ನವದೆಹಲಿ: ವಕೀಲರಾದ ವಿಜು ಅಬ್ರಹಾಂ, ಮೊಹಮ್ಮದ್ ನಿಯಾಜ್ ಸಿ. ಪಿ. ಮತ್ತು ಪಾಲ್ ಕೆ.ಕೆ ಅವರನ್ನು ಕೇರಳ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮರು ಶಿಫಾರಸು ಮಾಡಲು ಸುಪ್ರೀಂ ಕೋರ್ಟ್ ಕೊಲ್ಜಿಯಂ ನಿರ್ಧರಿಸಿದೆ.
2019 ರ ಮಾರ್ಚ್‍ನಲ್ಲಿ ಸಭೆ ಸೇರಿದ ಕೊಲ್ಜಿಯಂ, ಕೇರಳ ಹೈಕೋರ್ಟ್‍ನ ನ್ಯಾಯಾಧೀಶರಾಗಿ ಮೊಹಮ್ಮದ್ ನಿಯಾಜ್ ಮತ್ತು ಕೆ.ಕೆ.ಪಾಲ್ ಅವರನ್ನು ನೇಮಕ ಮಾಡುವಂತೆ ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಮೇ 2019 ರಲ್ಲಿ ಸಭೆ ಸೇರಿದ ಕೊಲ್ಜಿಯಂ, ವಿಜು ಅಬ್ರಹಾಂ ಅವರಿಗೂ ಹೈಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ನೀಡುವಂತೆ ಶಿಫಾರಸು ಮಾಡಿತ್ತು.



