ತಿರುವನಂತಪುರ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 957 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾದ ನಿನ್ನೆ ಹಿಂಪಡೆದ ನಾಮಪತ್ರಗಳ ಬಳಿಕದ ಎಲ್ಲಾ ಅಂಕಿಅಂಶಗಳಂತೆ ಸ್ಪರ್ಧಿಸುವ ಅಭ್ಯರ್ಥಿಗಳ ಪೂರ್ಣ ಚಿತ್ರ ಸ್ಪಷ್ಟಗೊಂಡಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾದ ಮಾ. 19 ರಂದು 2180 ನಾಮಪತ್ರಗಳನ್ನು ಕೇರಳದಾದ್ಯಂತ ಸ್ವೀಕರಿಸಲಾಗಿತ್ತು. ಪರಿಶೀಲನೆಯ ನಂತರ ಈ ಪೈಕಿ 1061 ಕ್ಕೆ ಇಳಿಯಿತು.
ಸ್ವತಂತ್ರ ಅಭ್ಯರ್ಥಿಗಳು ದೈನಂದಿನ ವಸ್ತುಗಳ ವಿಭಿನ್ನ ಚಿಹ್ನೆಗಳೊಂದಿಗೆ ಗಮನ ಸೆಳೆದಿದ್ದಾರೆ. ಊರುಗೋಲುಗಳಿಂದ ತುತ್ತೂರಿಗಳವರೆಗೆ ವೈವಿಧ್ಯತೆ. ಹೆಲ್ಮೆಟ್, ಆನೆ ಮತ್ತು ಬ್ಯಾಟರಿ ಟಾರ್ಜರ್ ಸಹಿತ ಆಕರ್ಷಕ ಚಿಹ್ನಗಳು ಅಭ್ಯರ್ಥಿಗಳಿಗೆ ನೀಡಲಾಗಿದೆ. ಕತ್ತರಿ ಮತ್ತು ದೂರವಾಣಿಯಂತಹ ಚಿಹ್ನೆಗಳೂ ಗಮನ ಸೆಳೆದಿವೆ. ಅನಾನಸ್, ಬಾಣ ಮತ್ತು ಬಿಲ್ಲು, ದೂರದರ್ಶನ, ಕಪ್ಪು ಹಲಗೆ, ಆಟೋರಿಕ್ಷಾ ಮತ್ತು ಮೇಣದ ಬತ್ತಿಗಳು ಇವೆ. ಕಂಪ್ಯೂಟರ್, ಟ್ರಕ್ ಮತ್ತು ಗ್ಯಾಸ್ ಸಿಲಿಂಡರ್ ಗುರುತು ಚಿತ್ರಗಳಿವೆ. ಚಿಹ್ನೆಗಳಿಂದ ಗುರುತಿಸಲಾದ ವ್ಯಕ್ತಿಗಳು ಮತಬೇಟೆಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಮತ ಕೇಳಲಿದ್ದಾರೆ.
ಚುನಾವಣಾ ಆಯೋಗವು ಅಗತ್ಯ ಸೇವೆಗಳ ಉದ್ಯೋಗಿಗಳಿಗೆ ಅಂಚೆ ಮತದಾನವನ್ನು ಪರಿಚಯಿಸಿದೆ. ಅವರು ಮತದಾನಕ್ಕೆ ಹೋಗಲು ಮತ್ತು ಮತ ಚಲಾಯಿಸಲು ನೋಂದಾಯಿಸಲು ಸಾಧ್ಯವಾಗುವುದಿಲ್ಲ. ಅಂಚೆ ಮತದಾನವು ಮಾರ್ಚ್ 28, 29 ಮತ್ತು 30 ರಂದು ಗೊತ್ತುಪಡಿಸಿದ ಸ್ಥಳಗಳಲ್ಲಿ ನಡೆಯಲಿದೆ. ಅರ್ಹ ಮತದಾರರಿಗೆ ಮತ ಚಲಾಯಿಸಲು ಆಗಮಿಸಿದ ಸ್ಥಳದ ಸಂಬಂಧಪಟ್ಟ ರಿಟನಿರ್ಂಗ್ ಅಧಿಕಾರಿ ತಿಳಿಸುತ್ತಾರೆ.
ವಿಧಾನಸಭಾ ಚುನಾವಣೆಯ ಅಂತಿಮ ಮತದಾರರ ಪಟ್ಟಿಯಲ್ಲಿ 2,74,46,039 ಮಂದಿ ಮತದಾರರು ಇರುವರೆಂದು ಮುಖ್ಯ ಚುನಾವಣಾ ಅಧಿಕಾರಿ ಟೀಕರಾಮ್ ಮೀನಾ ಹೇಳಿದ್ದಾರೆ. ಈ ಮೊದಲು ಜನವರಿ 20 ರಂದು 2,67,31,509 ಮಂದಿ ಇದ್ದ ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಜನವರಿ 20 ರ ಬಳಿಕ ಸ್ವೀಕರಿಸಿದ ಅರ್ಜಿಗಳನ್ನು ಪರಿಗಣಿಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. 140 ಕ್ಷೇತ್ರಗಳಲ್ಲಿ 1,32,83,724 ಮಂದಿ ಪುರುಷ ಮತದಾರರು, 1,41,62,025 ಮಂದಿ ಮಹಿಳಾ ಮತದಾರರು ಮತ್ತು 290 ದ್ವಿಲಿಂಗಿ ಮತದಾರರಿದ್ದಾರೆ. ಇವರಲ್ಲಿ 87,318 ವಲಸಿಗ ಪುರುಷರು, 6,086 ಮಹಿಳೆಯರು ಮತ್ತು 11 ಮಂದಿ ದ್ವಿಲಿಂಗಿಗಳು ಒಳಗೊಂಡಿದ್ದಾರೆ.


