ಕೊಚ್ಚಿ: ತಲಾಸ್ಸೇರಿ, ಗುರುವಾಯೂರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಮತ್ತು ದೇವಿಕುಲಂನ ಎನ್ ಡಿಎ ಮೈತ್ರಿ ಪಕ್ಷ ಎಐಎಡಿಎಂಕೆಯ ಅಭ್ಯರ್ಥಿ ಎನ್.ಹರಿದಾಸನ್ ಮತ್ತು ವಕೀಲ ನಿವೆದಿದಾ ಸುಬ್ರಮಣಿಯನ್ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಕೇರಳ ಹೈಕೋರ್ಟ್ ವಜಾ ಮಾಡುವುದರೊಂದಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ದೊಡ್ಡ ಇಕ್ಕಟ್ಟಿಗೆ ಸಿಲುಕಿದೆ.
ರಿಟರ್ನಿಂಗ್ ಅಧಿಕಾರಿ ನೀಡಿರುವ ಆದೇಶದೊಂದಿಗೆ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಮೂರ್ತಿ ಎನ್. ನಾಗರೇಶ್ ಹೇಳಿದರು. ಒಂದು ಬಾರಿ ಚುನಾವಣೆ ಘೋಷಣೆಯಾದಾಗ ಚುನಾವಣಾ ಪ್ರಕ್ರಿಯೆಯಿಂದ ಕೋರ್ಟ್ ತಡೆ ಬಗ್ಗೆ ಚುನಾವಣಾ ಆಯೋಗ ಸಲ್ಲಿಸಿರುವ ವರದಿಯನ್ನು ನ್ಯಾಯಾಲಯ ಪರಿಗಣಿಸಿದೆ.
ರಾಮ್ ಫಾಲ್ ಕುಂದು vs ಕಮಲ್ ಶರ್ಮಾ ಕೇಸ್ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಕಾನೂನಿನ ದೃಷ್ಟಿಯಲ್ಲಿ ರಿಟ್ ಅರ್ಜಿಗಳು ನಿರ್ವಹಣೆಗೆ ಮಾನ್ಯವಲ್ಲ ಎಂದು ಹೇಳಿಕೆಯಲ್ಲಿ ಆಯೋಗ ತಿಳಿಸಿದೆ.
ಚುನಾವಣಾ ಆಯೋಗದ ಪ್ರಕಾರ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯುವ ಕೊನೆಯ ಹಾಗೂ ಸಂಕೇತ ಪಡೆಯುವ ದಿನ ರಿಟರ್ನಿಂಗ್ ಅಧಿಕಾರಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತಾರೆ. ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರದ ಪ್ರೆಸ್ ಗಳಿಗೆ ಒದಗಿಸಿದ ಕೂಡಲೇ ಬ್ಯಾಲೆಟ್ ಪೇಪರ್ ಮುದ್ರಣ ಕಾರ್ಯವನ್ನು ಆರಂಭಿಸಲಾಗುತ್ತದೆ. 140 ವಿಧಾನಸಭಾ ಕ್ಷೇತ್ರಗಳಲ್ಲಿ ಬ್ಯಾಲೆಟ್ ಪೇಪರ್, ಪೋಸ್ಟಲ್ ಬ್ಯಾಲೆಟ್ ನ್ನು 140 ವಿಧಾನಸಭಾ ಕ್ಷೇತ್ರಗಳಲ್ಲೂ ಮುದ್ರಿಸಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಅಂಚೆ ಮತ ಚಲಾಯಿಸುವವರಿಗೆ ಫೋಸ್ಟಲ್ ಬ್ಯಾಟಲ್ ನ್ನು ರವಾನಿಸಲಾಗುತ್ತದೆ. ಆದ್ದರಿಂದ ಈ ಹಂತದಲ್ಲಿ ನ್ಯಾಯಾಲಯ ಪ್ರವೇಶದಿಂದ ಅಡಚಣೆ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಗಲಿದೆ.
ನಿಗಧಿತ ದಿನಾಂಕದಲ್ಲಿ ಆದಷ್ಟು ಬೇಗ ಮತದಾನವನ್ನು ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಎಲ್ಲ ವಿವಾದಾತ್ಮಕ ವಿಚಾರಗಳು ಮತ್ತು ಅಡಟಣೆನ್ನು ಚುನಾವಣೆ ಮುಗಿಯುವವರೆಗೂ ಮುಂದೂಡುವುದರಿಂದ ಚುನಾವಣಾ ಪ್ರಕ್ರಿಯೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದೆ.


