HEALTH TIPS

ಮತ ಎಣಿಕೆ ಕೇಂದ್ರಗಳ ಏಜೆಂಟರ ನೇಮಕ: ಚುನಾವಣೆ ಆಯೋಗದ ಆದೇಶಗಳು

       ಕಾಸರಗೋಡು : ವಿಧಾನಸಭೆ ಚುನಾವಣೆ ಅಂಗವಾಗಿ ನಡೆಯುವ ಮತ ಎಣಿಕೆ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಪ್ರತಿನಿಧಿಯಾಗಿ ಏಜೆಂಟರ ನೇಮಕ ಸಂಬಂಧ ಕಾನೂನು ಪ್ರಕಾರ ಯಾವುದೇ ಅರ್ಹತೆ ತಿಳಿಸಿಲ್ಲ. ಆದರೆ ಅಭ್ಯರ್ಥಿಯ ಬಯಕೆಗೆ ತಕ್ಕಂತೆ ವರ್ತಿಸುವ ನಿಟ್ಟಿನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ, ಪಕ್ವತೆ ಹೊಂದಿರುವ ವ್ಯಕ್ತಿಯನ್ನು ಏಜೆಂಟ್ ಆಗಿ ನೇಮಿಸುವಂತೆ ಚುನಾವಣೆ ಆಯೋಗ ಆದೇಶಿಸಿದೆ. 

             ಸಂರಕ್ಷಣೆ ಸಿಬ್ಬಂದಿಗೆ ಮತ ಎಣಿಕೆ ಕೇಂದ್ರಗಳಲ್ಲಿ ಪ್ರವೇಶಾತಿ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಆಯೋಗದ ಆದೇಶ ಪ್ರಕಾರ ಸದ್ರಿ ಕೇಂದ್ರ ಸಚಿವ, ರಾಜ್ಯ ಸಚಿವ, ಸಂಸದ, ಶಾಸಕರು, ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರುಗಳು, ನಿಗಮಗಳ ಮೇಯರ್ ಗಳು, ನಗರಸಭೆ ಅಧ್ಯಕ್ಷರು, ಜಿಲ್ಲಾ, ಬ್ಲೋಕ್ ಪಂಚಾಯತ್ ಅಧ್ಯಕ್ಷರುಗಳು, ಕೇಂದ್ರ, ರಾಜ್ಯ ಸಾರ್ವಜನಿಕ ಸಂಸ್ಥೆಗಳಲ್ಲಿ ಆಯ್ಕೆಗೊಂಡಿರುವ ಅಧ್ಯಕ್ಷರುಗಳಾಗಿರುವ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸರಕಾರಿ ಸಮಸ್ಥೆಗಳ ಅಧ್ಯಕ್ಷರುಗಳು, ಸರಕಾರಿ ಪ್ಲೀಡರ್, ಅಡೀಶನಲ್ ಸರಕಾರಿ ಪ್ಲೀಡರ್, ಸರಕಾರಿ ಸಿಬ್ಬಂದಿ ಮೊದಲಾದವರು ಏಜೆಂಟರಾಗುವಂತಿಲ್ಲ. ಕೇಂದ್ರ, ರಾಜ್ಯ ಸರಕಾರು ಸಂರಕ್ಷಣೆಗಾಗಿ ನೇಮಿಸಿರುವ ವ್ಯಕ್ತಿಗಳು ಏಜೆಂಟರಾಗಕೂಡದು. 

            ಸಂರಕ್ಷಣೆಗೆ ಒಳಗಾಗಿರುವ ವ್ಯಕ್ತಿಯ ಜೊತೆಗೆ ಸುರಕ್ಷೆ ಸಿಬ್ಬಂದಿ ಮತ ಎಣಿಕೆಯ ಸಭಂಗಣದೊಳಗೆ ಪ್ರವೇಶಿಸುವಂತಿಲ್ಲ. ಸರಕಾರಿ ಸಿಬ್ಬಂದಿ ಏಜೆಂಟರಾದಲ್ಲಿ 3 ತಿಂಗಳ ಸಜೆ ಯಾ ದಂಡ ಅಥವಾ ಎರಡೂ ಶಿಕ್ಷೆ ಅನುಭವಿಸಬೇಕಾದ ಅಪರಾಧವಾಗುತ್ತದೆ. 

         ಮತ ಎಣಿಕೆ ಕರ್ತವ್ಯದ ಎ.ಆರ್.ಒ. ಗಳಿಗೆ ತರಬೇತಿ 

ಕಾಸರಗೋಡು, ಏ.27: ಮತ ಎಣಿಕೆ ಕರ್ತವ್ಯದ ಎ.ಆರ್.ಒ. ಗಳಿಗೆ ತರಬೇತಿ ಜಿಲ್ಲಾಧಿಕಾರಿ ಕಚೇರಿ ಸಭಂಗಣದಲ್ಲಿ ಜರುಗಿತು. ಚುನಾವಣೆ ಮಾಸ್ಟರ್ ತರಬೇತುದಾರರು ತರಗತಿ ನಡೆಸಿದರು. ಮತಗಣನೆಯ ವಿವಿಧ ಹಂತಗಳ ಕುರಿತು ಇಲ್ಲಿ ಮಾಹಿತಿ ನೀಡಲಾಯಿತು. ನೂತನವಾಗಿ ನೇಮಕಗೊಂಡಿರುವ ಮತಗಣನೆ ಸೂಪರ್ ವ್ಯಸರ್ ಗಳಿಗೆ, ಈ ಹಿಂದಿನ ತರಬೇತಿಗಳಲ್ಲಿ ಭಾಗವಹಿಸಲು ಸಾದ್ಯವಾಗದೇ ಇರುವ ಮತ ಗಣನೆ ಸಹಾಯಕರು, ಮೈಕ್ರೋ ಒಬ್ಸರ್ ವರ್ ಗಳು  ಮೊದಲಾದವರಿಗೆ ಬುಧವಾರ (ಏ.28) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತರಬೇತಿ ನಡೆಯಲಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries