ತಿರುವನಂತಪುರ: ರೈಲುಗಳ ಎಸಿ ಬೋಗಿಗಳಲ್ಲಿ ರಾತ್ರಿ ಮೊಬೈಲ್ ಪೋೀನ್ ಮತ್ತು ಲ್ಯಾಪ್ ಟಾಪ್ ಚಾರ್ಜ್ ಮಾಡುವುದನ್ನು ನಿಷೇಧಿಸಲಾಗಿದೆ. ಬೆಂಕಿ ಅವಘಡಗಳ ಸಂಭವನೀಯತೆಯ ಕಾರಣ ರೈಲುಗಳಲ್ಲಿ ಎಸಿ ಬೋಗಿಗಳಲ್ಲಿ ಚಾರ್ಜ್ ಮಾಡುವುದನ್ನು ನಿಷೇಧಿಸಲಾಗಿದೆ. ಮೊಬೈಲ್ ಪೋನ್ ಮತ್ತು ಲ್ಯಾಪ್ ಟಾಪ್‍ಗಳು ರಾತ್ರಿಯಲ್ಲಿ ಹೆಚ್ಚು ಬಿಸಿಯಾಗುತ್ತಿದ್ದು, ಈ ಕಾರಣದಿಂದ ಅವಘಡಗಳಾಗದಂತೆ ಇಂತಹ ಕ್ರಮಕ್ಕೆ ಮುಂದಾಗಬೇಕಾಯಿತು.
ಮೊಬೈಲ್ ಪೋನ್ ಚಾರ್ಜರ್ ಗಳನ್ನು ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಆಫ್ ಮಾಡಬೇಕು. ಆದರೆ ಅನೇಕ ರೈಲುಗಳಲ್ಲಿ ಇದನ್ನು ಅನುಸರಿಸುವುದಿಲ್ಲ. ಬೆಂಕಿ ಅವಘಡದ ಸಾಧ್ಯತೆಯ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸಲಾಗಿದ್ದರೂ ಚಾಜಿರ್ಂಗ್ ಪಾಯಿಂಟ್‍ಗಳನ್ನು ಆಫ್ ಮಾಡದಿರುವುದು ಕಂಡುಬಂದಿದೆ. ಈ ಸನ್ನಿವೇಶದಲ್ಲಿ ಮರು-ಸೂಚನೆಯನ್ನು ಶಿಫಾರಸು ಮಾಡಲಾಗಿದೆ.
ಈ ವಿಷಯದಲ್ಲಿ ವಿಫಲರಾದ ಎಸಿ ಮೆಕ್ಯಾನಿಕ್ ಸೇರಿದಂತೆ ನೌಕರರಿಗೆ ದಕ್ಷಿಣ ರೈಲ್ವೆ ಎಚ್ಚರಿಕೆ ನೀಡಿತ್ತು. ಇನ್ನಾದರೂ ಇಂತಹ ಕ್ರಮಕ್ಕೆ ಸಂಬಂಧಪಟ್ಟವರು ಮುಂದಾಗದಿದ್ದರೆ, ಮಿಂಚಿನ ತಪಾಸಣೆ ನಡೆಸಲು ಮತ್ತು ನೌಕರರು ದೂರಿತ್ತರೆ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ನೌಕರರಿಗೆ ಸುತ್ತೋಲೆ ಮೂಲಕ ತಿಳಿಸಲಾಗಿದೆ.



