HEALTH TIPS

ಮದುವೆ, ಪಾರ್ಟಿಗಳಿಂದ ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಳ?: ಕೇಂದ್ರ ತಂಡದಿಂದ ಪರಾಮರ್ಶೆ

         ನವದೆಹಲಿ: ಭಾರತದ ಅನೇಕ ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿದ್ದು ಹೊಸ ರೂಪಾಂತರಿಯಿಂದಾಗಿ ಅಲ್ಲ, ಬದಲಾಗಿ ಮದುವೆ, ಪಾರ್ಟಿ ಇತ್ಯಾದಿ ಸಮಾರಂಭಗಳಲ್ಲಿ ಹೆಚ್ಚೆಚ್ಚು ಜನರು ಸೇರಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರುವುದರಿಂದ ಎಂದು ಕೇಂದ್ರ ಸರ್ಕಾರ ಹೇಳಿದೆ.

      ರಾಜ್ಯಗಳಿಗೆ ಭೇಟಿ ನೀಡಿರುವ ಕೇಂದ್ರ ತಂಡ ಹಿಂತಿರುಗಿ ಬಂದು ಪ್ರತಿಕ್ರಿಯೆ ಮತ್ತು ವರದಿ ನೀಡಿದ ನಂತರ ಈ ಬಗ್ಗೆ ಸ್ಪಷ್ಟ ಚಿತ್ರಣ ಕಂಡುಬರಲಿದೆ. ಮದುವೆ, ಪಾರ್ಟಿಗಳಿಂದಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದೆ ಎಂದು ಅನಿಸುತ್ತಿದೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ ವಿ ಕೆ ಪೌಲ್ ಹೇಳುತ್ತಾರೆ.

         ಕೆಲವು ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ವಿಪರೀತ ಏರಿಕೆಯಾಗಿದ್ದು ಕೊರೋನಾ ರೂಪಾಂತರದ ಪಾತ್ರ ಇದರಲ್ಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಡಾ ವಿ ಕೆ ಪೌಲ್ ಹೇಳುತ್ತಾರೆ.

       ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಸದ್ಯ ಸಕ್ರಿಯ ಕೇಸುಗಳು ಶೇಕಡಾ 1.51ರಷ್ಟಿದ್ದು ಗುಣಮುಖ ಹೊಂದುತ್ತಿರುವವರ ಸಂಖ್ಯೆ ಶೇಕಡಾ 97ರಷ್ಟಿದೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಅತಿ ಹೆಚ್ಚು ಶೇಕಡಾ 67.84ರಷ್ಟು ಸಕ್ರಿಯ ಕೋವಿಡ್ ಪ್ರಕರಣಗಳಿವೆ.

       ಕಳೆದ ಎರಡು ವಾರಗಳಲ್ಲಿ ದಿನಂಪ್ರತಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ತಮಿಳು ನಾಡು ಮತ್ತು ಪಂಜಾಬ್ ರಾಜ್ಯಗಳಲ್ಲಿ ಕೇಂದ್ರ ತಂಡವನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

     ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ, 12,286 ಹೊಸ ಪ್ರಕರಣಗಳೊಂದಿಗೆ ನಿನ್ನೆಯ ವೇಳೆಗೆ ಒಟ್ಟು ಸಕ್ರಿಯ ಪ್ರಕರಣಗಳು 1 ಲಕ್ಷದ 68 ಸಾವಿರದ 358 ರಷ್ಟಿದೆ. ಗಮನಾರ್ಹವಾಗಿ ಶೇಕಡಾ 80.33% ಹೊಸ ಪ್ರಕರಣಗಳು ಐದು ರಾಜ್ಯಗಳಿಂದ ಬಂದವು. ಮಹಾರಾಷ್ಟ್ರದಲ್ಲಿ ದೈನಂದಿನ ಹೊಸ ಪ್ರಕರಣಗಳನ್ನು 6,397 ಎಂದು ವರದಿ ಮಾಡಿದೆ. ಇದರ ನಂತರ ಕೇರಳದಲ್ಲಿ 1,938 ಮತ್ತು ಪಂಜಾಬ್ 633 ಹೊಸ ಪ್ರಕರಣಗಳನ್ನು ದಾಖಲಾಗಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries