HEALTH TIPS

ರಾಷ್ಟ್ರ ವಿರೋಧಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲ; ಇನ್ನು ಏಷ್ಯಾನೆಟ್ ಜೊತೆ ಸಹಕರಿಸುವುದಿಲ್ಲ: ಬಿಜೆಪಿ

     

                  ಕೊಚ್ಚಿ: ಏಷ್ಯಾನೆಟ್ ಜೊತೆ ಸಹಕರಿಸದಿರುವ ನೀತಿಯನ್ನು ಬಿಜೆಪಿ ಸ್ಪಷ್ಟಪಡಿಸಿದೆ. ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ವರದಿ ಮಾಡುವುದಿಲ್ಲ ಮತ್ತು ಬಂಗಾಳ ಪಾಕಿಸ್ತಾನದಲ್ಲಿದೆ ಎಂಬ ಚಾನೆಲ್‍ನ ದುರಹಂಕಾರವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ಫೇಸ್‍ಬುಕ್ ಪೋಸ್ಟ್‍ನಲ್ಲಿ ತಿಳಿಸಿದೆ.


              ಸಮಕಾಲೀನ ಘಟನೆಗಳು ಕಳೆದ ಕೆಲವು ವರ್ಷಗಳಿಂದ ಏಷ್ಯನೆಟ್ ನ್ಯೂಸ್‍ನ ರಾಷ್ಟ್ರ ವಿರೋಧಿ ವರ್ತನೆ ತನ್ನ ಎಲ್ಲ ಗಡಿಗಳನ್ನು ಉಲ್ಲಂಘಿಸಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ಬಂಗಾಳ ಭಾರತದಲ್ಲಿಲ್ಲ ಮತ್ತು ಗ್ಯಾಂಗ್‍ಗಳ ಆಕ್ರಮಣದ ಸಾವು ಸುದ್ದಿಯಾಗುವುದಿಲ್ಲ.  ನೀವು ಏನನ್ನು ನೋಡಬೇಕು ಎಂದು ಹೇರುವ ದುರಹಂಕಾರವನ್ನು ಕ್ಷಣಿಕ ಪ್ರತಿಕ್ರಿಯೆಯಾಗಿ ನೋಡಲಾಗುವುದಿಲ್ಲ. ದೇಶದ ಹಿತಾಸಕ್ತಿಗೆ ಅಷ್ಟೊಂದು ಹಾನಿಕಾರಕವಾದ ಏಷ್ಯನೆಟ್ ಜೊತೆ ಬಿಜೆಪಿ ಅಥವಾ ಇತರ ರಾಷ್ಟ್ರೀಯ ಚಳುವಳಿಗಳು ಸಹಕರಿಸಲು ಸಾಧ್ಯವಿಲ್ಲ. ಕಾಲಕಾಲಕ್ಕೆ, ಏಷ್ಯನೆಟ್ ಸುದ್ದಿ ಮತ್ತು ಸುದ್ದಿ ಕಾರ್ಯಕ್ರಮಗಳಲ್ಲಿ ಬಿಜೆಪಿ ಮತ್ತು ಇತರ ರಾಷ್ಟ್ರೀಯ ಚಳುವಳಿಗಳನ್ನು ಅವಮಾನಿಸಿದೆ ಅಪಹಾಸ್ಯ ಮಾಡುತ್ತಲೇ ಇದೆ. ಆದ್ದರಿಂದ ಭಾರತೀಯ ಜನತಾ ಪಕ್ಷದ ಕೇರಳ ಘಟಕವು ಏಷ್ಯಾನೆಟ್ ಜೊತೆ ಅಸಹಕಾರ ನೀಡಲು ನಿರ್ಧರಿಸಿದೆ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.

                  ಏಷ್ಯನೆಟ್ ನ್ಯೂಸ್ ಮಾಡಿದ ರಾಷ್ಟ್ರ ವಿರೋಧಿ ಮತ್ತು ಅಮಾನವೀಯ ಹೇಳಿಕೆಗಳನ್ನು ವಿರೋಧಿಸಿ ಹಿಂದೂ ಐಕ್ಯ ವೇದಿ ಮೇ 12 ರ ಬುಧವಾರ ಸಂಜೆ 6 ಗಂಟೆಗೆ ಮನೆ-ಮನೆಗೆ ಪ್ರತಿಭಟನೆ ನಡೆಸಲಿದೆ. 

           ಬಂಗಾಳದಲ್ಲಿ ಹಿಂಸಾಚಾರ ಏಕೆ ವರದಿಯಾಗುತ್ತಿಲ್ಲ ಎಂದು ಕೇಳಲು ಏಷ್ಯಾನೆಟ್ ನ್ಯೂಸ್‍ಗೆ ಕರೆ ಮಾಡಿದ ಕೊಟ್ಟಾಯಂ ಯುವತಿಯೊಬ್ಬಳನ್ನು ಸಂಘ ಪರಿವಾರ್ ಅನುಯಾಯಿಗಳು ಬಂಗಾಳದಲ್ಲಿ ಹಲ್ಲೆ ಮಾಡಿ ಕೊಂದಿರುವರು.  ಈ ಸುದ್ದಿಯನ್ನು ಚಾನೆಲಲ್ಲಿ ಬಿತ್ತರಿಸಲು ಮನಸ್ಸಿಲ್ಲ ಎಂದು ಹೇಳಿತ್ತು.

               ಬಂಗಾಳದ ಕೆಲವು ಆರ್ ಎಸ್ ಎಸ್ ಕಾರ್ಯಕರ್ತರನ್ನು ಥಳಿಸಿದ್ದಕ್ಕಾಗಿ ನಾವು ಇಲ್ಲಿ ಗಲಾಟೆ ಮಾಡುವುದು ಸರಿಯೇ ಎಂದು ವರದಿಗಾರ ಕೇಳಿದ್ದ. ಇದನ್ನು ಕೇಳಿದ ಯುವತಿ ಬಂಗಾಳದ ಜನರು ಕೂಡ ಭಾರತೀಯರೇ ಎಂದು ಕೇಳಿದಾಗ ಬಂಗಾಳದಲ್ಲಿರುವವರು ಭಾರತದಲ್ಲಿ ಇಲ್ಲ. ಅವರು ಪಾಕಿಸ್ತಾನದಲ್ಲಿದ್ದಾರೆ. ನಮಗೆ ಈಗ ಸುದ್ದಿ ನೀಡುವ ಇರಾದೆಯೂ ಇಲ್ಲ. ಬೇಕಿದ್ದವರು ಮಾತ್ರ  ಏಷ್ಯನೆಟ್ ನ್ಯೂಸ್ ವೀಕ್ಷಿಸಬಹುದು ಎಂದು ವರದಿಗಾರ ಉತ್ತರಿಸಿದ್ದನು.

                        ಇವರಿಬ್ಬರ ನಡುವಿನ ದೂರವಾಣಿ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries