ತಿರುವನಂತಪುರ: ಕೇರಳದಲ್ಲೂ ಕೊರೋನದ ಎರಡನೇ ತರಂಗ ಪ್ರಬಲವಾಗಿಗುತ್ತಿರುವುದರಿಂದ ರಾಜ್ಯದಲ್ಲಿ ಹೆಚ್ಚಿನ ನಿಬಂಧನೆಗಳನ್ನು ವಿಧಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಸಂಚಾರದಲ್ಲಿ ಸಮಯ ಪುನರ್ ನಿಗದಿಪಡಿಸಲಾಗುವುದು. ಹೆಚ್ಚುವರಿ ಸೇವೆಗಳು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಲಭ್ಯವಿರುತ್ತವೆ. ರಾತ್ರಿಯ ದೀರ್ಘ-ದೂರ ಸೇವೆಗಳಲ್ಲಿ ಕೇವಲ 60 ಪ್ರತಿಶತ ಮಾತ್ರ ಲಭ್ಯವಿದೆ.
ಮಾಸ್ಕ್ ಧರಿಸದ ಯಾರನ್ನೂ ಬಸ್ ನಲ್ಲಿ ಅನುಮತಿಸಲಾಗುವುದಿಲ್ಲ. ಮಾಸ್ಕ್ ಸರಿಯಾಗಿ ಧರಿಸಿರುವುದನ್ನು ನಿರ್ವಾಹಕರು ಖಚಿತಪಡಿಸಿಕೊಳ್ಳಬೇಕು ಮತ್ತು ಅದಿರದಿದ್ದಲ್ಲಿ ಪ್ರಯಾಣಕ್ಕೆ ಆಸ್ಪದವಿಲ್ಲ ಎಂದು ಕೆಎಸ್‍ಆರ್‍ಟಿಸಿ ಹೊರಡಿಸಿದ ನಿರ್ದೇಶನದಲ್ಲಿ ತಿಳಿಸಲಾಗಿದೆ.
ರಾಜ್ಯ ನ್ಯಾಯಾಲಯಗಳಲ್ಲಿಯೂ ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ. ಜನಸಂದಣಿ ಇರಬಾರದೆಂದು ಹೈಕೋರ್ಟ್ ನಿರ್ದೇಶಿಸಿದೆ. ಸಾಕ್ಷಿಗಳ ವಿಚಾರಣೆಯನ್ನು ಸಹ ನಿರ್ಬಂಧಿಸಲಾಗಿದೆ. ಕಕ್ಷಿಗಳು ಅನುಮತಿಯೊಂದಿಗೆ ಮಾತ್ರ ನ್ಯಾಯಾಲಯಕ್ಕೆ ಪ್ರವೇಶಿಸಬಹುದು. ಇತರ ನ್ಯಾಯಾಲಯಗಳನ್ನು ಹೈಕೋರ್ಟ್ ನಿಯಂತ್ರಿಸುತ್ತದೆ.
ಏತನ್ಮಧ್ಯೆ, ಕೊರೋನಾ ವಿಸ್ತರಣೆಯ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಪರಾಮರ್ಶೆಗೆ ಗೃಹ ವ್ಯವಹಾರಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ರಾಜ್ಯ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆ ವೆಂಟಿಲೇಟರ್‍ಗಳು ಮತ್ತು ಐಸಿಯುಗಳು ಸೇರಿದಂತೆ ರಾಜ್ಯದ ವೈದ್ಯಕೀಯ ಸೌಲಭ್ಯಗಳನ್ನು ಮೌಲ್ಯಮಾಪನ ಮಾಡುತ್ತದೆ. ಕಾರ್ಯಪಡೆಯು ಔಷಧಗಳು ಮತ್ತು ಆಮ್ಲಜನಕದ ಪೂರೈಕೆಯನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ.






