HEALTH TIPS

ನಾಲ್ಕನೇ ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಕಂಗನಾ​- ಮಣಿಕರ್ಣಿಕಾ, ಪಂಗಾ ಚಿತ್ರಗಳಿಗೆ ಪ್ರಶಸ್ತಿ ಗರಿ

          ನವದೆಹಲಿ: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, 2019ನೇ ಸಾಲಿನ ಅತ್ಯುತ್ತಮ ನಟಿಯಾಗಿ ಕಂಗನಾ ರಣಾವತ್​ ಹೊರಹೊಮ್ಮಿದ್ದಾರೆ. ಇದಾಗಲೇ ಮೂರು ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ಕಂಗನಾ ಅವರಿಗೆ ಇದು ನಾಲ್ಕನೆಯ ರಾಷ್ಟ್ರೀಯ ಪ್ರಶಸ್ತಿಯಾಗಿದೆ.

         ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇಂದು ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. 'ಮಣಿಕರ್ಣಿಕಾ' ಹಾಗೂ 'ಪಂಗಾ' ಚಿತ್ರದ ನಟನೆಗೆ ಈ ಬಾರಿ ಪ್ರಶಸ್ತಿ ಕಂಗನಾ ಅವರ ಪಾಲಾಗಿದೆ. ಸುಶಾಂತ್​ ಸಿಂಗ್​ ಅಭಿನಯದ, ನಿತೇಶ್ ತಿವಾರಿ ನಿರ್ದೇಶನದ ಚಿಚೋರ್​ ಅತ್ಯುತ್ತಮ ಹಿಂದಿ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮನೋಜ್ ಬಾಜಪೇಯಿ ಮತ್ತು ಧನುಷ್ ಕ್ರಮವಾಗಿ ಭೋಂಸ್ಲೆ ಮತ್ತು ಅಸುರನ್ ಚಿತ್ರಗಳಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

             ಇನ್ನೂ ಬಿಡುಗಡೆಯಾಗಬೇಕಿರುವ ಮಲಯಾಳದ ಚಿತ್ರ ಮರಕ್ಕರ್: ಅರಬಿಕಡಲಿಂಟೆ ಸಿಂಹಮ್ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಚಿತ್ರವನ್ನು ಮೋಹನ್ ಲಾಲ್ ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ.


       ತಮಿಳಿನ ಅಸುರನ್ ಮತ್ತು ತೆಲುಗಿನ ಜರ್ಸಿ ಅತ್ಯುತ್ತಮ ಚಿತ್ರ ಪಶಸ್ತಿ ಪಡೆದುಕೊಂಡಿದೆ. ಸೂಪರ್ ಡಿಲಕ್ಸ್‌ಗಾಗಿ ವಿಜಯ್ ಸೇತುಪತಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries