HEALTH TIPS

ಪಿಣರಾಯಿಯನ್ನು ವಿರೋಧಿಸುವವರೂ ಗೆಲ್ಲಬೇಕೆಂದು ಬಯಸುತ್ತಾರೆ: ಅದರೊಂದಿಗೆ ಕಾಂಗ್ರೆಸ್ಸ್ ಅಸ್ತಿತ್ವದಿಂದ ಮುಕ್ತವಾಗುತ್ತದೆ: ಇದು ಕೇರಳದ ರಾಜಕೀಯ ಸತ್ಯ: ರಾಹುಲ್ ಈಶ್ವರ್

             

        ತಿರುವನಂತಪುರ: ಪಿಣರಾಯಿ ವಿಜಯನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕೆಂದು ತೀವ್ರ ಹಿಂದೂ ಬಲಪಂಥೀಯತೆ ಬಯಸಿದೆ ಎಂದು ರಾಹುಲ್ ಈಶ್ವರ್ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಎಲ್‍ಡಿಎಫ್ ಗೆದ್ದರೆ ಕಾಂಗ್ರೆಸ್ ಕುಸಿಯುತ್ತದೆ ಮತ್ತು ಬಲಪಂಥೀಯರು ಬಯಸುವುದು ಇದನ್ನೇ ಎಂದು ರಾಹುಲ್ ನಿನ್ನೆ ಮಾಧ್ಯಮವೊಂದರ ಸಂದರ್ಶನದಲ್ಲಿ  ತಿಳಿಸಿದರು.

      ಪಿಣರಾಯಿ ವಿಜಯನ್ ಅವರನ್ನು ವಿರೋಧಿಸುವವರೂ ಸಹ ಅವರು ಗೆಲ್ಲಬೇಕೆಂದು ಬಯಸುತ್ತಾರೆ. ಅದರೊಂದಿಗೆ ಕಾಂಗ್ರೆಸ್ ಸ್ಥಾನ  ಕಳೆದುಕೊಳ್ಳುತ್ತದೆ. ಇದು ಕೇರಳದ ರಾಜಕೀಯ ಸತ್ಯ ಎಂದು ರಾಹುಲ್ ಹೇಳಿದರು.

         ಈ ವಿಧಾನಸಭಾ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ಗೆಲ್ಲಬೇಕು ಮತ್ತು ಕಾಂಗ್ರೆಸ್ ನ್ನು ಸೋಲಿಸಬೇಕು ಎಂದು ಬಲಪಂಥೀಯ ಹಿಂದೂ ಬಲ ಬಯಸಿದೆ. ಕಾಂಗ್ರೆಸ್ ಮುಕ್ತ ಕೇರಳ ಮತ್ತು ಭಾರತ ಇದ್ದರೆ ಮಾತ್ರ ಬಿಜೆಪಿಗೆ ಭವಿಷ್ಯವಿದೆ ಎಂದು ಅವರು ಭಾವಿಸುತ್ತಾರೆ. ಮೊದಲು ನಾಯರ್-ನಸ್ರಾಣಿ ಸಂಯೋಜನೆ ಮತ್ತು ನಂತರ ನಾಯರ್-ನಸ್ರಾಣಿ-ಈಳವ ಸಂಯೋಜನೆಯು ಪ್ರಬಲ್ಯಕ್ಕೊಳಗಾಗಲಿದೆ.

          ಬಾಲಶಂಕರ್ ಮತ್ತು ಇತರರು ಇದನ್ನೇ ಹೇಳುತ್ತಾರೆ. ಪಿಣರಾಯಿಯನ್ನು ವಿರೋಧಿಸುವವರೂ ಸಹ ಪಿಣರಾಯಿಯನ್ನು ಗೆಲ್ಲಲು ಮತ್ತು ಕಾಂಗ್ರೆಸ್ ನಾಶಮಾಡಲು ಬಯಸುತ್ತಾರೆ. ಇದು ಕೇರಳದ ರಾಜಕೀಯ ಸತ್ಯ ಎಂದವರು ಬೊಟ್ಟುಮಾಡಿದರು. 

           "ಇಂತಹ ವಿಷಯಗಳು ನಮ್ಮ ಗಮನಕ್ಕೆ ಬರುತ್ತಿವೆ. ಇದು ಎಡಪಂಥೀಯರ ಅಂತರಂಗದ ಆಕಾಂಕ್ಷೆಯೂ ಹೌದು. ನಾಲ್ಕು ಅಥವಾ ಐದು ಸ್ಥಾನಗಳು ಬಿಜೆಪಿ ತೆಕ್ಕೆಗೆ ಬಂದುದರಲ್ಲಿ ಎಡರಂಗಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಕಾಂಗ್ರೆಸ್ಸಿನ ಸ್ಥಾನಗಳು ಮತ್ತು ಮತಗಳು, ವಿಶೇಷವಾಗಿ ನಾಯರ್ ಮತಗಳು ಮತ್ತು ಕೆಲವು ಕ್ರಿಶ್ಚಿಯನ್ ಮತಗಳು ಎಡರಂಗಕ್ಕೆ ಹೋದರೆ, ಅವರು ಮತ್ತೆ ಅಧಿಕಾರವನ್ನು ಪಡೆಯುತ್ತಾರೆ ಎಂದು ಭಾವಿಸುತ್ತಿರುವರು ಎಂದು ರಾಹುಲ್ ಈಶ್ವರ್ ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries