ಕಾಸರಗೋಡು: ಕೇರಳದಲ್ಲಿ ಎಡ-ಬಲ ರಂಗಗಳು ಅದಲುಬದಲಾಗಿ ರಾಜ್ಯವನ್ನಾಳುತ್ತಿದ್ದರೂ, ಅಭಿವೃದ್ಧಿಕಾರ್ಯಗಳಲ್ಲಿ ಯಾವುದೇ ಬದಲಾವಣೆ ತರಲಾಗದಿರುವುದು ವಿಷಾದನೀಯ ಎಂದು ಕಾರ್ಕಳ ಶಾಸಕ, ಬಿಜೆಪಿ ಕೇರಳ ಸಹ ಉಸ್ತುವಾರಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಅವರು ಬುಧವಾರ ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್.ಡಿ.ಎ ಚುನಾವಣಾ ಸಮಿತಿ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡನ್ನು ನಾಲ್ಕುವರೆ ದಶಕಗಳ ಕಾಲ ಪ್ರತಿನಿಧಿಸುತ್ತಿರುವ ಮುಸ್ಲಿಂಲೀಗ್‍ನಿಂದ ಅಭಿವೃದ್ಧಿಕಾರ್ಯ ಮರೀಚಿಕೆಯಾಗಿದೆ. ಅಧಿಕಾರ ಮೋಹದಿಂದ ಎಡ-ಬಲ ರಂಗಗಳ ಅಪವಿತ್ರ ಮೈತ್ರಿಗೆ ಇನ್ನು ಮುಂದೆ ಕೇರಳದಲ್ಲಿ ಅವಕಾಶವಿಲ್ಲ. ಬದಲಾವಣೆಗಾಗಿ ಎನ್‍ಡಿಎಯನ್ನು ಬೆಂಬಲಿಸಿ ಎಂದು ತಿಳಿಸಿದರು.
ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಂ.ಸಂಜೀವ ಶೆಟ್ಟಿ, ರವೀಶ್ ತಂತ್ರಿ ಕುಂಟಾರು, ಸುರೇಶ್‍ಕುಮಾರ್ ಶೆಟ್ಟಿ, ಪಿ.ರಮೇಶ್, ಮಂಡಲ ಸಮಿತಿ ಉಸ್ತುವಾರಿ ಸತೀಶ್ ಕುಂಪಲ, ಸುಧಾಮ ಗೋಸಾಡ, ಬಿಡಿಜೆಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಪಾರೆಕಟ್ಟ, ರಾಮಪ್ಪ ಮಂಜೇಶ್ವರ, ವಕೀಲ ಸದಾನಂದ ರೈ, ಶೈಲಜಾ ಭಟ್, ಸಉರೇಶ್ ಕೀಯೂರ್, ಎನ್. ಕೃಷ್ಣ ಭಟ್, ಗ್ರಾಪಂ ಅಧ್ಯಕ್ಷರಾದ ಗೋಪಾಲಕೃಷ್ಣ ಕೂಡ್ಲು, ಗೋಪಾಲಕೃಷ್ಣ ಉಪಸ್ಥಿತರಿದ್ದರು.




