HEALTH TIPS

ವಿದ್ಯುತ್ ವಿಜಿಲೆನ್ಸ್ ವಿಭಾಗದಿಂದ ದಾಳಿ-ವಂಚನೆ ಬೆಳಕಿಗೆ

           ಕಾಸರಗೋಡು: ಜಿಲ್ಲೆಯಲ್ಲಿ2019 ಹಾಗೂ 20ನೇ ಸಾಲಿನ ಎರಡು ವರ್ಷ ಕಾಲಾವಧಿಯಲ್ಲಿ 252 ವಿದ್ಯುತ್ ಕಳವು ಪ್ರಕರಣಗಳನ್ನು ಕೇರಳ ವಿದ್ಯುತ್ ನಿಗಮದ ವಿಜಿಲೆನ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಮೂಲಕ 1.27 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. 

            2021ರಲ್ಲಿ ಮಾರ್ಚ್ ತಿಂಗಳ ವರೆಗೆ ಒಟ್ಟು 95ಪ್ರಕರಣ ದಾಖಲಾಗಿದ್ದು, ಈ ಮೂಲಕ 1.88ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. 2020ನೇ ಸಾಲಿನಲ್ಲಿ ಒಟ್ಟು 71ಪ್ರಕರಣಗಳಲ್ಲಿ 76ಲಕ್ಷ ದಂಡ ವಸೂಲಿ ಮಾಡಲಾಗಿದೆ. ಬಹುತೇಕ ಕಡೆ ವಿದ್ಯುತ್ ಮೀಟರ್ ವಂಚನಾ ಪ್ರಕರಣ ಬೆಳಕಿಗೆ ಬಂದಿದೆ. ಮೀಟರ್‍ಗೆ ಸಾಗುವ ವಿದ್ಯುತ್ ತಂತಿಯನ್ನು ತುಂಡರಿಸಿ ಈ ರೀತಿ ವಂಚನೆಯೆಸಗಲಾಗುತ್ತಿದೆ. ವಿದ್ಯುತ್ ವಿಜಿಲೆನ್ಸ್ ವಿಭಾಗ ರಾತ್ರಿ ವೇಳೆ ದಾಳಿ ಕಾರ್ಯಾಚರಣೆ ನಡೆಸುವ ಮೂಲಕ ವಂಚನೆ ಪತ್ತೆಹಚ್ಚುತ್ತಿರುವುದಾಗಿ ವಿದ್ಯುತ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries