HEALTH TIPS

ಕೊರೊನಾವೈರಸ್ ಬಗ್ಗುಬಡಿಯಲು "ಡಬಲ್ ಮಾಸ್ಕ್" ಸೂತ್ರ!?

      ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಯ ವೇಗ ಹೆಚ್ಚಾಗುತ್ತಿದ್ದಂತೆ ಡಬಲ್ ಮಾಸ್ಕ್ ಧರಿಸುವುದಕ್ಕೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹಾಗೂ ಹಿರಿಯ ವೈದ್ಯಾಧಿಕಾರಿಗಳು ಸಲಹೆ ನೀಡುತ್ತಿದ್ದಾರೆ.
         ಕೊವಿಡ್-19 ಸೋಂಕಿನಿಂದ ತಪ್ಪಿಸಿಕೊಳ್ಳುವುದಕ್ಕೆ ಒಂದು ಮಾಸ್ಕ್ ಧರಿಸಿದರೆ ಸಾಕಾಗುವುದಿಲ್ಲ. ಕೇವಲ ಒಂದು ಮಾಸ್ಕ್ ಧರಿಸಿದರೆ ಸೋಂಕು ಹರಡುವುದಕ್ಕೆ ಕಡಿವಾಣ ಹಾಕಲು ಆಗುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕೆ ಡಬಲ್ ಮಾಸ್ಕ್ ಸೂತ್ರವನ್ನು ಹೇಳುತ್ತಿದ್ದಾರೆ.

      ಡಬಲ್ ಮಾಸ್ಕ್ ಸೂತ್ರ ಎಂದರೇನು. ಈ ಡಬಲ್ ಮಾಸ್ಕ್ ಧರಿಸುವ ಪರಿ ಹೇಗೆ. ಡಬಲ್ ಮಾಸ್ಕ್ ಧರಿಸಲು ಸಲಹೆ ನೀಡಿದರ ಹಿಂದಿನ ಮರ್ಮವೇನು. ಸಾಮಾನ್ಯರೂ ಕೂಡಾ ಆ ಡಬಲ್ ಮಾಸ್ಕ್ ಧರಿಸಬೇಕೇ ಬೇಡವೇ. ಹೀಗೆ ಡಬಲ್ ಮಾಸ್ಕ್ ಕುರಿತು ನಿಮ್ಮನ್ನು ಕಾಡುವ ಪ್ರಶ್ನೆಗಳಿಗೆ ಇಲ್ಲಿ ಚಿತ್ರಗಳ ಸಹಿತ ಉತ್ತರವಿದೆ.

     ಎರಡು ಮಾಸ್ಕ್ ಕುರಿತು ಅಧ್ಯಯನ

     ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ವಿಪತ್ತು ನಿರ್ವಹಣೆ ಮತ್ತು ನಿಯಂತ್ರಣ ಕೇಂದ್ರ ನಡೆಸಿದ ಅಧ್ಯಯನದ ಪ್ರಕಾರ, ಬಟ್ಟೆಯಿಂದ ಸಿದ್ಧಪಡಿಸಿದ ಅಥವಾ ಬಿಸಾಡಬಹುದಾದ ಎರಡು ಮಾಸ್ಕ್ ಗಳನ್ನು ಒಂದರ ಮೇಲೊಂದು ಧರಿಸಿದರೆ(ಡಬಲ್ ಮಾಸ್ಕ್) ಕೊವಿಡ್-19 ಸೋಂಕು ಹರಡುವಿಕೆ ಪ್ರಮಾಣ ಶೇ.95ರಷ್ಟು ಕಡಿಮೆಯಾಗಿರುತ್ತದೆ.

     ಎರಡು ಮಾಸ್ಕ್ ಹೇಗೆ ಧರಿಸಬೇಕು?

     ಬಟ್ಟೆ ಮತ್ತು ಬಿಸಾಡಬಹುದಾದ(Surgical Mask) ಎರಡು ಮಾಸ್ಕ್ ಧರಿಸುವುದರಿಂದ ಮುಖವನ್ನು ಸರಿಯಾದ ಕ್ರಮದಲ್ಲಿ ಮುಚ್ಚಿಕೊಳ್ಳುವುದಕ್ಕೆ ಹಾಗೂ ಉಸಿರಾಟದ ಗಾಳಿ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡಯಲು ಸಹಕಾರಿ ಆಗಿರುತ್ತದೆ. ಬಿಸಾಡಬಹುದಾದ ಮಾಸ್ಕ್ ಅನ್ನು ಕಿವಿಯ ಹಿಂಭಾಗಕ್ಕೆ ಹಾಕಿಕೊಳ್ಳುತ್ತೇವೆ. ಅದಕ್ಕೂ ಮೊದಲು ಆ ಮಾಸ್ಕ್ ತುದಿಗೆ ಹಾಗೂ ಮುಖಕ್ಕೆ ಹೊಂದಿಕೊಳ್ಳುವಂತೆ ಕಟ್ಟಿಕೊಳ್ಳುವುದು.

    ಏಕಕಾಲಕ್ಕೆ ಎರಡು ಮಾಸ್ಕ್ ಏಕೆ ಧರಿಸಬೇಕು ಗೊತ್ತಾ?

     ಸಿಡಿಸಿ ದಾಖಲೆಗಳ ಪ್ರಕಾರ, ಬಿಸಾಡಬಹುದಾದಿ ಮಾಸ್ಕ್ ಶೇ.56.10ರಷ್ಟು ಸೋಂಕು ಹರಡುವುದನ್ನು ತಡೆಯುತ್ತದೆ. ಇನ್ನು, ಕೇವಲ ಬಟ್ಟೆಯಿಂದ ಸಿದ್ಧಪಡಿಸಿದ ಮಾಸ್ಕ್ ಶೇ.51.4ರಷ್ಟು ಸೋಂಕು ಹರಡುವುದನ್ನು ತಡೆಯುತ್ತದೆ. ಮುಖಕ್ಕೆ ಧರಿಸಿದ ಹಾಗೂ ಕಟ್ಟಿಕೊಂಡ ಎರಡು ಮಾಸ್ಕ್ ಗಳಿಂದ ಶೇ.77ರಷ್ಟು ಸೋಂಕು ತಡೆಯುತ್ತದೆ. ಬಟ್ಟೆ ಮತ್ತು ಬಿಸಾಡಬಹುದಾದ ಎರಡು ಮಾಸ್ಕ್ ಧರಿಸಿದಾಗ ಶೇ.85.40ರಷ್ಟು ಸೋಂಕು ತಡೆಯಲು ಸಾಧ್ಯವಾಗುತ್ತದೆ.

      ಎರಡು ಮಾಸ್ಕ್ ಧರಿಸುವುದಕ್ಕೂ ಮೊದಲು ಓದಿ

     ನಿಮ್ಮ ಉಸಿರಾಟ ಪ್ರಕ್ರಿಯೆ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಎರಡು ಮಾಸ್ಕ್ ಧರಿಸುವುದರಿಂದ ನೀವು ಸಾಮಾನ್ಯವಾಗಿ ಮಾತನಾಡುವುದಕ್ಕೆ ಸಾಧ್ಯವಾಗುತ್ತದೆ. ಅಲ್ಲದೇ, ಮನೆಯಿಂದ ಹೊರಗೆ ಹೊರಡುವುದಕ್ಕೂ ಮೊದಲು ಮನೆಯಲ್ಲೇ ಕೆಲಹೊತ್ತು ಮಾಸ್ಕ್ ಧರಿಸಿ ಆರಾಮವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದರ ಜೊತೆಗೆ ಏಕಕಾಲಕ್ಕೆ ಎರಡು ಬಿಸಾಡಬಹುದಾದ ಮಾಸ್ಕ್ ಧರಿಸಬಾರದು. ಸೋಂಕು ಹರಡದಂತೆ ತಡೆಯಲು ಮಾಸ್ಕ್ ಮೇಲೆ ರಾಸಾಯನಿಕ ಸಿಂಪಡಿಸಬೇಡಿ ಹಾಗೂ ಹಾಳಾಗಿರುವ ಅಥವಾ ಮಣ್ಣಾಗಿರುವ ನಿಮ್ಮ ಮಾಸ್ಕ್ ಬಳಸಬೇಡಿ.

      ಮಾಸ್ಕ್ ಧರಿಸುವ ಸರಿಯಾದ ಕ್ರಮ ಯಾವುದು?

       ನೀವು ಉಸಿರಾಡುವ ಸಂದರ್ಭದಲ್ಲಿ, ನಿಮ್ಮ ಮಾಸ್ಕ್ ಗಾಳಿಯ ಹರಿವಿನೊಂದಿಗೆ ಒತ್ತಡವಿರಬೇಕು. ಒಂದು ವೇಳೆ ನಿಮ್ಮ ಚಸ್ಮಾ ಮಂಜುಗಟ್ಟುತ್ತಿದ್ದರೆ ಉಸಿರಾಡುವ ಗಾಳಿ ತಪ್ಪಿಸಿಕೊಳ್ಳುತ್ತಿದೆ ಎಂದರ್ಥ. ಕನ್ನಡಿ ಮುಂದೆ ನಿಂತು ಒತ್ತಡದಿಂದ ಬಲವಾಗಿ ಉಸಿರಾಡಿ. ಕಣ್ಣಿನ ರೆಪ್ಪೆ ಹೊಡೆದುಕೊಂಡರೆ ಉಸಿರಾಟದ ಗಾಳಿ ನೀವು ಧರಿಸಿ ಮಾಸ್ಕ್ ಸುತ್ತಲು ಹರಿದಾಡುತ್ತಿದೆ ಎಂದರ್ಥ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries