HEALTH TIPS

ಫಸ್ಟ್ ಬೆಲ್ 2.0; ಪ್ರಾಯೋಗಿಕ ತರಗತಿಗಳ ವೇಳಾಪಟ್ಟಿ ಪ್ರಕಟ

                 ತಿರುವನಂತಪುರ: ಕೈಟ್ ಫಸ್ಟ್‍ಬೆಲ್ 2.0 ಡಿಜಿಟಲ್ ತರಗತಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದು ನಾಳೆಯಿಂದ(ಜೂನ್ 1) ಕೈಟ್ ವಿಕ್ಟರ್ಸ್ ಮೂಲಕ ಪ್ರಾಯೋಗಿಕ ಆಧಾರದ ಮೇಲೆ ಪ್ರಸಾರ ಮಾಡಲಾಗುವುದು. ಅಂಗನವಾಡಿ ಮಕ್ಕಳಿಗೆ 'ಕಿಲಿಕಾಂಚಲ್' ಜೂನ್ 1 ರಿಂದ 4 ರವರೆಗೆ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ. ಇದನ್ನು ಜೂನ್ 7 ರಿಂದ 10 ರವರೆಗೆ ಮರು ಪ್ರಸಾರ ಮಾಡಲಾಗುತ್ತದೆ. ಪ್ಲಸ್ ಟು ತರಗತಿಗಳ ಮೊದಲ ಪ್ರಯೋಗ ಜೂನ್ 7-11 ರ ವರೆಗೆ  ಇರಲಿದೆ. ಜೊತೆಗೆ ದಿನಕ್ಕೆ ಐದು ತರಗತಿಗಳು ಬೆಳಿಗ್ಗೆ 8:30 ರಿಂದ 10 ರವರೆಗೆ ಮತ್ತು ಸಂಜೆ 5 ರಿಂದ 6 ರವರೆಗೆ ಇರುತ್ತದೆ. ಜೂನ್ 14 ರಿಂದ 18 ರವರೆಗೆ ತರಗತಿಗಳನ್ನು ಅದೇ ಕ್ರಮದಲ್ಲಿ ಮರು ಪ್ರಸಾರ ಮಾಡಲಾಗುತ್ತದೆ.

                 ಒಂದರಿಂದ ಹತ್ತನೇ ತರಗತಿಗಳ ಮೊದಲ ಪ್ರಯೋಗ ಜೂನ್ ಎರಡರಿಂದ ನಾಲ್ಕು ರವರೆಗೆ ನಡೆಯಲಿದೆ. ಅದೇ ತರಗತಿಗಳನ್ನು ಜೂನ್ 7 ರಿಂದ 9 ಮತ್ತು ಜೂನ್ 10 ರಿಂದ 12 ರವರೆಗೆ ಮರು ಪ್ರಸಾರ ಮಾಡಲಾಗುತ್ತದೆ. ಹತ್ತನೇ ತರಗತಿಯ ಮೂರು ತರಗತಿಗಳು ಮಧ್ಯಾಹ್ನ 12.00 ರಿಂದ 01.30 ರವರೆಗೆ ಇರಲಿದೆ. ಒಂದನೇ ತರಗತಿಯವರಿಗೆ ಬೆಳಿಗ್ಗೆ 10 ಕ್ಕೆ, ಎರಡನೇ ತರಗತಿಗೆ 11 ರಿಂದ,  ಮೂರನೇ ತರಗತಿಯವರಿಗೆ 11.30 ರಿಂದ ಫಸ್ಟ್ ಬೆಲ್  2.ಒ ಡಿಜಿಟಲ್ ತರಗತಿಗಳು ನಡೆಯಲಿವೆ. ನಾಲ್ಲನೇ ತರಗತಿಗೆ ಮಧ್ಯಾಹ್ನ (ಮಧ್ಯಾಹ್ನ 1.30), ಐದನೇ ತರಗತಿಗೆ (ಮಧ್ಯಾಹ್ನ 2), ಆರನೇ ತರಗತಿಗೆ (2.30), ಏಳು (03.00) ಮತ್ತು ಎಂಟು (3.30)ಕ್ಕೆ ತರಗತಿ ಹೊಂದಿಸಲಾಗಿದೆ. ಒಂಬತ್ತನೇ ತರಗತಿಗೆ ಸಂಜೆ ನಾಲ್ಕು ರಿಂದ ಐದು ರವರೆಗೆ ಎರಡು ತರಗತಿಗಳು ನಡೆಯಲಿವೆ.

            ಪ್ರಾಯೋಗಿಕ ತರಗತಿಗಳ  ಅನುಭವದ ಆಧಾರದ ಮೇಲೆ ಮುಂದಿನ ತರಗತಿಗಳು ಮತ್ತು ಅಂತಿಮ ವೇಳಾಪಟ್ಟಿಯನ್ನು ನಿರ್ಧರಿಸಲಾಗುವುದು ಎಂದು ಕೈಟ್ ಸಿಇಒ ಕೆ.ಅನ್ವರ್ ಸಾದತ್ ಹೇಳಿರುವರು. ಮಕ್ಕಳ ಅನುಕೂಲಕ್ಕಾಗಿ, ತರಗತಿಗಳನ್ನು ನಂತರ ಜಿiಡಿsಣbeಟಟ.ಞiಣe.ಞeಡಿಚಿಟಚಿ.gov.iಟಿ ನಲ್ಲಿ ವೀಕ್ಷಿಸಬಹುದು. ಕೈಟ್ ವಿಕ್ಟರ್‍ನ ಲೈವ್ ಲಿಂಕ್ ಮತ್ತು ವೇಳಾಪಟ್ಟಿ ಒಂದೇ ಸೈಟ್‍ನಲ್ಲಿ ಲಭ್ಯವಿರುತ್ತದೆ.  


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries