭೆ ಚುನಾವಣೆ ಸಂಬಂಧ ಮತಪಟ್ಟಿಯಲ್ಲಿ 1630 ಸರ್ವೀಸ್ ಮತದಾತರು ಸಹಿತ 1058337 ಮತದಾತರಿದ್ದಾರೆ. ಇವರಲ್ಲಿ 516919 ಮಂದಿ ಪುರುಷರು, 541412 ಮಂದಿ ಮಹಿಳೆಯರು, 6 ತೃತೀಯ ಲಿಂಗಿಗಳು ಇದ್ದಾರೆ.
ಜಿಲ್ಲೆಯ ಒಟ್ಟು ಮತದಾತರ ಸಂಖ್ಯೆ:
ಕ್ಷೇತ್ರ- ಮತಗಟ್ಟೆಗಳು-ಪೆÇೀಲಿಂಗ್ ಸ್ಟೇಷನ್ ಲೊಕೇಶನ್ಸ್-ಪುರುಷರು, ಮಹಿಳೆಯರು-ತೃತೀಯ ಲಿಂಗಿಗಳು- ಒಟ್ಟು ಸಂಖ್ಯೆ ಎಂಬ ಕ್ರಮದಲ್ಲಿ :
ಮಂಜೇಶ್ವರ: 336-118-111000-110682-0-221682.
ಕಾಸರಗೋಡು: 296-102-100578-101233-1-201812.
ಉದುಮಾ: 316-86-104627-109580-2-214209.
ಕಾಞಂಗಾಡ್ : 336-100-104651-113732-2-218385.
ತ್ರಿಕರಿಪುರ: 307-118-96063-106185-1-202249.
3369 ಆನಿವಾಸಿ ಮತದಾತರು:
ಕಾಸರಗೋಡು ಜಿಲ್ಲೆಯಲ್ಲಿ 3369 ಮಂದಿ ಆನಿವಾಸಿ ಮತದಾತರಿದ್ದಾರೆ. ಇವರಲ್ಲಿ 3242 ಮಂದಿ ಪುರುಷರು, 127 ಮಂದಿ ಮಹಿಳೆಯರು ಇದ್ದಾರೆ.
ಕ್ಷೇತ್ರ : ಪುರುಷರು-ಮಹಿಳೆಯರು-ತೃತೀಯ ಲಿಂಗಿಗಳು-ಒಟ್ಟು ಸಂಖ್ಯೆ ಎಂಬ ಕ್ರಮದಲ್ಲಿ:
ಮಂಜೇಶ್ವರ : 622-22-0-644.
ಕಾಸರಗೋಡು: 220-22-0-242.
ಉದುಮಾ : 330-23-0-353.
ಕಾಞಂಗಾಡ್ : 857-28-0-885.
ತ್ರಿಕರಿಪುರ : 1213-32-0-1245.



