ಕಾಸರಗೋಡು: ವಿದಾನಸಭೆ ಕ್ಷೇತ್ರ ಚುನಾವಣೆ ಸಂಬಂಧ ಸ್ವೀಪ್ ಆಶ್ರಯದಲ್ಲಿ ಮತದಾತರ ಜಾಗೃತಿ ಕಾರ್ಯಕ್ರಮ ಕುಂಬಳೆ ಅಕಾಡೆಮಿ ಕಾಲೇಜಿನಲ್ಲಿ ಜರುಗಿತು.
ಸ್ವೀಪ್ ನೋಡೆಲ್ ಅಧಿಕಾರಿಯಾಗಿರುವ, ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ಕವಿತಾ ರಾಣಿ ರಂಜಿತ್ ಉದ್ಘಾಟಿಸಿದರು. ಕಾಲೇಜಿನ ಆಡಳಿತ ನಿರ್ದೇಶಕ ಇಬ್ರಾಹಿಂ ಖಲೀಲ್, ಬೆಟರ್ ಲೈಫ್ ಫವಂಡೇಶನ್ ಸಂಚಾಲಕ ಮೋಹನ್ ದಾಸ್, ಎನ್.ಎನ್.ಎಂ. ಸಂಚಾಲಕ ವಿಪಿನ್, ಸ್ವೀಪ್ ಸದಸ್ಯೆ ಆಯಿಷಾ, ಸೈಕೋ ಸೋಷ್ಯಲ್ ಕೌನ್ಸಿಲರ್ ಅನೀಟ್ಟ ಮೆಂಡೋನ್ಸಾ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಕಲಾ ಕಾರ್ಯಕ್ರಮಗಳು ನಡೆದುವು.





