HEALTH TIPS

ಅಂತಿಮ ಹಂತದ ಪ್ರಚಾರದಲ್ಲಿ ಪಕ್ಷಗಳು- ಸಿದ್ದತೆಗಳು ಪೂರ್ಣ

       ತಿರುವನಂತಪುರ: ವಿಧಾನಸಭಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದು ಗದ್ದಲಗಳಿಲ್ಲದ ಅಂತಿಮ ಪ್ರಚಾರ  ಅಭಿಯಾನ ನಡೆಯುತ್ತಿದೆ.  ಅಭ್ಯರ್ಥಿಗಳು ಅಂತಿಮ ಪ್ರಚಾರ,ಮತಗಳಿಸಿ ಜಯಶಾಲಿಗಳಾಗುವ  ಆತುರದಲ್ಲಿದ್ದಾರೆ.  ಮತದಾನ ಸಾಮಗ್ರಿಗಳ ವಿತರಣೆ ಇಂದು ನಡೆಯಲಿದೆ.  9,077 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಕೇರಳದಾದ್ಯಂತ ಒಂದೇ ಹಂತದಲ್ಲಿ ನಾಳೆ ನಡೆಯಲಿದೆ.
       ವಿಧಾನಸಭಾ ಚುನಾವಣೆಗೆ ಕೆಲವೇ ಗಂಟೆಗಳು ಉಳಿದಿವೆ.  ಅಭಿಯಾನದ ಅಂತ್ಯದೊಂದಿಗೆ, ರಂಗಗಳು ಮತ್ತು ಅಭ್ಯರ್ಥಿಗಳು ಇಂದು ಅಂತಿಮ ಪ್ರಚಾರ ಮಾಡುತ್ತಿದ್ದಾರೆ.  ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ನೇತೃತ್ವದ ರಸ್ತೆ ಪ್ರದರ್ಶನಗಳು ಮತ್ತು ರ್ಯಾಲಿಗಳ ಸುದೀರ್ಘ ಅಭಿಯಾನದ ಅಂತ್ಯದೊಂದಿಗೆ ನಿನ್ನೆ ಸಮಾರೋಪಗೊಂಡಿದ್ದು, ರಂಗಗಳು ಹೆಚ್ಚಿನ ಉತ್ಸಾಹ ಮತ್ತು ಭರವಸೆಯಲ್ಲಿವೆ.  9,077 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ರಾಜ್ಯದ ಎರಡು ಕೋಟಿ 74 ಲಕ್ಷ ಮತದಾರರು ನಾಳೆ ಚುನಾವಣೆಯಲ್ಲಿ ಮತದಾನಗ್ಯೆಯ್ಯಲಿದ್ದಾರೆ.  ಈ ಬಾರಿ ರಾಜ್ಯದ ಎಲ್ಲಾ 140 ಕ್ಷೇತ್ರಗಳಲ್ಲಿ ಪ್ರಬಲವಾದ ಹೋರಾಟ ನಡೆಯಲಿದೆ.
       ಈ ಬಾರಿ ಅಭಿವೃದ್ಧಿ ಮತ್ತು ನಂಬಿಕೆ ಸಂರಕ್ಷಣೆ ಬಗ್ಗೆ ಚರ್ಚೆಯಾಗಿದ್ದ ಚುನಾವಣೆಯ ಕೊನೆಯ ಮಡಿಲಲ್ಲಿ ಜೋಡಿ ಮತಗಳ ವಿವಾದ ಕಾವೇರಿಸಿತ್ತು.  ರಾಜಕೀಯ ನಾಯಕರ ಆಗಮನವು ಅಭಿಯಾನದತ್ತ ಗಮನ ಸೆಳೆಯಿತು. ಇದು ಆರೋಪಗಳು ಮತ್ತು ಪ್ರತಿ-ಆರೋಪಗಳಿಂದ ಕೂಡಿತ್ತು.  ಇಂದು ಅಭ್ಯರ್ಥಿಗಳು ಮನೆ ಸಂಪರ್ಕದತ್ತ ಗಮನ ಹರಿಸುತ್ತಾರೆ.  ಮತದಾನಕ್ಕೆ ಕೆಲವೇ ಗಂಟೆಗಳಿರುವಾಗ, ರಾಜ್ಯದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
      ವಿಶೇಷ ಭದ್ರತಾ ವಲಯಗಳಲ್ಲಿ ರಾಜ್ಯಾದ್ಯಂತ ಅರವತ್ತು ಸಾವಿರ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.  ಕೇರಳದಲ್ಲಿ ಕೇಂದ್ರ ಸೇನೆಯ 140 ಕಂಪನಿಗಳಿವೆ.  ಕೇರಳದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಕೇಂದ್ರ ಪಡೆಗಳು ಚುನಾವಣೆಗೆ ಭದ್ರತೆ ಒದಗಿಸುತ್ತಿವೆ.  ಭದ್ರತಾ ಬೆದರಿಕೆ ಇದ್ದರೆ ಪೋಲಿಂಗ್ ಏಜೆಂಟರಿಗೆ ಪೊಲೀಸರು ರಕ್ಷಣೆ ನೀಡಲಿದ್ದಾರೆ.  ಮತದಾನ ಸಾಮಗ್ರಿಗಳ ವಿತರಣೆಯೂ ಇಂದು ನಡೆಯಲಿದೆ.  ಕರೋನಾ ಸಂದರ್ಭದಲ್ಲಿ ಮಾನದಂಡಗಳಿಗೆ ಅನುಸಾರವಾಗಿ ಈ ಬಾರಿ ರಾಜ್ಯದಲ್ಲಿ ಮತದಾನ ಸಾಮಗ್ರಿಗಳ ವಿತರಣೆಯನ್ನು ನಡೆಸಲಾಗುತ್ತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries